ಪೂವಮ್ಮ, ಸಹನಾ, ಅಕ್ಕುಂಜೆ ಸೇರಿ 18 ಅಥ್ಲೀಟ್ಗಳ ಪಯಣ
ನವದೆಹಲಿ: ಕರ್ನಾಟದ ಓಟಗಾರ್ತಿಯರಾದ ಎಂ.ಆರ್. ಪೂವಮ್ಮ ಮತ್ತು ಅಶ್ವಿನಿ ಅಕ್ಕುಂಜೆ ಸೇರಿದಂತೆ ಭಾರತದ ಒಟ್ಟು 18 ಟ್ರ್ಯಾಕ್ ಆ್ಯಂಡ್ ಫೀಲ್ಡ್ ಕ್ರೀಡಾಪಟುಗಳು ಜುಲೈ 23ರಿಂದ ಆರಂಭವಾಗಲಿರುವ ಗ್ಲಾಸ್ಗೊ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಪಾಲ್ಗೊಳ್ಳಲು ಭಾನುವಾರ ತೆರಳಿದರು.
ಅಥ್ಲೆಟಿಕ್ಸ್ ಸ್ಪರ್ಧೆಗಳು ಜು. 27ರಿಂದ ಆರಂಭವಾಗಲಿದ್ದರೂ ಸಹ ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವ ಉದ್ದೇಶದಿಂದ ಬೇಗನೆ ಪ್ರಯಾಣ ಬೆಳೆಸುತ್ತಿರುವುದಾಗಿ ಭಾರತ ತಂಡದ ಮುಖ್ಯ ಕೋಚ್ ಬಹಾದ್ದೂರ್ ಸಿಂಗ್ ಹೇಳಿದ್ದಾರೆ.
ಅಥ್ಲೀಟ್ಗಳ ತಂಡ: ರಾಜೀವ್ ಅರೋಕಿಯಾ, ಪಿ. ಕುನ್ನು ಮೊಹಮ್ಮದ್, ಸಚಿನ್ ರಾಬಿ ಜೋಸ್, ಲಲಿತ್ ಮಾಥೂರ್, ಜಿತು ಬೇಬಿ, ಜಿಬಿನ್ ಸೆಬಾಸ್ಟಿಯನ್, ರವೀಂದರ್ ಸಿಂಗ್ ಖೇರಾ, ದವಿಂದರ್ ಸಿಂಗ್, ವಿಪಿನ್ ಕಾಸನ, ನಾರಾಯಣ್ ಸಿಂಗ್ ಚಂದ್ರೋದಯ, ಎಂ.ಆರ್. ಪೂವಮ್ಮ, ದೇಬಶ್ರೀ ಮುಜುಂದಾರ್, ರತ್ನದೀಪ್ ಕೌರ್, ಅನಿಲ್ಡಾ ಥಾಮಸ್, ಅಶ್ವಿನಿ ಅಕ್ಕುಂಜೆ, ಸಹನಾ ಕುಮಾರಿ, ಸೀಮಾ ಪೂನಿಯಾ, ಅನ್ನು ರಾಣಿ.
ಗ್ಲಾಸ್ಗೋಗೆ ಹಾಕಿ ತಂಡ ಪಯಣ
ನವದೆಹಲಿ: ಸಂಪರ್ಕ ಆಟಗಾರ ಸರ್ದಾರ್ ಸಿಂಗ್ ನೇತೃತ್ವದ ಭಾರತೀಯ ಹಾಕಿ ತಂಡ ಗ್ಲಾಸ್ಗೋ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಪಾಲ್ಗೊಳ್ಳಲು ಭಾನುವಾರ ಸ್ಕಾಟ್ಲೆಂಡ್ಗೆ ಪ್ರಯಾಣ ಬೆಳೆಸಿತು.
ಈ ಕ್ರೀಡಾಕೂಟ ಜುಲೈ 23ರಿಂದ ಆಗಸ್ಟ್ 3ರ ವರೆಗೆ ನಡೆಯಲಿದ್ದು, ಭಾರತದ ಆಟಗಾರರು ಜು.25ರಂದು ವೇಲ್ಸ್ ವಿರುದ್ಧ ನಡೆಯಲಿರುವ ಪಂದ್ಯದೊಂದಿಗೆ ಅಭಿಯಾನ ಆರಂಭಿಸಲಿದ್ದಾರೆ.
ಹಾಕಿ ವಿಭಾಗದಲ್ಲಿ ಒಟ್ಟು 10 ತಂಡಗಳು ಪಾಲ್ಗೊಳ್ಳಲಿದ್ದು, 2 ಗುಂಪುಗಳಲ್ಲಿ ಅವುಗಳನ್ನು ವಿಭಜಿಸಲಾಗಿದೆ. ಭಾರತ ತಂಡ 'ಎ' ಗುಂಪಿನಲ್ಲಿ ವೇಲ್ಸ್, ಆತಿಥೇಯ ಸ್ಕಾಟ್ಲೆಂಡ್, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಜೊತೆ ಸ್ಥಾನ ಹೊಂದಿದೆ. 'ಬಿ' ಗುಂಪಿನಲ್ಲಿ ಕೆನಡಾ, ಇಂಗ್ಲೆಂಡ್, ಮಲೇಷಿಯಾ, ನ್ಯೂಜಿಲೆಂಡ್ ಹಾಗೂ ಟ್ರಿನಿಡಾಡ್ ಆ್ಯಂಡ್ ಟೋಬೆಗೊ ತಂಡಗಳಿವೆ.
ಭಾರತದ ಪಂದ್ಯಗಳು: ಜುಲೈ 25- ವೇಲ್ಸ್, ಜು. 26- ಸ್ಕಾಟ್ಲೆಂಡ್, ಜು.29- ಆಸ್ಟ್ರೇಲಿಯಾ, ಜು. 31- ದಕ್ಷಿಣ ಆಫ್ರಿಕಾ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

