ಮತ್ಸಾ ಸಂತೋಷಿಗೆ ಬೆಳ್ಳಿ ಸ್ವಾತಿಗೆ ಕಂಚಿನ ಕೃಪೆ?
ಡೋಪಿಂಗ್ನಲ್ಲಿ ಸಿಕ್ಕಿಬಿದ್ದ ನೈಜೀರಿಯಾದ ಚಿಕಾರಿಂದ ಚಿನ್ನದ ಪದಕ ವಾಪಸ್ ಸಾಧ್ಯತೆ
ಗ್ಲಾಸ್ಗೋ: ಗ್ಲಾಸ್ಗೋದಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಕ್ರೀಡಾಕೂಟದ ಮಹಿಳೆಯರ 53ಕೆಜಿ ವೇಟ್ಲಿಫ್ಟಿಂಗ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದ ಭಾರತದ ಮತ್ಸಾ ಸಂತೋಷಿಗೆ ಬೆಳ್ಳಿ ಭಾಗ್ಯ ದೊರಕುವ ಸಾಧ್ಯತೆ ಹೆಚ್ಚಿದೆ. ಈ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದ ನೈಜೀರಿಯಾದ ಚಿಕಾ ಅಮಲಾಹಾಸ್ ಅವರು ನಿಷೇಧ ಔಷಧ ಸೇವಿಸಿ ಸಿಕ್ಕಿಬಿದ್ದಿರುವ ಹಿನ್ನೆಲೆಯಲ್ಲಿ ಅವರನ್ನು ಅಮಾನತುಗೊಳಿಸಲಾಗಿದೆ.
ಹೀಗಾಗಿ, ಈಗ ಸಂತೋಷಿ ಅವರು ಗೆದ್ದಿರುವ ಕಂಚು ಬೆಳ್ಳಿಯಾಗಿ ಪರಿವರ್ತನೆಯಾಗಲಿದೆ. ಅಲ್ಲದೆ, ಇದೇ ವಿಭಾಗದಲ್ಲಿ 4ನೇ ಸ್ಥಾನ ಪಡೆದಿದ್ದ ಭಾರತದ ಸ್ವಾತಿ ಸಿಂಗ್ ಅವರಿಗೆ ಕಂಚಿನ ಕೃಪೆಯಾಗುವ ನಿರೀಕ್ಷೆಯಿದೆ. ಚಿಕಾ ಅವರು ನಿಷೇಧಿತ ಔಷಧಿ ಸೇವಿಸಿರುವುದು ಎ ಮಾದರಿಯಿಂದ ದೃಢಪಟ್ಟಿದೆ. ಹೀಗಾಗಿ, ಬಿ ಮಾದರಿಯ ಫಲಿತಾಂಶ ಬರುವವರೆಗೂ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಕಾಮನ್ವೆಲ್ತ್ ಗೇಮ್ಸ್ ಫೆಡರೇಷನ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೈಕ್ ಹೂಪರ್ ಮಂಗಳವಾರ ತಿಳಿಸಿದ್ದಾರೆ. ಎ ಮಾದರಿ ಪರೀಕ್ಷೆಯಲ್ಲಿ 16 ವರ್ಷದ ಚಿಕಾ ನಿಷೇಧಿತ ಔಷಧ ಸೇವಿಸಿರುವುದು ಖಚಿತಪಟ್ಟಿದೆ. ಈ ಸಮಯದಲ್ಲಿ ನಾವು ಸರಿಯಾದ ಪ್ರಕ್ರಿಯೆಯನ್ನು ಅನುಸರಿಸುತ್ತಿದ್ದು, ಸದ್ಯಕ್ಕೆ ಅವರನ್ನು ಅಮಾನತುಗೊಳಿಸಲಾಗಿದೆ ಎಂದಿದ್ದಾರೆ ಹೂಪರ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

