ಕ್ರೀಡೆ

ರೋಚಕ ಟೈಗೆ ಕರ್ನಾಟಕ ನಿಟ್ಟುಸಿರು

ರೋಚಕ ಟೈಗೆ ಕರ್ನಾಟಕ ನಿಟ್ಟುಸಿರು
Published On :

ಬೆಂಗಳೂರು: ನಾಯಕ ವಿನಯ್ ಕುಮಾರ್ ಅವರ ಆಲ್ರೌಂಡ್ ಪ್ರದರ್ಶನದ ನೆರವಿನಿಂದ ಕರ್ನಾಟಕ ತಂಡ ಹೈದರಾಬಾದ್ ವಿರುದ್ಧದ ಸುಬ್ಬಯ್ಯ ಪಿಳ್ಳೈ ಟ್ರೋಫಿ ಪಂದ್ಯದಲ್ಲಿ ರೋಚಕ ಟೈ ಸಾಧಿಸಿದೆ.
ಶುಕ್ರವಾರ ಆಲೂರಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಹೈದರಾಬಾದ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್‌ಗೆ ಇಳಿದ ಕರ್ನಾಟಕ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 248 ರನ್ ದಾಖಲಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಹೈದರಾಬಾದ್ 50 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 248 ರನ್ ದಾಖಲಿಸುವ ಮೂಲಕ ಪಂದ್ಯದಲ್ಲಿ ಟೈ ಸಾಧಿಸಿತು.
ಕರ್ನಾಟಕ ತಂಡದ ಪರ ನಾಯಕ ವಿನಯ್ ಕುಮಾರ್ ಅಜೇಯ 47 ರನ್ ದಾಖಲಿಸುವುದರ ಜತೆಗೆ 5 ವಿಕೆಟ್ ಪಡೆಯುವ ಮೂಲಕ ಹೈದರಾಬಾದ್‌ಗೆ ಮಾರಕವಾಗಿ ಪರಿಣಮಿಸಿದರು.
ಸಿಗದ ಉತ್ತಮ ಆರಂಭ: ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಕರ್ನಾಟಕ ಆರಂಭಿಕರಿಂದ ಕೇವಲ 17 ರನ್‌ಗಳ ಜತೆಯಾಟ ಪಡೆಯಿತು. ಆರಂಭಿಕ ಕೆ.ಎಲ್ ರಾಹುಲ್(11), ಗಣೇಶ್ ಸತೀಶ್ (15), ಮನೀಷ್ ಪಾಂಡೆ (11) ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಪರಿಣಾಮ ರಾಜ್ಯ ತಂಡ 64 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿತು.
ಇನ್ನು ಕರುಣ್ ನಾಯರ್(22), ಸಿ.ಎಂ ಗೌತಮ್ (22) ಉತ್ತಮ ಆರಂಭ ಪಡೆದರಾದರೂ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಆದರೆ ರಾಬಿನ್ ಉತ್ತಪ್ಪ (45), ಅಮಿತ್ ವರ್ಮಾ(44) ಹಾಗೂ ನಾಯಕ ವಿನಯ್ ಕುಮಾರ್ (ಅಜೇಯ 47) ಜವಾಬ್ದಾರಿಯುತ ಕಾಣಿಕೆಯಿಂದ ಕರ್ನಾಟಕ 248ರ ಸ್ಪರ್ಧಾತ್ಮಕ ಮೊತ್ತವನ್ನು ಪೇರಿಸಿತು. ಹೈದರಾಬಾದ್ ತಂಡದ ಪರ ಅಬ್ಸೊಲೆಮ್, ಆಶೀಶ್ ರೆಡ್ಡಿ ಹಾಗೂ ಪ್ರಗ್ಯಾನ್ ಓಜಾ ತಲಾ 2 ವಿಕೆಟ್ ಪಡೆದರು.
ಮುಳುವಾದ ವಿನಯ್: ರಾಜ್ಯ ತಂಡ ನೀಡಿದ ಮೊತ್ತವನ್ನು ಬೆನ್ನಟ್ಟಿದ ಹೈದರಾಬಾದ್‌ಗೆ ಕಂಟಕವಾಗಿದ್ದು, ವಿನಯ್ ಕುಮಾರ್. ಹೈದರಾಬಾದ್ ತಂಡ ಆರಂಭಿಕರಾದ ಅಕ್ಷತ್ ರೆಡ್ಡಿ(57) ಹಾಗೂ ಟಿ ಸುಮನ್(25) ಅವರಿಂದ 48 ರನ್‌ಗಳ ಸಾಧಾರಣ ಆರಂಭವನ್ನೇ ಪಡೆಯಿತು. ನಂತರ ಬಂದ ರವಿತೇಜ(44) ಸಹ ಉತ್ತಮ ಬ್ಯಾಟಿಂಗ್ ನಡೆಸಿದರು.
ಆದರೆ ನಂತರ ದಿಢೀರನೆ ವಿಕೆಟ್ ಕಳೆದುಕೊಂಡ ಪರಿಣಾಮ ಹೈದರಾಬಾದ್ ಗೆಲವಿನ ಹಾದಿಯಲ್ಲಿ ಕೊಂಚ ಹಿನ್ನಡೆ ಅನುಭವಿಸಿತು. ನಂತರ ಬಂದ ಆಶೀಶ್ ರೆಡ್ಡಿ (ಅಜೇಯ 51) ಹೋರಾಟ ಮುಂದುವರಿಸಿದರು. ಆದರೆ ಪಂದ್ಯವನ್ನು ಗೆಲ್ಲಲು ಸಾಧ್ಯವಾಗದಿದ್ದರೂ, ಟೈ ಮಾಡಿಕೊಳ್ಳುವಲ್ಲಿ ಯಶಸ್ವಿಯಾದರು. ಕರ್ನಾಟಕದ ಪರ ವಿನಯ್ ಕುಮಾರ್ 5, ಮಿಥುನ್ ಹಾಗೂ ರಾಬಿನ್ ಉತ್ತಪ್ಪ ತಲಾ 1 ವಿಕೆಟ್ ಪಡೆದರು.

