ಹರಿಣಗಳಿಗೆ ಕಠಿಣ ಗುರಿ
ಕೊಲಂಬೊ: ಕುಮಾರ ಸಂಗಕ್ಕಾರ ಮತ್ತು ಆ್ಯಂಜಿಲೋ ಮ್ಯಾಥ್ಯೂಸ್ ಅವರ ಆಕರ್ಷಕ ಅರ್ಧ ಶತಕದ ನೆರವಿನೊಂದಿಗೆ ಶ್ರೀಲಂಕಾ ತಂಡ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾಕ್ಕೆ 369 ರನ್ಗಳ ಬೃಹತ್ ಗುರಿ ನೀಡಿದೆ. ಹೀಗಾಗಿ ಆತಿಥೇಯ ಲಂಕಾ ಜಯದ ನಿರೀಕ್ಷೆಯಲ್ಲಿದೆ.
ಈ ಗುರಿಯನ್ನು ಬೆನ್ನಟ್ಟಿರುವ ದಕ್ಷಿಣ ಆಫ್ರಿಕಾ, 2ನೇ ಟೆಸ್ಟ್ನ 4ನೇ ದಿನವಾದ ಭಾನುವಾರ ಆಟ ನಿಂತಾಗ 1 ವಿಕೆಟ್ ಕಳೆದುಕೊಂಡು 38 ರನ್ ಗಳಿಸಿದೆ. ಈಗ 9 ವಿಕೆಟ್ ಹೊಂದಿರುವ ದಕ್ಷಿಣ ಆಫ್ರಿಕಾ, ಜಯ ಸಾಧಿಸಲು ಅಂತಿಮ ಮತ್ತು 5ನೇ ದಿನವಾದ ಸೋಮವಾರ ಇನ್ನೂ 331 ರನ್ ಗಳಿಸಬೇಕಾಗಿದೆ. ದ್ವಿತೀಯ ಇನಿಂಗ್ಸ್ ಆರಂಭಿಸುತ್ತಿದ್ದಂತೆಯೇ, ಅಲ್ವಿರೋ ಪೀಟರ್ಸನ್ (0) ವಿಕೆಟ್ ಕಿತ್ತ ಲಂಕಾದ ರಂಗನ್ ಹೆರಾತ್ ಹರಿಣಗಳಿಗೆ ಆರಂಭಿಕ ಆಘಾತ ನೀಡಿದರು. ನಂತರ ಬಂದ ಖ್ವಿಂಟಾನ್ ಡಿ ಕಾಕ್ ಬ್ಯಾಟಿಂಗ್ (21) ಮತ್ತು ಆರಂಭಿಕ ಆಟಗಾರ ಡೀನ್ ಎಲ್ಗಾರ್ ಅಜೇಯ (13) ಅವರು ಸೋಮವಾರಕ್ಕೆ ವಿಕೆಟ್ ಕಾಯ್ದುಕೊಂಡಿದ್ದಾರೆ.
ಶನಿವಾರ ದಿನಾಂತ್ಯಕ್ಕೆ 2ನೇ ಇನಿಂಗ್ಸ್ ಆರಂಭಿಸಿ ವಿಕೆಟ್ ನಷ್ಟವಿಲ್ಲದೆ 11 ರನ್ ಗಳಿಸಿದ್ದ ಶ್ರೀಲಂಕಾ, ಭಾನುವಾರ ಆಟ ಮುಂದುವರಿಸುವ ಮೂಲಕ ಲಗುಬಗನೆ ವಿಕೆಟ್ ಕಳೆದುಕೊಂಡಿತು. ಆದರೂ, 53.4 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 229 ರನ್ ಗಳಿಸುವ ಮೂಲಕ ಡಿಕ್ಲೇರ್ ಪಡೆದುಕೊಂಡಿತು. ಕುಮಾರ ಸಂಗಕ್ಕಾರ (72) ಮತ್ತು ಆ್ಯಂಜಿಲೋ ಮ್ಯಾಥ್ಯೂಸ್ (63) ಲಂಕಾ ಪರ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಇಬ್ಬರ ಜತೆಯಾಟದಲ್ಲಿ 4ನೇ ವಿಕೆಟ್ಗೆ 81 ರನ್ ಗಳಿಸಿದರು.
ದಕ್ಷಿಣ ಆಫ್ರಿಕಾ ಪರ ಮಾರ್ನ್ ಮಾರ್ಕೆಲ್ 4 ವಿಕೆಟ್ ಕಬಳಿಸಿದರೆ, ಡೇಲ್ ಸ್ಟೇಯ್ನ್ ಮತ್ತು ಇಮ್ರಾನ್ ತಾಹೀರ್ ಅವರು ತಲಾ 2 ವಿಕೆಟ್ ಪಡೆದರು.
ಈಗ ಒಂದು ದಿನ ಮಾತ್ರ ಬಾಕಿ ಉಳಿದಿರುವ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಬೃಹತ್ ಗುರಿ ಸೇರಲು ಗೆಲುವಿನ ತಂತ್ರ ರೂಪಿಸುತ್ತಿದ್ದರೆ, ಆತಿಥೇಯ ಶ್ರೀಲಂಕಾ ಹರಿಣಗಳನ್ನು ಗುರಿ ಮುಟ್ಟುವ ಮುನ್ನವೇ ಕಟ್ಟಿಹಾಕಲು ಎದುರು ನೋಡುತ್ತಿದೆ.ಸಂಕ್ಷಿಪ್ತ ಸ್ಕೋರ್:
ಲಂಕಾ ಮೊದಲ ಇನಿಂಗ್ಸ್ 421
ದ. ಆಫ್ರಿಕಾ ಮೊದಲ ಇನಿಂಗ್ಸ್ 282
ಲಂಕಾ ದ್ವಿತೀಯ ಇನಿಂಗ್ಸ್ 229
ಸಂಗಕ್ಕಾರ 72, ಮ್ಯಾಥ್ಯೂಸ್ ಅಜೇಯ 63
ಬೌಲಿಂಗ್: ಮಾರ್ಕೆಲ್ 4/45, ಸ್ಟೇಯ್ನ್ 2/59
ದಕ್ಷಿಣ ಆಫ್ರಿಕಾ ದ್ವಿತೀಯ ಇನಿಂಗ್ಸ್ 38/1
ಡೀನ್ ಎಲ್ಗಾರ್ ಬ್ಯಾಟಿಂಗ್ 13, ಖ್ವಿಂಟಾನ್ ಡಿ ಕಾಕ್ ಬ್ಯಾಟಿಂಗ್ 21 (4ನೇ ದಿನದಾಟ ಅಂತ್ಯಕ್ಕೆ)
ಬೌಲಿಂಗ್: ರಂಗನ್ ಹೆರಾತ್ 1/7, ದಿಲ್ರುವಾನ್ ಪೆರೇರಾ 0/24
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

