ಕ್ರೀಡೆ

ಚಾಂಪಿಯನ್ಸ್ ಲೀಗ್: ಮುಂಬೈ ಇಂಡಿಯನ್ಸ್‌ಗೆ ಮಾಲಿಂಗ ಒಲವು

Published On :

ಕೊಲಂಬೊ: ಮುಂಬರುವ ಚಾಂಪಿಯನ್ಸ್ ಲೀಗ್ ಟಿ20 ಪಂದ್ಯಾವಳಿಯಲ್ಲಿ ಶ್ರೀಲಂಕಾದ ಸೌಥರನ್ ಎಕ್ಸ್‌ಪ್ರೆಸ್ ತಂಡ ಆಯ್ಕೆಯಾಗಿದ್ದು, ಶ್ರೀಲಂಕಾದ ವೇಗಿ ಲಸಿತ್ ಮಾಲಿಂಗ ತಮ್ಮ ಸ್ವದೇಶಿ ತಂಡದ ಬದಲು ಮುಂಬೈ ಇಂಡಿಯನ್ಸ್ ತಂಡದ ಪರ ಆಡಲು ನಿರ್ಧರಿಸಿದ್ದಾರೆ.
ಮುಂಬರುವ ಸೆಪ್ಟೆಂಬರ್‌ನಲ್ಲಿ ಚಾಂಪಿಯನ್ಸ್ ಲೀಗ್ ಟಿ20 ಪಂದ್ಯಾವಳಿ ನಡೆಯಲಿದ್ದು, ಲಸಿತ್ ಮಾಲಿಂಗ ಮುಂಬೈ ಪರ ಆಡಲು ಇಚ್ಛಿಸಿರುವುದಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿ ಅಧಿಕಾರಿಯೊಂದಿಗೆ ಚರ್ಚಿಸಿದ್ದಾರೆ.
ಶ್ರೀಲಂಕಾ ಕ್ರಿಕೆಟ್ ಸಂಸ್ಥೆ ಕಾರ್ಯದರ್ಶಿ ನಿಶಾಂತ ರಣತುಂಗಾ ಅವರೊಂದಿಗೆ ಚರ್ಚಿಸಿರುವ ಮಾಲಿಂಗ ಐಪಿಎಲ್ ತಂಡದ ಪರವಾಗಿ ಆಡಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ. ಸೌಥರನ್ ಎಕ್ಸ್‌ಪ್ರೆಸ್ ಪರವಾಗಿ ಮಾಲಿಂಗಾ ಆಡಬೇಕು ಎಂದು ಅಪೇಕ್ಷಿಸಿದ್ದೇವು. ಆದರೆ ಮಾಲಿಂಗ ಅವರು ಮುಂಬೈ ಇಂಡಿಯನ್ಸ್ ಪರವಾಗಿ ಆಡಲು ಒಲವು ತೋರಿದ್ದಾರೆ ಎಂದು ರಣತುಂಗಾ ತಿಳಿಸಿದ್ದಾರೆ. ಪ್ರಸಕ್ತ ಐಪಿಎಲ್, ಎಸ್‌ಎಲ್‌ಸಿ ಹಾಗೂ ಚಾಂಪಿಯನ್ಸ್ ಲೀಗ್‌ನ ಜತೆಗಿನ ಒಪ್ಪಂಧದ ಪ್ರಕಾರ ಆಟಗಾರ ಯಾವ ತಂಡದಲ್ಲಿ ಆಡಲು ಬಯಸುತ್ತಾನೊ, ಆ ತಂಡದ ಪರ ಆಡಲು ಅನುಮತಿ ನೀಡಬೇಕು ಎಂದು ತಿಳಿಸಲಾಗಿದೆ. ಹಾಗಾಗಿ ಮಾಲಿಂಗ ಅವರು ಮುಂಬೈ ಇಂಡಿಯನ್ಸ್ ಪರ ಆಡಲು ಅನುಮತಿ ನೀಡಲಾಗಿದೆ ಎಂದು ಅವರು ವಿವರಿಸಿದರು.
ಮಾಲಿಂಗ ಶ್ರೀಲಂಕಾದ ಟಿ20 ಟೂರ್ನಿ ಸೂಪರ್ ಫೋರ್ಸ್‌ನಲ್ಲಿ ಸೌಥರನ್ ಎಕ್ಸ್‌ಪ್ರೆಸ್ ತಂಡ ಚಾಂಪಿಯನ್ ಆಗುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.