ಭಾರತಕ್ಕೆ 5 ಪದಕ ಖಚಿತ

ಗ್ಲಾಸ್ಗೋ: ಎದುರಾಳಿಯ ವಿರುದ್ಧ ಸಂಪೂರ್ಣ ನಿಯಂತ್ರಣ ಸಾಧಿಸಿದ ಭಾರತದ ಭರವಸೆಯ ಬಾಕ್ಸರ್ ವಿಜೇಂದರ್ ಸಿಂಗ್, ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಸೆಮಿಫೈನಲ್ ಸುತ್ತಿಗೆ ಪ್ರವೇಶಿಸಿದ್ದಾರೆ. ಈ ಮೂಲಕ ಒಂದು ಪದಕವನ್ನು ಖಚಿತ ಪಡಿಸಿದ್ದಾರೆ. ಅಲ್ಲದೆ ವಿಜೇಂದರ್ ಜತೆಗೆ ಇನ್ನು ನಾಲ್ವರು ಬಾಕ್ಸರ್ಗಳು ಭಾರತಕ್ಕೆ ಪಕ ಖಚಿತ ಪಡಿಸಿದ್ದಾರೆ. ಗುರುವಾರ ನಡೆದ ಪುರುಷರ 75 ಕೆ.ಜಿ ವಿಭಾಗದ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ವಿಜೇಂದರ್ ಕುಮಾರ್, ತಮ್ಮ ಎದುರಾಳಿ ಟ್ರಿನಿಡಾಡ್ ಅಂಡ್ ಟೊಬೇಗೊದ ಆ್ಯರೋನ್ ಪ್ರಿನ್ಸ್ ವಿರುದ್ಧ ಗೆಲವು ದಾಖಲಿಸಿದ್ದಾರೆ. ಪಂದ್ಯದುದ್ದಕ್ಕೂ ನಿಯಂತ್ರಣ ಸಾಧಿಸಿದ 2008ರ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ವಿಜೇಂದರ್, 3-0 ಅಂತರದಲ್ಲಿ ಗೆಲವು ದಾಖಲಿಸಿದರು. ವಿಜೇಂದರ್ ಸಿಂಗ್ ತಮ್ಮ ಮುಂದಿನ ಪಂದ್ಯದಲ್ಲಿ ನೈಜೀರಿಯಾದ ಕೊನೊರ್ ಕೊಯ್ಲೆ ವಿರುದ್ಧ ಸೆಣೆಸಾಡಲಿದ್ದಾರೆ. ಉಳಿದಂತೆ ಸರಿತಾ ದೇವಿ, ಮತ್ತು ಪಿಂಕಿ ಜಾಂಗ್ರಾ ಸಹ ಕ್ರಮವಾಗಿ 57 ಹಾಗೂ 60 ಕೆ.ಜಿ ವಿಭಾಗದಲ್ಲಿ ಉಪಾಂತ್ಯದ ಸುತ್ತಿಗೆ ಪ್ರವೇಶಿಸಿದ್ದಾರೆ.
ಇನ್ನು ಪುರುಷರ ವಿಭಾಗದಲ್ಲಿ ಮಂದೀಪ್ ಜಾಂಗ್ರಾ 69 ಕೆ.ಜಿ ವಿಭಾಗದಲ್ಲಿ ಉಪಾಂತ್ಯದ ಸುತ್ತಿಗೆ ತಲುಪಿದ್ದು, ಕ್ರೀಡಾಕೂಟಕ್ಕೆ ಪದಾರ್ಪಣೆ ಮಾಡಿದ ಆವೃತ್ತಿಯಲ್ಲೇ ಪದಕ ಪಡೆಯಲಿದ್ದಾರೆ. ಮತ್ತೊರ್ವ ಯುವ ಬಾಕ್ಸರ್ ಅಖಿಲ್ ಕುಮಾರ್, ಎದುರಾಳಿ ಫಿಟ್ ಇರದ ಕಾರಣ ರಿಂಗ್ಗೆ ಬಾರದೇ ಇದ್ದಕ್ಕಾಗಿ ಉಪಾಂತ್ಯದ ಹಂತಕ್ಕೆ ಪ್ರವೇಶಿಸಿದ್ದಾರೆ. ಉಳಿದಂತೆ 91 ಕೆ.ಜಿ ವಿಭಾಗದಲ್ಲಿ ಅಮೃತ್ಪ್ರೀತ್ ಸಿಂಗ್ ತಮ್ಮ ಪಂದ್ಯದಲ್ಲಿ ಎದುರಾಳಿ ಸ್ಕಾಟ್ಲೆಂಡ್ನ ಸ್ಟೀಫನ್ ಲಾವೆಲ್ಲಿ ವಿರುದ್ಧ ಸೋಲನುಭವಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


