ಟೀಂ ಇಂಡಿಯಾ ಕೋಚ್ ಡಂಕನ್ ಫ್ಲೆಚರ್ ತಲೆದಂಡ ಸದ್ಯಕ್ಕಿಲ್ಲ
ನವದೆಹಲಿ: ವಿದೇಶಿ ನೆಲದಲ್ಲಿ ಸತತ ಸೋಲಿನ ಸರಣಿಯ ನಂತರವೂ ಡಂಕನ್ ಫ್ಲೆಚರ್ ಭಾರತ ತಂಡದ ಕೋಚ್ ಆಗಿ ಮುಂದುವರಿಯುವ ಸಾಧ್ಯತೆಗಳು ಹೆಚ್ಚಾಗಿವೆ.
ಕಳೆದ ಮೂರು ವರ್ಷಗಳಿಂದ ಭಾರತ ತಂಡ ಇಂಗ್ಲೆಂಡ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್ ಪ್ರವಾಸದಲ್ಲಿ ದಯನೀಯ ಸೋಲನುಭವಿಸಿದೆ. ಹಾಗಾಗಿ ತಂಡದ ಕೋಚ್ ಡಂಕನ್ ಫ್ಲೆಚರ್ ತಲೆದಂಡವಾಗುವ ಮಾತುಗಳು ಕೇಳಿ ಬಂದಿದ್ದವು. ಆದರೆ ಪತ್ರಿಕೆಯೊಂಕ್ಕೆ ಮಾಹಿತಿ ನೀಡಿರುವ ಬಿಸಿಸಿಐ ಮೂಲಗಳು ಡಂಕನ್ ಫ್ಲೆಚರ್ ಕೋಚ್ ಸ್ಥಾನದಲ್ಲಿ ಮುಂದುವರಿಯುವುದು ಬಹುತೇಕ ಖಚಿತ ಎಂದು ತಿಳಿಸಿದ್ದಾರೆ. ಆದರೆ ಬೌಲಿಂಗ್ ಕೋಚ್ ಜೊ ಡ್ವೇಸ್ ಸ್ಥಾನದ ಬಗ್ಗೆ ಖಚಿತ ಮಾಹಿತಿ ನೀಡಿಲ್ಲ. ವಿದೇಶದ ಪಿಚ್‌ಗಳಲ್ಲಿ ಭಾರತ ತಂಡ ಬೌಲಿಂಗ್ ವಿಭಾಗ ಹೆಚ್ಚು ವೈಫಲ್ಯ ಅನುಭವಿಸುತ್ತಿದೆ. ಹಾಗಾಗಿ ಇದರ ಬಗ್ಗೆ ಬಿಸಿಸಿಐ ಚಿಂತನೆ ನಡೆಸಿದೆ ಎಂದು ಮೂಲ ತಿಳಿಸಿದೆ.
ಮುಂದಿನ ವರ್ಷ ಏಕದಿನ ವಿಶ್ವಕಪ್ ಪಂದ್ಯಾವಳಿ ನಡೆಯಲಿರುವುದರಿಂದ ಭಾರತ ತಂಡದಲ್ಲಿ ಹೆಚ್ಚಿನ ಬದಲಾವಣೆ ಮಾಡಲು ಬಿಸಿಸಿಐ ಮುಂದಾಗುತ್ತಿಲ್ಲ. ಹಾಗಾಗಿ ಡಂಕನ್ ಫ್ಲೆಚರ್ ಅವರು ತಲೆದಂಡದಿಂದ ಪಾರಾಗಿದ್ದಾರೆ.
ಈ ಸಮಯದಲ್ಲಿ ಫ್ಲೆಚರ್ ಅವರನ್ನು ತಂಡದ ಕೋಚ್ ಸ್ಥಾನದಿಂದ ತೆಗೆದುಹಾಕುವುದು ಸರಿಯಲ್ಲ ಎಂದು ಇತ್ತೀಚೆಗೆ ಮಾಜಿ ನಾಯಕ ಸೌರವ್ ಗಂಗೂಲಿ ಅಭಿಪ್ರಾಯಪಟ್ಟಿದ್ದರು. ಭಾರತ ತಂಡದ ಕೋಚ್‌ಗಳಾದ ಡಂಕನ್ ಫ್ಲೆಚರ್, ಜೊ ಡ್ವೇಸ್ ಹಾಗೂ ಟ್ರೆವೊರ್ ಪೆನ್ನಿ ಅವರ ಒಪ್ಪಂದ ಏಪ್ರಿಲ್ ತಿಂಗಳಿನಲ್ಲಿ ನವೀಕರಣವಾಗಲಿದ್ದು, ಯಾರು ತಮ್ಮ ಸ್ಥಆನದಲ್ಲಿ ಮುಂದುವರಿಯಲಿದ್ದಾರೆ ಎಂಬುದನ್ನು ಕಾದುನೋಡಬೇಕು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

