ಕ್ರೀಡೆ

ಬ್ಯಾಡ್ಮಿಂಟನ್ ಸೆಮೀಸ್‌ಗೆ ಭಾರತ

Published On :

ಗ್ಲಾಸ್ಗೋ: ತವರಿನ ಅಗ್ರಮಾನ್ಯ ಆಟಗಾರ್ತಿ ಪಿ.ವಿ. ಸಿಂಧು ಸೋಲನುಭವಿಸಿದರೂ ಸಹ ಭಾರತ ತಂಡದ ಆಟಗಾರರು ಕಾಮನ್‌ವೆಲ್ತ್ ಕ್ರೀಡಾಕೂಟದ ಬ್ಯಾಡ್ಮಿಂಟನ್ ಸ್ಪರ್ಧೆಯ ಮಿಶ್ರ ತಂಡ ಚಾಂಪಿಯನ್‌ಶಿಪ್‌ನಲ್ಲಿ ಸೆಮಿಫೈನಲ್ ತಲುಪಲು ಯಶಸ್ವಿಯಾಗಿದ್ದಾರೆ.
ಭಾನುವಾರ ನಡೆದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಭಾರತ ತಂಡ 3-1ರ ಅಂತರದಲ್ಲಿ ಕೆನಡಾ ತಂಡವನ್ನು ಪರಾಭವಗೊಳಿಸಿತು. ಮೊದಲಿಗೆ ಮಿಶ್ರ ಡಬಲ್ಸ್‌ನಲ್ಲಿ ಕಿಡಂಬಿ ಶ್ರೀಕಾಂತ್ ಮತ್ತು ಜ್ವಾಲಾ ಗುಟ್ಟಾ 21-19, 17-21, 21-18ರಿಂದ ಕೆನಡಾದ ಟಾಬಿ ನಗ್ ಮತ್ತು ಅಲೆಕ್ಸ್ ಬ್ರೂಸ್‌ರನ್ನು ಮಣಿಸಿ ಭಾರತಕ್ಕೆ 1-0 ಮುನ್ನಡೆ ತಂದುಕೊಟ್ಟರು. ನಂತರ ಸಿಂಗಲ್ಸ್ ಪಂದ್ಯದಲ್ಲಿ ಸೆಣಸಿದ ಪರುಪಳ್ಳಿ ಕಶ್ಯಪ್, 21-11, 21-9 ಅಂಕಗಳಿಂದ ಆ್ಯಂಡ್ರ್ಯೂ ಡಿಸೋಜಾ ಅವರನ್ನು ಸೋಲಿಸಿ ಭಾರತದ ಮುನ್ನಡೆಯನ್ನು 2-0ಗೆ ಹಿಗ್ಗಿಸಿದರು. ಆದರೆ, ಮೂರನೇ ಪಂದ್ಯದಲ್ಲಿ ಮಹಿಳೆಯರ ಸಿಂಗಲ್ಸ್‌ನಲ್ಲಿ ಸೆಣಸಿದ ಪಿ.ವಿ. ಸಿಂಧು 21-15, 20-22, 17-21ರಿಂದ ಮಿಚೆಲಿ ಲೀ ಎದುರು ಸೋಲನುಭವಿಸಿದಾಗ ಭಾರತ 2-1ಕ್ಕೆ ಇಳಿಯಿತು. ಆದರೆ, ನಂತರ ನಾಲ್ಕನೇ ಪಂದ್ಯದಲ್ಲಿ ಭಾರತದ ಪುರುಷರ ಡಬಲ್ಸ್ ಜೋಡಿಯಾದ ಪ್ರಣವ್ ಚೋಪ್ರಾ ಮತ್ತು ಅಕ್ಷಯ್ ದಿವಾಲ್ಕರ್, 21-15, 19-21, 21-13ರಿಂದ ಆ್ಯಡ್ರಿಯನ್ ಲಿಯು ಮತ್ತು ಡೆರಿಕ್ ನಗ್‌ರನ್ನು ಮಣಿಸಿ ಭಾರತಕ್ಕೆ ನಾಲ್ಕರಘಟ್ಟ ಖಚಿತಪಡಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.