ಕನ್ನಡಿಗ ವಿಕಾಸ್ಗೆ ಚಿನ್ನ

ಗ್ಲಾಸ್ಗೋ: ಶ್ರೇಷ್ಠ ಪ್ರದರ್ಶನ ತೋರಿದ ಕರ್ನಾಟಕದ ವಿಕಾಸ್ ಗೌಡ, ಪುರುಷರ ಡಿಸ್ಕಸ್ ಥ್ರೋ ವಿಭಾಗದಲ್ಲಿ ಚಿನ್ನದ ಪದಕ ಬಾಚಿಕೊಂಡರು. ಇದರೊಂದಿಗೆ 20ನೇ ಕಾಮನ್ವೆಲ್ತ್ ಕ್ರೀಡಾಕೂಟದ ಅಥ್ಲೆಟಿಕ್ಸ್ ವಿಭಾಗದಲ್ಲಿ ವಿಕಾಸ್, ಭಾರತಕ್ಕೆ ಮೊದಲ ಪದಕ ತಂದುಕೊಟ್ಟರು. 31 ವರ್ಷದ ವಿಕಾಸ್ ಗೌಡ ನಾಲ್ಕು ವರ್ಷಗಳ ಹಿಂದೆ ಡೆಲ್ಲಿ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ತಾವು ಗೆದ್ದ ಬೆಳ್ಳಿ ಪದಕವನ್ನು ಈಗ ಚಿನ್ನವಾಗಿ ಪರಿವರ್ತಿಸಿಕೊಂಡಿದ್ದಾರೆ. 63.64 ಅಂತರ ಎಸೆದ ಗೌಡ ಅವರು ಚಿನ್ನ ಪದಕಕ್ಕೆ ಭಾಜನರಾದರು. ಈ ವಿಭಾಗದಲ್ಲಿ 63.32 ಮೀಟರ್ ಎಸೆದ ಸಿಪ್ರಿಯಾಟ್ನ ಅಪೊಸ್ಟೋಲಾಸ್ ಪಾರೆಲ್ಲೀಸ್ ಅವರು ಬೆಳ್ಳಿ ಗೆದ್ದುಕೊಂಡರು. ಇನ್ನು 62.34 ಮೀಟರ್ ದೂರ ಎಸೆದ ಜಮೈಕಾದ ಜಾಸನ್ ಮಾರ್ಗನ್ ಅವರು ಕಂಚಿನ ಪದಕ ತಮ್ಮದಾಗಿಸಿಕೊಂಡರು. ಬುಧವಾರ ನಡೆದ ಹೀಟ್ಸ್ನ ಮೊದಲ ಯತ್ನದಲ್ಲಿ 64.32 ಮೀಟರ್ ಅಂತರ ಎಸೆದಿದ್ದ ವಿಕಾಸ್ ಗೌಡ ಮೊದಲ ಸ್ಥಾನ ಗಿಟ್ಟಿಸುವ ಮೂಲಕ ಫೈನಲ್ ಪ್ರವೇಶಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


