ಕ್ರೀಡೆ

ಮಿಂಚಿದ ಶರತ್ ಕಮಲ್, ಅಮಲ್ರಾಜ್

ಮಿಂಚಿದ ಶರತ್ ಕಮಲ್, ಅಮಲ್ರಾಜ್
Published On :

ಗ್ಲಾಸ್ಗೋ: ಭಾರತದ ಭರವಸೆಯ ಟೇಬಲ್ ಟೆನಿಸ್ ಆಟಗಾರರಾದ ಅಚಂತ್ ಶರತ್ ಕಮಲ್ ಹಾಗೂ ಆಂಥೋನಿ ಅಮಲ್ರಾಜ್ ತಮ್ಮ ಡಬಲ್ಸ್ ವಿಭಾಗದ ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ, ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ತಮ್ಮ ಅಭಿಯಾನ ಮುಂದುವರಿಸಿದ್ದಾರೆ. ಗುರುವಾರ ನಡೆದ ಮಿಶ್ರ ಡಬಲ್ಸ್ ವಿಭಾಗದ ಮೂರನೇ ಸುತ್ತಿನಲ್ಲಿ ಶರತ್ ಕಮಲ್ ಹಾಗೂ ಶಾಮಿನಿ ಕುಮಾರೆಸನ್, ಮಲೇಷ್ಯಾ ಜೋಡಿ ಯಿಂಗ್ ಹೊ ಮತ್ತು ಚೀ ಫೆಂಗ್ ವಿರುದ್ಧ 11-5 11-8 11-8 ಅಂಕಗಳ ಅಂತರದಲ್ಲಿ ಗೆಲವು ದಾಖಲಿಸಿದರು. ಇನ್ನು ಮತ್ತೊಂದು ಮಿಶ್ರ ಡಬಲ್ಸ್ನ ಮೂರನೇ ಸುತ್ತಿನ ಪಂದ್ಯದಲ್ಲಿ ಭಾರತದ ಅಮಲ್ರಾಜ್ ಹಾಗೂ ಮಧುರಿಕಾ, ಎದುರಾಳಿ ಟ್ರಿನಿಡಾಡ್ ಅಂಡ್ ಟೊಬೇಗೊದ ಡೆಕ್ಸ್ಸ್ಟರ್ ಮತ್ತು ರೀನ್ ಚುಂಗ್ ವಿರುದ್ಧ 11-4, 11-9, 9-11, 11-4 ಅಂತರದ ಗೆಲವು ದಾಖಲಿಸಿದರು.
ಇನ್ನು ಪುರುಷರ ಡಬಲ್ಸ್ ವಿಭಾಗದಲ್ಲಿ ಶರತ್ ಕಮಲ್ ಹಾಗೂ ಅಮಲ್ರಾಜ್ ತಮ್ಮ ಎದುರಾಳಿ ಜಾಂಬಿಯಾದ ಸಿಮಸೈಕು ಕಲಾಲುಕಾ ಮತ್ತು ಫ್ರೀಡೆ ನಗಾಂದು ವಿರುದ್ಧ 3-0 (11-6, 11-4, 11-3) ಅಂತರದ ಗೆಲವು ದಾಖಲಿಸಿದರು. ಇನ್ನು ಸೌಮ್ಯಜಿತ್ ಘೋಶ್ ಹಾಗೂ ಪೌಲಮಿ ಘಟಕ್ ತೀವ್ರ ಹೋರಾಟದ ನಡುವೆಯೂ ಇಂಗ್ಲೆಂಡ್ನ ವಾಲ್ಕರ್ ಮತ್ತು ಲೆ ಫೆವ್ರೆ ವಿರುದ್ಧ 2-3 (11-9, 10-12, 11-8, 1-11, 8-11) ಅಂತರದಲ್ಲಿ ಸೋಲನುಭವಿಸಿದರು.
ಕ್ವಾರ್ಟರ್ಗೆ ಮನಿಕಾ: ಭಾರತದ ಮಹಿಳಾ ಟೇಬಲ್ ಟೆನಿಸ್ಪಟು ಮನಿಕಾ ಬಾತ್ರಾ ಸಿಂಗಲ್ಸ್ ವಿಭಾಗದಲ್ಲಿ ತಮ್ಮ ಅಭಿಯಾನ ಮುಂದುವರಿಸಿದ್ದು, ಕ್ವಾರ್ಟರ್ಫೈನಲ್ ಸುತ್ತಿಗೆ ಪ್ರವೇಶಿಸಿದ್ದಾರೆ. ಈ ಮೂಲಕ ಪ್ರಸಕ್ತ ಕ್ರೀಡಾಕೂಟದಲ್ಲಿ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಈ ಸುತ್ತಿಗೆ ಪ್ರವೇಶಿಸಿದ ಮೊದಲ ಆಟಗಾರ್ತಿಯಾಗಿದ್ದರೆ. ಗುರುವಾರ ನಡೆದ ಪಂದ್ಯದಲ್ಲಿ ಮನಿಕಾ ಎದುರಾಳಿ ಕೆನಡಾದ ಆ್ಯಂಕಿ ಲೌ ವಿರುದ್ಧ 11-13, 11-7, 8-11, 11-2, 11-7, 11-9 ಗೆಲವು ದಾಖಲಿಸಿದರು. ಆರಂಭಿಕ ಎರಡು ಗೇಮ್ನಲ್ಲಿ ಹಿನ್ನಡೆ ಅನುಭವಿಸಿದ್ದ ಮನಿಕಾ ನಂತರದ ಮೂರು ಗೇಮ್ನಲ್ಲಿ ಅದ್ಭುತ ಪ್ರದರ್ಶನ ನೀಡಿ ಗೆಲವು ದಾಖಲಿಸಿದರು. ಮನಿಕಾ ಮುಂದಿನ ಸುತ್ತಿನಲ್ಲಿ 41ನೇ ರ್ಯಾಂಕಿಂಗ್ನ ಸಿಂಗಾಪುರದ ಯೆ ಲಿನ್ ವಿರುದ್ಧ ಸೆಣೆಸಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.