ಸ್ಕೋರ್ ವಿವರ
ಕರ್ನಾಟಕ 50 ಓವರ್‌ಗಳಲ್ಲಿ 8 ವಿಕೆಟ್‌ಗೆ 248
ರಾಬಿನ್ ಉತ್ತಪ್ಪ ಎಲ್‌ಬಿ ಪ್ರಗ್ಯಾನ್ ಓಜಾ 45
ಕೆ.ಎಲ್ ರಾಹುಲ್ ಸಿ ಅಹ್ಮದ್ ಬಿ ಅಬ್ಸೊಲೆಮ್ 11
ಗಣೇಶ್ ಸತೀಶ್ ರನೌಟ್ (ರವಿ ಕಿರಣ್) 15
ಮನೀಷ್ ಪಾಂಡೆ ಸಿ ಅಹ್ಮದ್ ಬಿ ಆಶೀಶ್ ರೆಡ್ಡಿ 11
ಕರುಣ್ ನಾಯರ್ ಸಿ ಅಹ್ಮದ್ ಬಿ ಅಬ್ಸೊಲೆಮ್ 22
ಸಿ.ಎಂ ಗೌತಮ್ ಸಿ ಅಹ್ಮದ್ ಬಿ ಆಶೀಶ್ ರೆಡ್ಡಿ 22
ಅಮಿತ್ ವರ್ಮಾ ರನೌಟ್ (ರಾಹುಲ್ ಸಿಂಗ್) 44
ವಿನಯ್ ಕುಮಾರ್ ಅಜೇಯ 47
ಅಭಿಮನ್ಯು ಮಿಥುನ್ ಬಿ ಪ್ರಗ್ಯಾನ್ ಓಜಾ 4
ಅಬ್ರಾರ್ ಕಾಜಿ ಅಜೇಯ 10
ಇತರೆ (ಎಲ್‌ಬಿ 5, ವೈಡ್ 11, ನೊಬಾಲ್ 1) ಒಟ್ಟು 17
ವಿಕೆಟ್ ಪತನ: 1-17, 2-45, 3-64, 4-111, 5-127, 6-148, 7-214, 8-221
ಬೌಲಿಂಗ್ ವಿವರ:
ಅಲ್‌ಫ್ರೆಡ್ ಅಬ್ಸೊಲೆಮ್ 10-1-34-2
ಪಗದಾಲ ನಾಯ್ಡು 10-0-57-0
ರವಿ ಕಿರಣ್ 10-0-43-0
ಆಶೀಶ್ ರೆಡ್ಡಿ 10-1-61-2
ಪ್ರಗ್ಯಾನ್ ಓಜಾ 10-0-48-2


ಹೈದರಾಬಾದ್ 50 ಓವರ್‌ಗಳಲ್ಲಿ 7 ವಿಕೆಟ್‌ಗೆ 248
ಟಿ ಸುಮನ್ ಬಿ ವಿನಯ್ ಕುಮಾರ್ 25
ಅಕ್ಷತ್ ರೆಡ್ಡಿ ಸಿ ಸತೀಶ್ ಬಿ ಉತ್ತಪ್ಪ 57
ರವಿತೇಜ ಸಿ ಗೌತಮ್ ಬಿ ಮಿಥುನ್ 44
ಹನುಮ ವಿಹಾರಿ ಸಿ ಗೌತಮ್ ಬಿ ವಿನಯ್ 23
ರಾಹುಲ್ ಸಿಂಗ್ ಸಿ ಅಮಿತ್ ಬಿ ವಿನಯ್ 5
ಅಬೀನ್ ಅಹ್ಮದ್ ಸಿ ರಾಬಿನ್ ಬಿ ವಿನಯ್ 1
ಆಶೀಶ್ ರೆಡ್ಡಿ ಅಜೇಯ 51
ಕನಿಷ್ಕ ನಾಯ್ಡು ಸಿ ಅಮಿತ್ ಬಿ ವಿನಯ್ 22
ಅಬ್ಸೊಲೆಮ್ ಅಜೇಯ 9
ಇತರೆ (ಬೈ 1, ಎಲ್‌ಬಿ 1, ವೈಡ್ 9) ಒಟ್ಟು 11
ವಿಕೆಟ್ ಪತನ: 1-48, 2-127, 3-147, 4-154, 5-157, 6-165, 7-218
ಬೌಲಿಂಗ್ ವಿವರ:
ವಿನಯ್ ಕುಮಾರ್ 10-0-42-5
ಅಭಿಮನ್ಯು ಮಿಥುನ್ 12-0-60-1
ರೋನಿತ್ ಮೊರೆ 9-1-49-0
ಮನೀಷ್ ಪಾಂಡೆ 2-0-15-0
ಅಬ್ರಾರ್ ಕಾಜಿ 9-0-46-0
ರಾಬಿನ್ ಉತ್ತಪ್ಪ 7-0-26-1
ಅಮಿತ್ ವರ್ಮಾ 1-0-8-0

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.