
ಬೆಂಗಳೂರು: ಹಾಲಿ ರಣಜಿ ಚಾಂಪಿಯನ್ಸ್ ಕರ್ನಾಟಕ ತಂಡ ತಮಿಳುನಾಡು ವಿರುದ್ಧ 285 ರನ್‌ಗಳ ಭರ್ಜರಿ ಜಯ ದಾಖಲಿಸುವ ಮೂಲಕ ರಣಜಿ ಟ್ರೋಫಿಯಲ್ಲಿ ಶುಭಾರಂಭ ಮಾಡಿದೆ.
ಗೆಲಲ್ಲು 368 ರನ್‌ಗಳ ಟಾರ್ಗೆಟ್ ಪಡೆದಿದ್ದ ತಮಿಳುನಾಡು ತಂಡವನ್ನು ಕರ್ನಾಟಕ ಕೇವಲ 82 ರನ್ನಿಗೆ ಆಲೌಟ್ ಮಾಡಿತ್ತು. ಇದರೊಂದಿಗೆ ಕರ್ನಾಟಕ 285 ರನ್‌ಗಳ ಅಂತರದ ಜಯ ಗಳಿಸಿದೆ.
ಎರಡು ಇನಿಂಗ್ಸ್‌ನಲ್ಲಿ ತಲಾ ನಾಲ್ಕು ವಿಕೆಟ್ ಪಡೆದ ಶ್ರೀನಾಥ್ ಅರವಿಂದ್ ಕರ್ನಾಟಕದ ಗೆಲುವಿಗೆ ಕಾರಣರಾದರು.
ಮನೀಶ್ ಪಾಂಡೆ ಮತ್ತು ಸ್ಟುವರ್ಟ್ ಬಿನ್ನಿ ಅವರ ಸ್ಫೋಟಕ ಆಟ ತಮಿಳುನಾಡಿಗೆ ಬೃಹತ್ ಮೊತ್ತ ನೀಡಲು ಸಹಾಯಕವಾಯಿತು. 4 ವಿಕೆಟ್ ನಷ್ಟಕ್ಕೆ 247 ರನ್‌ಗಳಿದ್ದ ಕರ್ನಾಟಕ ಎರಡನೇ ಇನ್ನಿಂಗ್ಸ್ ಆರಂಭಿಸಿದ ಮನೀಶ್ ಪಾಂಡೆ ಮತ್ತು ಸ್ಟುವರ್ಟ್ ಬಿನ್ನಿ 17.4 ಓವರ್‌ಗಳಲ್ಲಿ 118 ರನ್ ಸೇರಿಸಿದರು. ಸ್ಕೋರ್ 351 ರನ್ ಆಗಿದ್ದಾಗ ಬಿನ್ನಿ ಔಟಾಗುತ್ತಿದ್ದಂತೆ ಕರ್ನಾಟಕ ತನ್ನ ಎರಡನೇ ಇನ್ನಿಂಗ್ಸ್‌ನ ಡಿಕ್ಲೇರ್ ಮಾಡಿಕೊಂಡಿತು.
ಸ್ಕೋರ್ ವಿವರ
ಕರ್ನಾಟಕ ಮೊದಲ ಇನ್ನಿಂಗ್ಸ್ 74.2 ಓವರ್ 290 ರನ್ ಆಲೌಟ್
ತಮಿಳುನಾಡು ಮೊದಲ ಇನ್ನಿಂಗ್ಸ್ 120.4 ಓವರ್ 274 ರನ್ ಆಲೌಟ್
ಕರ್ನಾಟಕ ಎರಡನೇ ಇನ್ನಿಂಗ್ಸ್ 75.5 ಓವರ್ 351/5
(ಮಾಯಾಂಕ್ ಅಗರ್ವಾಲ್ 80, ಸ್ಟುವರ್ಟ್ ಬಿನ್ನಿ 77, ರಾಬಿನ್ ಉತ್ತಪ್ಪ 76, ಮನೀಶ್ ಪಾಂಡೆ ಅಜೇಯ 56, ಕರುಣ್ ನಾಯರ್ 35 ರನ್ - ಎಂ.ರಂಗರಾಜನ್ 96/2)
ತಮಿಳುನಾಡು ಎರಡನೇ ಇನ್ನಿಂಗ್ಸ್ 34.3 ಓವರ್ 82 ರನ್ ಆಲೌಟ್
(ಅಭಿನವ್ ಮುಕುಂದ್ 16, ಆರ್.ಪ್ರಸನ್ನ 15 ರನ್ - ಶ್ರೀನಾಥ್ ಅರವಿಂದ್ 9/4, ವಿನಯ್'ಕುಮಾರ್ 20/3)
Advertisement