ಕ್ರೀಡೆ

ಅರ್ಜುನ ಪ್ರಶಸ್ತಿ: ಕರ್ನಾಟಕದ ಗಿರೀಶ್, ಮಮತಾ ಶಿಫಾರಸ್ಸು

ಅರ್ಜುನ ಪ್ರಶಸ್ತಿ: ಕರ್ನಾಟಕದ ಗಿರೀಶ್, ಮಮತಾ ಶಿಫಾರಸ್ಸು
Published On :

ನವದೆಹಲಿ: ಪ್ರಸಕ್ತ ಸಾಲಿನ ಅರ್ಜುನ ಪ್ರಶಸ್ತಿಗೆ 15 ಅರ್ಹ ಕ್ರೀಡಾಪಟುಗಳ ಹೆಸರನ್ನು ಕೇಂದ್ರ ಸರ್ಕಾರಕ್ಕೆ ಆಯ್ಕೆ ಸಮಿತಿ ಮಂಗಳವಾರ ಶಿಫಾರಸ್ಸು ಮಾಡಿದೆ.

ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ಕ್ರೀಡಾಪಟುಗಳಿಗೆ ನೀಡಲಾಗುವ ಅರ್ಜುನ ಪ್ರಶಸ್ತಿ ಪಟ್ಟಿಯಲ್ಲಿ ಕರ್ನಾಟಕದ ಹೆಚ್.ಎನ್ ಗಿರೀಶ್(ಪ್ಯಾರಾಲಿಂಪಿಕ್ಸ್) ಹಾಗೂ ಮಮತಾ ಪೂಜಾರಿ(ಕಬ್ಬಡಿ) ಅವರ ಹೆಸರು ಕೇಳಿಬಂದಿದೆ.

ಭಾರತೀಯ ಮಹಿಳಾ ಕಬಡ್ಡಿ ತಂಡದ ನಾಯಕಿಯಾಗಿರುವ ಮಮತಾ ಪೂಜಾರಿ ಅವರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಕಳೆದ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತಕ್ಕೆ ಬೆಳ್ಳಿ ಪದಕ ತಂದುಕೊಟ್ಟಿದ್ದ ಹಾಸನದ ಪ್ರತಿಭೆ ಹೆಚ್.ಎನ್ ಗಿರೀಶ್.

2014ರ ಸಾಲಿನ ಅರ್ಜುನ ಪ್ರಶಸ್ತಿಗೆ ಅರ್ಹ ಕ್ರೀಡಾಪಟುಗಳ ಆಯ್ಕೆಗೆ ಸಮಿತಿಯೊಂದನ್ನು ರಚಿಸಲಾಗಿತ್ತು. ಆ ಸಮಿತಿಯ ಅಧ್ಯಕ್ಷರನ್ನಾಗಿ ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಅವರನ್ನು ನೇಮಿಸಲಾಗಿತ್ತು. ಅದರಂತೆ ಇಂದು ಕೇಂದ್ರ ಸರ್ಕಾರಕ್ಕೆ 15 ಅರ್ಹ ಕ್ರೀಡಾಪಟುಗಳ ಹೆಸರನ್ನು ಸಮಿತಿ ಶಿಫಾರಸ್ಸು ಮಾಡಿದೆ.

ಪ್ರಸಕ್ತ ಸಾಲಿನಲ್ಲಿ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಪ್ರದಾನ ಇಲ್ಲ

ಶಿಫಾರಸ್ಸು ಪಟ್ಟಿಯಲ್ಲಿರುವ ಇತರ ಕ್ರೀಡಾಪಟುಗಳ ಹೆಸರುಗಳು ಇಂತಿವೆ:
ಹೆಚ್.ಎನ್. ಗಿರೀಶ್ (ಪ್ಯಾರಾಲಿಂಪಿಕ್ಸ್)
ಮಮತಾ ಪೂಜಾರಿ (ಕಬ್ಬಡಿ)
ರವಿಚಂದ್ರನ್ ಅಶ್ವಿನ್(ಕ್ರಿಕೆಟ್)
ಗೀತು ಅನು ಅನ್‌ಜೋಸ್(ಬ್ಯಾಸ್ಕೆಟ್ ಬಾಲ್)
ಟಿಂಟು ಲುಕಾ(ಅಥ್ಲೆಟಿಕ್ಸ್)
ವಿ.ಡಿಜು(ಬ್ಯಾಡ್ಮಿಂಟನ್)
ಅಖಿಲೇಶ್ ವರ್ಮಾ(ಅರ್ಚರಿ)
ಸುನಿಲ್ ರಾಣಾ (ವೇಟ್ ಲಿಫ್ಟಿಂಗ್)
ರೇಣುಪಾಲ ಚಾನು (ವೇಟ್ ಲಿಫ್ಟಿಂಗ್)
ಟಾಂ ಜೋಸೆಫ್(ವಾಲಿಬಾಲ್)
ಅನಕ ಅಲಕಮಾಣ್ಯ(ಸ್ಕ್ವಾಷ್)
ಹೀನಾ ಸಿದ್ದು(ಶೂಟಿಂಗ್)
ಸಾಜಿ ಥಾಮಸ್(ರೋಯಿಂಗ್)
ಜೈಭಗವಾನ್(ಕುಸ್ತಿ)
ಅನೀರ್‌ಬಾಲ್ ಲಹೇರಿ(ಗಾಲ್ಫ್)

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.