ಕ್ಯಾಪ್ಟೆನ್ಸಿ ತೊರೆಯುವ ಸುಳಿವು ನೀಡಿದ ಧೋನಿ

ಓವಲ್: ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ತಮ್ಮ ನಾಯಕ ಸ್ಥಾನ ತೊರೆಯುವ ಸುಳಿವು ನೀಡಿದ್ದಾರೆ.
ಓವಲ್ನಲ್ಲಿ ನಡೆದ 5ನೇ ಟೆಸ್ಟ್ನಲ್ಲಿಯೂ ಭಾರತ ತಂಡ, ತನ್ನ ಕಳಪೆ ಬ್ಯಾಟಿಂಗ್ನಿಂದಾಗಿ ಇಂಗ್ಲೆಂಡ್ ವಿರುದ್ಧ ಇನ್ನಿಂಗ್ಸ್ ಮತ್ತು 244ರನ್ಗಳ ದಯನೀಯ ಸೋಲುಕಂಡಿತ್ತು. 40 ವರ್ಷಗಳಿಂದ ಭಾರತ ತಂಡ ಇಂತಹ ಸೋಲು ಕಂಡಿರಲಿಲ್ಲ. ಹೀಗಾಗಿ ಪ್ರಸಕ್ತ ಇಂಗ್ಲೆಂಡ್ ಸರಣಿಯ ಸೋಲು ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಆತ್ಮಬಲವನ್ನು ಕುಗ್ಗಿಸಿರುವುದರಲ್ಲಿ ಎರಡು ಮಾತಿಲ್ಲ. ಇದೇ ಕಾರಣದಿಂದ ಮಹೇಂದ್ರ ಸಿಂಗ್ ಧೋನಿ ಅವರು ತಮ್ಮ ನಾಯಕ ಸ್ಥಾನವನ್ನು ತೊರೆಯಲು ಇಚ್ಛಿಸಿದ್ದಾರೆ.
ಮೂಲಗಳ ಪ್ರಕಾರ ಕ್ರಿಕೆಟ್ನ ಮೂರು ಮಾದರಿ (ಏಕದಿನ, ಟೆಸ್ಟ್ ಮತ್ತು ಟಿ-20)ಕ್ರಿಕೆಟ್ನಲ್ಲಿ ನಾಯಕರಾಗಿರುವ ಧೋನಿ, ಯಾವುದಾದರೊಂದು ಕ್ರಿಕೆಟ್ ಮಾದರಿಯ ನಾಯಕ ಸ್ಥಾನವನ್ನು ತ್ಯಜಿಸುವ ಮನಸ್ಸು ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ನಲ್ಲಿ 2015ರಲ್ಲಿ ನಡೆಯಲಿರುವ ಏಕದಿನ ಕ್ರಿಕೆಟ್ ವಿಶ್ವಕಪ್ ಸರಣಿಯ ಮೇಲೆ ಕಣ್ಣಿಟ್ಟಿರುವ ಮಹೇಂದ್ರ ಸಿಂಗ್ ಧೋನಿ ಏಕದಿನ ಕ್ರಿಕೆಟ್ನ ನಾಯಕ ಸ್ಥಾನದಿಂದ ಕೆಳಗಿಳಿಯುವುದು ಅಸಾಧ್ಯದ ಮಾತು. ಟಿ-20 ಪಂದ್ಯಾವಳಿ ಕೂಡ ಅವರ ಮೆಚ್ಚಿನ ಕ್ರಿಕೆಟ್ ಮಾದರಿಯಾಗಿರುವುದರಿಂದ ಟೆಸ್ಟ್ ಕ್ರಿಕೆಟ್ನ ನಾಯಕ ಸ್ಥಾನದಿಂದ ಧೋನಿ ಕೆಳಗಿಳಿಯುವ ಸಾಧ್ಯತೆ ಇದೆ ಕ್ರಿಕೆಟ್ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಓವಲ್ ಪಂದ್ಯದ ಸೋಲಿನ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಧೋನಿ, 'ಪಂದ್ಯ ಮತ್ತು ಸರಣಿಯ ಸೋಲಿಗೆ ಬ್ಯಾಟಿಂಗ್ ವೈಫಲ್ಯವೇ ಕಾರಣ. ಆರಂಭಿಕ ಬ್ಯಾಟ್ಸಮನ್ಗಳು ಮತ್ತು ತಂಡದ ಪ್ರಮುಖ ಬ್ಯಾಟ್ಸಮನ್ಗಳಿಂದ ನಿರೀಕ್ಷಿತ ಪ್ರದರ್ಶನ ಹೊರಬರಲಿಲ್ಲ. ನಮ್ಮ ಕೈಲಾದ ಪ್ರಯತ್ನವನ್ನು ನಾವು ಮಾಡಿದೆವು. ಆದರೆ ಇಂಗ್ಲೆಂಡ್ನ ಬೌನ್ಸಿ ಟ್ರ್ಯಾಕ್ಗಳು ನಮ್ಮ ಯೋಜನೆಯನ್ನು ವಿಫಲಗೊಳಿಸಿದವು. ಹೀಗಾಗಿ ನಾವು ಸರಣಿ ಸೋಲುವಂತಾಯಿತು'.
'ಸರಣಿ ಸೋಲು ನಮ್ಮಲ್ಲಿನ ವಿಶ್ವಾಸ ಕುಂದುವಂತೆ ಮಾಡಿದೆ. ಪ್ರಸಕ್ತ ಇಂಗ್ಲೆಂಡ್ ಸರಣಿಯಿಂದ ಯುವ ಆಟಗಾರರು ಸಾಕಷ್ಟು ಕಲಿಯಬೇಕಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ಅವರು ತಂಡವನ್ನು ಉತ್ತಮವಾಗಿ ಮುನ್ನೆಡೆಸಿಕೊಂಡು ಹೋಗುತ್ತಾರೆ ಎಂಬ ನಂಬಿಕೆ ಇದೆ' ಎಂದು ಹೇಳಿದ್ದಾರೆ. ಆ ಮೂಲಕ ತಾವು ನಾಯಕ ಸ್ಥಾನದಿಂದ ಕೆಳಗಿಳಿಯುತ್ತಿರುವುದಾಗಿ ಧೋನಿ ಸುಳಿವು ನೀಡಿದ್ದಾರೆ. ಇದೇ ವಿಚಾರವಾಗಿ ಪತ್ರಕರ್ತರು ಪ್ರಶ್ನಿಸಿದಾಗ ನಗುತ್ತಲೇ ಉತ್ತರಿಸಿದ ಧೋನಿ ಕಾದು ನೋಡಿ ಎಂದಷ್ಟೇ ಹೇಳಿದರು.
ಒಟ್ಟಾರೆ ಪ್ರಸಕ್ತ ಸಾಲಿನ ಕ್ರಿಕೆಟ್ನ ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲಿರುವ ಟೀಂ ಇಂಡಿಯಾಗೆ ಆತ್ಮವಿಶ್ವಾಸದ ಅವಶ್ಯಕತೆ ಇದ್ದು, ಒಂದು ಗೆಲುವು ಮಾತ್ರ ಅದನ್ನು ನೀಡಲು ಸಾಧ್ಯ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


