ಆಭರಣ ಕದ್ದ ಮರಡೋನಾ ಮಾಜಿ ಗೆಳತಿ ವಿರುದ್ಧ ಬಂಧನದ ವಾರಂಟ್
ದುಬೈ: ಅರ್ಜೆಂಟೀನಾ ಫುಟ್ಬಾಲ್ ದಂತಕತೆ ಮರಡೋನಾ ಅವರ ಮಾಜಿ ಗೆಳತಿಯನ್ನು ವಿಚಾರಣೆ ನಡೆಸಲು ದುಬೈ ಪೊಲೀಸರು ಹುಡುಕುತ್ತಿದ್ದಾರೆ. ಕಾರಣ, ತಮ್ಮ ಬೆಲೆ ಬಾಳುವ ಆಭರಣಗಳನ್ನು ಕದ್ದ ಹಿನ್ನೆಲೆಯಲ್ಲಿ 24 ವರ್ಷದ ಮಾಜಿ ಗೆಳತಿ ವಿರುದ್ಧ ಮರಡೋನಾ ದುಬೈ ಪೊಲೀಸ್ ಠಾಣೆಯೊಂದರಲ್ಲಿ ದೂರು ದಾಖಲಿಸಿದ್ದಾರೆ.
ಅರ್ಜೆಂಟೀನಾದವಳೇ ಆದ ರೋಸಿಯೋ ಗೆಲಾಲ್ಡಿನೆ ಕಳೆದ ಮಾರ್ಚ್ 10ರಂದು ಮರಡೋನಾ ಕೈ ಗಡಿಯಾರ ಮತ್ತು ಅವರ ಬೆಲೆ ಬಾಳುವ ಚಿನ್ನದ ಆಭರಣಗಳನ್ನು ಕದ್ದಿದ್ದಾಳೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಮರಡೋನಾ ಜೂನ್ 8ರಂದು ದೂರು ದಾಖಲಿಸಿದ್ದಾರೆ. ನಂತರ ಆಕೆಯ ವಿರುದ್ಧ ಬಂಧನದ ವಾರಂಟ್ ಜಾರಿ ಮಾಡಿದ್ದು, ಎಲ್ಲೇ ಇದ್ದರೂ ಶೋಧಿಸಿ ಬಂಧಿಸಬೇಕು ಎಂದು ಆದೇಶ ಹೊರಡಿಸಲಾಗಿದೆ. ಮರಡೋನಾ ಅವರು ದುಬೈ ಸ್ಪೋರ್ಟ್ಸ್ ಕೌನ್ಸಿಲ್ನ ಜಾಗತಿಕ ರಾಯಬಾರಿಯಾಗಿದ್ದಾರೆ. ಫುಟ್ಬಾಲ್ ಆಟಗಾರ್ತಿಯಾಗಿರುವ ರೋಸಿಯೋ ಅರ್ಜೆಂಟೀನಾದಲ್ಲೇ ಇದ್ದಾರೆ ಎನ್ನಲಾಗಿದೆ. ಆದರೆ, ಆಕೆ ಮರಡೋನಾ ಆಭರಣಗಳನ್ನು ಕದ್ದಿರುವ ಸುದ್ದಿ ಸುಳ್ಳು ಎಂದು ಅರ್ಜೆಂಟನಾದ ಪತ್ರಿಕೆಗಳಿಗೆ ಆಕೆ ಹೇಳಿಕೊಂಡಿರುವ ಕುರಿತು ವರಿದಿಯಾಗಿದೆ.
ಈಗಷ್ಟೇ ಮುಕ್ತಾಯಗೊಂಡಿರುವ ಬ್ರೆಜಿಲ್ ವಿಶ್ವಕಪ್ ಪಂದ್ಯಾವಳಿಯ ಕಾಮೆಂಟೇಟರ್ ಆಗಿದ್ದ ಮರಡೋನಾ ಅವರು ರೋಸಿಯೊಳನ್ನು ಬಂಧಿಸಿ ನನಗೆ ನ್ಯಾಯ ವದಗಿಸಿಕೊಡಬೇಕು ಎಂದು ಕೇಳಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

