ಯುಎಸ್ ಓಪನ್: ಅರ್ಹತಾ ಸುತ್ತಿನಲ್ಲೇ ಭಾರತದ ಸಿಂಗಲ್ಸ್ ಹೋರಾಟ ಮುಕ್ತಾಯ
ನ್ಯೂಯಾರ್ಕ್: ವಿಶ್ವದ ಪ್ರತಿಷ್ಠಿತ ಟೆನಿಸ್ ಗ್ರಾನ್ ಸ್ಲ್ಯಾಮ್ ಯುಎಸ್ ಓಪನ್ ಟೆನಿಸ್ ಚಾಂಪಿಯನ್ಶಿಪ್ನ ಸಿಂಗಲ್ಸ್ನಲ್ಲಿ ಈ ಬಾರಿ ಭಾರತದ ಸ್ಫರ್ಧಾಳುಗಳೇ ಇಲ್ಲ. ಕಾರಣ, ಅರ್ಹತಾ ಸುತ್ತಿನ ಸಿಂಗಲ್ಸ್ ವಿಭಾಗದಲ್ಲಿ ಭಾಗವಹಿಸಿದ್ದ ಭಾರತದ ಎಲ್ಲ ಆಟಗಾರರು ದ್ವಿತೀಯ ಸುತ್ತಿನಲ್ಲೇ ತಮ್ಮ ಹೋರಾಟವನ್ನು ಅಂತ್ಯ ಗೊಳಿಸಿದ್ದಾರೆ.
ಶುಕ್ರವಾರ ಯುಕಿ ಭಾಂಬ್ರಿ ಮತ್ತು ಸನಮ್ ಸಿಂಗ್ ಅವರು ಪುರುಷರು ಸಿಂಗಲ್ಸ್ ವಿಭಾಗದಲ್ಲಿ ಸೋಲುವ ಮೂಲಕ ಸಿಂಗಲ್ಸ್ನಲ್ಲಿ ಭಾರತದ ಸವಾಲು ಮುಕ್ತಾಯಗೊಂಡಿತು.
ಗಾಯದ ಕಾರಣ ಕಳೆದ ಐದು ತಿಂಗಳಿಂದ ಸ್ಪರ್ಧೆಯಿಂದ ಹೊರಗುಳಿದಿದ್ದ ಯುಕಿ ಭಾಂಬ್ರಿ ಅವರು, ದ್ವಿತೀಯ ಸುತ್ತಿನ ಪಂದ್ಯದಲ್ಲಿ ಐರ್ಲೆಂಡ್ನ ಜೇಮ್ಸ್ ಮ್ಯಾಗೀ ವಿರುದ್ಧ 7-5, 2-6. 5-7 ಸೆಟ್ಗಳ ಅಂತರದಿಂದ ಪರಾಭವಗೊಳಿಸಿದರು. ಇನ್ನು ಸನಮ್ ಸಿಂಗ್ ಅವರು ಜರ್ಮನಿಯ ಆ್ಯಂಡ್ರೆ ಸಾ ಬೆಕ್ ಅವರನ್ನು 7್ಛ5, 6-7(3), 3-6 ಸೆಟ್ಗಳಿಂದ ಪರಾಭವಗೊಳಿಸದರು.
ಸಿಂಗಲ್ಸ್ ವಿಭಾಗದಲ್ಲಿ ದೇಶದ ಅಗ್ರ, ಆಟಗಾರ ಸೋಮ್ದೇವ್ ದೇವ್ವರ್ಮನ್ ಅವರು, ಮೊದಲ ಸುತ್ತಿನಲ್ಲೇ ಸೋತು ಪಂದ್ಯವಳಿಯಿಂದ ನಿರ್ಗಮಿಸಿದ್ದಾರೆ. ಫೆಬ್ರವರಿಯಲ್ಲಿ ಡೆಲ್ಲಿ ಓಪನ್ ಗೆದ್ದ ನಂತರ ಅವರು ಗೆಲುವಿನ ಹಾದಿ ಕಾಣುವಲ್ಲಿ ತುಂಬಾ ಕಠಿಣ ಸಮಸ್ಯೆ ಎದುರಿಸುತ್ತಿದ್ದಾರೆ.
ಶುಕ್ರವಾರದ ಪಂದ್ಯದಲ್ಲಿ ಯುಕಿ ಅವರು ತಮಗೆ ದೊರತೆ 13 ಅವಕಾಶಗಳಲ್ಲಿ ಮೂರನ್ನು ಮಾತ್ರ ಸದುಪಯೋಗಪಡಿಸಿಕೊಂಡರು. ಹೀಗಾಗಿ, ಐರ್ಲೆಂಡ್ ಆಟಗಾರ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾದರು. ಇನ್ನೊಂದು ಪಂದ್ಯದಲ್ಲಿ 9 ಬಾರಿ ತಪ್ಪುಗಳನ್ನು ಎಸಗಿದ್ದು ಸನಮ್ ಸಿಂಗ್ ಸೋಲಿಗೆ ಪ್ರಮುಖ ಕಾರಣವಾಗಿ ಪರಿಣಮಿಸಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

