ಬೃಹತ್ ಮುನ್ನಡೆಯತ್ತ ಶ್ರೀಲಂಕಾ ನಡೆ
ಕೊಲಂಬೊ: ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಹಶೀಂ ಆಮ್ಲಾ (ಅಜೇಯ 139) ಏಕಾಂಗಿ ಹೋರಾಟದ ನಡುವೆ ಲಂಕಾದ ದಿಲ್ರುವಾನ್ ಪೆರೇರಾ ಹಾಗೂ ರಂಗನ ಹೆರಾಥ್ ಅವರ ದಾಳಿಗೆ ತತ್ತರಿಸಿದ ದಕ್ಷಿಣ ಆಫ್ರಿಕಾ ತಂಡ ಎರಡನೇ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಅಲ್ಪ ಮೊತ್ತಕ್ಕೆ ಕುಸಿದಿದೆ.
ಶನಿವಾರ ಪಂದ್ಯದ ಮೂರನೇ ದಿನದಾಟದಲ್ಲಿ ಲಂಕಾ ಸ್ಪಿನ್ ಮೋಡಿಯನ್ನು ಅರಿಯಲು ವಿಫಲರಾದ ಹರಿಣಗಳು 282 ರನ್ಗಳಿಗೆ ಆಲೌಟ್ ಆಗುವ ಮೂಲಕ ತೀವ್ರ ಹಿನ್ನಡೆ ಅನುಭವಿಸಿದೆ. ನಂತರ ಎರಡನೇ ಇನಿಂಗ್ಸ್ ಆರಂಭಿಸಿರುವ ಶ್ರೀಲಂಕಾ ದಿನದಾಟ ಮುಕ್ತಾಯಕ್ಕೆ ಯಾವುದೇ ವಿಕೆಟ್ ನಷ್ಟವಿಲ್ಲದೆ 11 ರನ್ ಗಳಿಸುವ ಮೂಲಕ ಹರಿಣಗಳಿಗೆ ಕಠಿಣ ಸವಾಲು ನೀಡುವತ್ತ ಹೆಜ್ಜೆ ಹಾಕಿದೆ.
ಎರಡನೇ ದಿನದಾಟ ಮುಕ್ತಾಯಕ್ಕೆ ಸಂಕಷ್ಟದಲ್ಲಿದ್ದ ದಕ್ಷಿಣ ಆಫ್ರಿಕಾ ತಂಡ ಮೂರನೇ ದಿನವೂ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ಡಿವಿಲಿಯರ್ಸ್ 37 ರನ್ ಗಳಿಸಿ ಔಟಾಗುತ್ತಿದ್ದಂತೆ ಹರಿಣಗಳ ವಿಕೆಟ್ಗಳು ತರಗೆಲೆಗಳಂತೆ ಉದುರಿದವು.
ಆಮ್ಲಾ ಆಸರೆ: ಒಂದು ಹಂತದಲ್ಲಿ ಫಾಲೋ ಆನ್ ಭೀತಿಯನ್ನು ಎದುರಿಸುತ್ತಿದ್ದ ದಕ್ಷಿಣ ಆಫ್ರಿಕಾ ತಂಡಕ್ಕೆ ಹಿರಿಯ ಆಟಗಾರ ಹಶೀಂ ಆಮ್ಲಾ ಆಸರೆಯಾಗಿ ನಿಂತರು. ತಾಳ್ಮೆಯ ಆಟ ಪ್ರದರ್ಶಿಸಿದ ಆಮ್ಲಾ 12 ಬೌಂಡರಿಗಳ ನೆರವಿನಿಂದ ಅಜೇಯ 139 ರನ್ ದಾಖಲಿಸುವ ಮೂಲಕ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು. ಲಂಕಾ ಪರ ದಿಲ್ರುವಾನ್ ಪೆರೇರಾ 5, ರಂಗನ ಹೆರಾಥ್ 4 ವಿಕೆಟ್ ಪಡೆದು ಮಿಂಚಿದರು. ಎರಡನೇ ಇನಿಂಗ್ಸ್ ಆರಂಭಿಸಿರುವ ಲಂಕಾ 11 ರನ್ಗಳಿಸಿದೆ. ಆರಂಭಿಕರಾದ ಉಪುಲ್ ತರಂಗಾ 6, ಕುಶಾಲ ಸಿಲ್ವಾ 5 ರನ್ ಗಳಿಸಿ ಕ್ರೀಸ್ನಲ್ಲಿದ್ದಾರೆ.
ಸಂಕ್ಷಿಪ್ತ ಸ್ಕೋರ್ (3ನೇ ದಿನದಾಟ ಅಂತ್ಯಕ್ಕೆ)
ಶ್ರೀಲಂಕಾ ಮೊದಲ ಇನಿಂಗ್ಸ್ 421
ದಕ್ಷಿಣ ಆಫ್ರಿಕಾ ಮೊದಲ ಇನಿಂಗ್ಸ್ 282 (ಆಮ್ಲಾ 139, ಡಿವಿಲಿಯರ್ಸ್ 37, ಪೆರೇರಾ 69ಕ್ಕೆ5, ಹೆರಾಥ್ 71ಕ್ಕೆ4)
ಶ್ರೀಲಂಕಾ ಎರಡನೇ ಇನಿಂಗ್ಸ್ ವಿಕೆಟ್ ನಷ್ಟವಿಲ್ಲದೆ 11
(ತರಂಗಾ ಬ್ಯಾಟಿಂಗ್ 6, ಕುಶಾಲ ಸಿಲ್ವಾ ಬ್ಯಾಟಿಂಗ್ 4,)
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

