ಶ್ರೇಯಸಿಗೆ ಬೆಳ್ಳಿ ಶ್ರೇಯಸ್ಸು

ಗ್ಲಾಸ್ಗೋ: ಯುವ ಗುರಿಕಾರ್ತಿ ಶ್ರೇಯಸಿ ಸಿಂಗ್ 20ನೇ ಕಾಮನ್ವೆಲ್ತ್ ಕ್ರೀಡಾಕೂಟದ ಶೂಟಿಂಗ್ ಸ್ಪರ್ಧೆಯಲ್ಲಿ ತವರಿಗೆ ಬೆಳ್ಳಿ ಪದಕ ಗೆದ್ದುಕೊಟ್ಟಿದ್ದಾರೆ.
ಭಾನುವಾರ ಜರುಗಿದ ಮಹಿಳೆಯರ ಡಬಲ್ ಟ್ರ್ಯಾಪ್ ಸ್ಪರ್ಧೆಯಲ್ಲಿ 22ರ ಶ್ರೇಯಸಿ ಸಿಂಗ್ ಎರಡನೇ ಸ್ಥಾನ ಪಡೆದು ಈ ಗೌರವ ತಮ್ಮದಾಗಿಸಿಕೊಂಡರು. ಫೈನಲ್ನಲ್ಲಿ ಅವರು ಒಟ್ಟು 92ರ ಗುರಿಯೊಂದಿಗೆ ಬೆಳ್ಳಿ ಪದಕಕ್ಕೆ ಅರ್ಹರಾದರು. ಇಂಗ್ಲೆಂಡ್ನ ಚಾರ್ಲೊಟೆ ಕೆರ್ವುಡ್ 94 ಅಂಕಗಳಿಸಿ ಚಿನ್ನದ ಪದಕ ಹಾಗೂ ಇದೇ ದೇಶದ ಮತ್ತೊಬ್ಬ ಗುರಿಕಾರ್ತಿ ರಾಕೆಲ್ ಪ್ಯಾರಿಶ್ (91 ಅಂಕ) ಕಂಚಿನ ಪದಕ ಸಂಪಾದಿಸಿದರು.
ಪ್ರಾರಂಭದಲ್ಲಿ ಉತ್ತಮ ಪ್ರದರ್ಶನ ನೀಡದ ಭಾರತೀಯ ಗುರಿಕಾರ್ತಿ ಒಂದು ಹಂತದಲ್ಲಿ ಮೂರನೇ ಸ್ಥಾನಕ್ಕೆ ಕುಸಿದಿದ್ದರು. ಆದರೆ, ದೆಹಲಿಯ ಹುಡುಗಿ ಶ್ರೇಯಸಿ ಫೈನಲ್ನಲ್ಲಿ ಮಾತ್ರ ಅತ್ಯುತ್ತಮ ಗುರಿ ನೆಡುವ ಮೂಲಕ ಅಂತಿಮವಾಗಿ ಪದಕಕ್ಕೆ ಭಾಜನರಾದರು. ಶ್ರೇಯಸಿ 22, 24, 23, 23 ರಂತೆ ಅಂಕಗಳನ್ನು ಸಂಪಾದಿಸಿದರು.
ಇದೇ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಭಾರತದ ಮತ್ತೊಬ್ಬ ಶೂಟರ್ 20ರ ವರ್ಷಾ ವರ್ಮನ್ 88 ಅಂಕಗಳಿಸಲಷ್ಟೇ ಶಕ್ತರಾಗಿ (22, 19, 24, 23) ಐದನೇ ಸ್ಥಾನಕ್ಕೆ ಸಮಾಧಾನಗೊಳ್ಳಬೇಕಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


