ಶ್ರೀಲಂಕೆಗೆ ರೋಚಕ ಜಯ
ಮೀರ್ಪುರ: ಬ್ಯಾಟಿಂಗ್ನಲ್ಲಿ ವೈಫಲ್ಯ ಅನುಭವಿಸಿದರೂ ಬೌಲಿಂಗ್ನಲ್ಲಿ ಹೋರಾಟಕಾರಿ ಪ್ರದರ್ಶನ ನೀಡಿದ ಶ್ರೀಲಂಕಾ ತಂಡ ಬಾಂಗ್ಲಾದೇಶ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ರೋಚಕ ಗೆಲವು ದಾಖಲಿಸಿದೆ.
ಸೋಮವಾರ ಶೇರ್ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪ್ರವಾಸಿ ಶ್ರೀಲಂಕಾ ಆತಿಥೇಯ ಬಾಂಗ್ಲಾದೇಶ ವಿರುದ್ಧ 13 ರನ್ಗಳ ಗೆಲವು ದಾಖಲಿಸಿದೆ.
ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಬಾಂಗ್ಲಾ, ಶ್ರೀಲಂಕಾ ತಂಡವನ್ನು 40 ಓವರ್ಗಳಲ್ಲಿ 180 ರನ್ಗಳಿಗೆ ನಿಯಂತ್ರಿಸಿತು. ನಂತಚರ ಅಲ್ಪ ಮೊತ್ತವನ್ನು ಬೆನ್ನಟ್ಟದ ಬಾಂಗ್ಲಾ 39.2 ಓವರ್ಗಳಲ್ಲಿ 167 ರನ್ಗಳಿಗೆ ಆಲೌಟ್ ಆಯಿತು.
ಈ ಮೂಲಕ ಟೆಸ್ಟ್ ಸರಣಿಯಲ್ಲಿ ಮುಖಭಂಗ ಅನುಭವಿಸಿದ್ದ ಬಾಂಗ್ಲಾ, ಮೂರು ಏಕದಿನ ಪಂದ್ಯಗಳ ಸರಣಿಯಲ್ಲೂ 0-1 ಹಿನ್ನಡೆ ಅನುಭವಿಸುವಂತಾಗಿದೆ.
ಕುಸಿದ ಲಂಕಾ: ಬಾಂಗ್ಲಾದೇಶದ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಶ್ರೀಲಂಕಾ ಆರಂಭದಿಂದಲೇ ಕುಸಿಯುತ್ತಾ ಸಾಗಿತು. ಕೆಳ ಕ್ರಮಾಂಕದಲ್ಲಿ ತಿಸಾರ ಪೆರೇರಾ(ಅಜೇಯ 80) ಹಾಗೂ ಸಚಿತ್ರ ಸೇನಾನಾಯಕೆ(30) ಅವರ ಅಮೂಲ್ಯ ಜತೆಯಾಟದ ನೆರವಿನಿಂದ 150ರ ಗಡಿ ದಾಟಲು ನೆರವಾಯಿತು.
ಶ್ರೀಲಂಕಾ ತಂಡ 67 ರನ್ ಗಳಿಸುವಷ್ಟರಲ್ಲಿ ತನ್ನ ಬ್ಯಾಟಿಂಗ್ ವಿಭಾಗದ ಅಗ್ರ ಎಂಟು ಬ್ಯಾಟ್ಸ್ಮನ್ಗಳನ್ನು ಕಳೆದುಕೊಂಡಿತು. ಇವರಲ್ಲಿ ಕುಶಾಲ ಪೆರೇರಾ (20) ಹಾಗೂ ಚಂಡಿಮಲ್(13) ಹೊರತು ಪಡಿಸಿ ಉಳಿದ ಯಾವುದೇ ಬ್ಯಾಟ್ಸ್ಮನ್ ಎರಡಂಕಿ ರನ್ ದಾಟಲಿಲ್ಲ. ತಂಡ ಆಘಾತಕಾರಿ ಕುಸಿತ ಕಂಡಿದ್ದ ಸಮಯದಲ್ಲಿ ಜತೆಯಾದ ತಿಸಾರ ಪೆರೇರಾ ಹಾಗೂ ಸಚಿತ್ರ ಸೇನಾನಾಯಕೆ ತಂಡಕ್ಕೆ 82 ರನ್ ನೀಡುವ ಮೂಲಕ ತಂಡವನ್ನು ಚೇತರಿಕೆಯತ್ತ ಕೊಂಡೊಯ್ಯಲು ಪ್ರಯತ್ನಿಸಿತು. ಆದರೆ 180 ರನ್ಗಳಿಗೆ ಇನಿಂಗ್ಸ್ ತೆರೆ ಎಳೆದುಕೊಂಡಿತು.
ಬಾಂಗ್ಲಾ ಕಠಿಣ ಹಾದಿ: ಲಂಕಾ ನೀಡಿದ ಅಲ್ಪ ಮೊತ್ತವನ್ನು ಬೆನ್ನಟ್ಟಿದ ಬಾಂಗ್ಲಾದೇಶಕ್ಕೆ ಹಾದಿ ಕಠಿಣವಾಗಿತ್ತು. ತಂಡ ರನ್ ಖಾತೆ ತೆರೆಯುವ ಮುನ್ನವೇ ಅನಾಮುಲ್ ಹಕ್ ಪೆವಿಲಿಯನ್ ಸೇರಿಕೊಂಡರು.
ನಂತರ್ಮತ್ತೊಬ್ಬ ಆರಂಭಿಕ ಶಮ್ಸೂರ್ ರೆಹಮಾನ್ (62), ಮೊಮಿನುಲ್ ಹಕ್ (44) ಹಾಗೂ ಮುಶ್ಫಿಕುರ್ ರಹೀಮ್ (27) ತಂಡವನ್ನು ಗೆಲವಿನತ್ತ ಕೊಂಡೊಯ್ಯಲು ಪ್ರಯತ್ನ ನಡೆಸಿದರು. ಆದರೆ ನಂತರ ಬಂದ ಬ್ಯಾಟ್ಸ್ಮನ್ಗಳು ಒಂದಂಕಿ ರನ್ ಸಂಪಾದನೆಗೆ ಪೆವಿಲಿಯನ್ ಪರೇಡ್ ನಡೆಸುವ ಮೂಲಕ ಮತ್ತೆ ಕುಸಿತ ಅನುಭವಿಸುವಂತಾಯಿತು. ಪಂದ್ಯದಲ್ಲಿ ಸಿಕ್ಕ ನಿಯಂತ್ರಣವನ್ನು ಬಳಸಿಕೊಂಡ ಲಂಕಾ ಗೆಲವಿನ ನಗೆ ಬೀರಿತು.
ಸಂಕ್ಷಿಪ್ತ ಸ್ಕೋರ್
ಶ್ರೀಲಂಕಾ 40 ಓವರ್ಗಳಲ್ಲಿ 180
ತಿಸಾರ ಪೆರೇರಾ ಅಜೇಯ 80, ಸೇನಾನಾಯಕೆ 30, ಶಕಿಬ್ ಅಲ್ ಹಸನ್ 29ಕ್ಕೆ2
ಬಾಂಗ್ಲಾದೇಶ 39.2 ಓವರ್ಗಳಲ್ಲಿ 167
ಶಮ್ಸೂರ್ ರೆಹಮಾನ್ 62, ಮೊಮಿನುಲ್ ಹಕ್ 44, ಮ್ಯಾಥ್ಯೂಸ್ 21ಕ್ಕೆ3
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

