

ನವದೆಹಲಿ: ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ, ಪಾಕಿಸ್ತಾನದ ಕ್ರಿಕೆಟ್ ತಾರೆ ಶೋಯೆಬ್ ಮಲಿಕ್ ಜೋಡಿ ಶೀಘ್ರದಲ್ಲೇ ಮುರಿದುಬೀಳುವ ಲಕ್ಷಣಗಳು ಗೋಚರಿಸಿವೆ. ಸಾನಿಯಾ ಮಿರ್ಜಾ ಅವರನಡೆ, ಸಾಮಾಜಿಕ ಜಾಲತಾಣಗಳಲ್ಲಿನ ಕೆಲವು ಚಟುವಟಿಕೆಗಳು ಈ ಮಾತನ್ನು ಪುಷ್ಟೀಕರಿಸಿವೆ.
ಏನು ಕಾರಣ?
ಇತ್ತೀಚೆಗೆ ಸಾನಿಯಾ ಮೀರ್ಜಾ ಅವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿದ್ದ ಅವರಿಬ್ಬರ ಜೋಡಿ ಚಿತ್ರಗಳನ್ನು ಕಿತ್ತುಹಾಕಿರುವುದು ಎಲ್ಲರಲ್ಲೂ ಅನುಮಾನ ಹುಟ್ಟಿಸಿದೆ. ಕೆಲವಾರು ದಿನಗಳ ಹಿಂದೆ, ಶೋಯೆಬ್ ಜೊತೆಗಿನ ಕೆಲವು ರೊಮ್ಯಾಂಟಿಕ್ ಫೋಟೋಗಳನ್ನು ಸಾನಿಯಾ ತಮ್ಮ ಖಾತೆಯಲ್ಲಿ ಹಾಕಿಕೊಂಡಿದ್ದರು. ಆದರೆ, ಇತ್ತೀಚೆಗೆ ಅವುಗಳನ್ನು ತಮ್ಮ ಖಾತೆಯಿಂದ ಡಿಲೀಟ್ ಮಾಡಿದ್ದಾರೆ. ಈ ಬಗ್ಗೆ ಶೋಯೆಬ್ ಅವರನ್ನು ಕೇಳಿದರೆ, 'ಈ ಪ್ರಶ್ನೆಯನ್ನು ಸಾನಿಯಾ ಅವರಿಗೇ ಕೇಳಿ' ಎಂದಿದ್ದಾರೆ.
ಅಷ್ಟೇ ಅಲ್ಲ, ಇತ್ತೀಚೆಗೆ, ಬಕ್ರೀದ್ ಹಬ್ಬವನ್ನು ಅವರು ಶೋಯೆಬ್ ಜೊತೆ ಆಚರಿಸಲೇ ಇಲ್ಲ. ಹಬ್ಬದ ದಿನ ಅವರು ಹೈದ್ರಾಬಾದ್‌ನ ತಮ್ಮ ಮನೆಯಲ್ಲಿದ್ದರೆ, ಅತ್ತ, ಶೋಯೆಬ್ ತಮ್ಮ ತಾಯಿ ಜೊತೆ ಸಿಯಾಲ್ಕೊಟ್‌ನಲ್ಲೇ ಹಬ್ಬ ಆಚರಿಸಿಕೊಂಡಿದ್ದಾರೆ. ಈ ಎಲ್ಲಾ ಬೆಳವಣಿಗೆಗಳು ಸಾನಿಯಾ-ಶೋಯೆಬ್ ನಡುವಿನ ಬಿರುಕನ್ನು ತೋರಿಸುತ್ತಿವೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ.