ಕ್ರೀಡೆ

ವಿಶ್ವಕಪ್ ಶೂಟಿಂಗ್ ಚಾಂಪಿಯನ್‌ಶಿಪ್: ಜಿತು ರೈಗೆ ಬೆಳ್ಳಿ ಪದಕ

Published On :

ಮ್ಯೂನಿಚ್: ಭಾರತದ ಗುರಿಕಾರ ಜಿತು ರೈ ಅವರು ಮ್ಯೂನಿಚ್‌ನಲ್ಲಿ ನಡೆದ ಐಎಸ್‌ಎಸ್‌ಎಫ್ ವಿಶ್ವಕಪ್ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ.
ಬುಧವಾರ ನಡೆದ ಪುರುಷರ 10 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಜಿತು ರೈ ಈ ಸಾಧನೆ ಮಾಡಿದರು. 27ರ ಭಾರತೀಯ ಗುರಿಕಾರ ಫೈನಲ್ ಸುತ್ತಿನಲ್ಲಿ ಆಕರ್ಷಕ ಪ್ರದರ್ಶನ ನೀಡಿ 199.4 ಅಂಕಗಳ ಸಂಪಾದನೆಯೊಂದಿಗೆ ಅಗ್ರಸ್ಥಾನ ಪಡೆದರು.
ಇದಕ್ಕೂ ಮೊದಲು ಲಖನೌ ಮೂಲದ ಜಿತು ರೈ ಅರ್ಹತಾ ಹಂತದಲ್ಲಿ ಒಟ್ಟು 583ರ ಸರಾಸರಿಯೊಂದಿಗೆ ಅಂತಿಮ ಹಂತಕ್ಕೆ ಅರ್ಹತೆ ಪಡೆದುಕೊಂಡಿದ್ದರು. ಭಾರತದ ಮತ್ತೊಬ್ಬ ಶೂಟರ್ ಪ್ರಕಾಶ್ ನಂಜಪ್ಪ ಏಳನೇ ಸ್ಥಾನಕ್ಕೆ ತೃಪ್ತಿಗೊಂಡರು. ಫೈನಲ್‌ನಲ್ಲಿ ಅವರು 97.1 ಅಂಕಗಳಿಸಲಷ್ಟೇ ಶಕ್ತರಾದರು.
ಸ್ಪೇನಿಲ ಪಾಬ್ಲೊ ಕಾರೆರಾ 201.3 ಅಂಕಗಳ ಸಾಧನೆಯೊಂದಿಗೆ ಚಿನ್ನದ ಪದಕ ಹಾಗೂ ಉಕ್ರೇನಿನ ಪಾವ್ಲೊ ಕೊರೊಸ್ಟೈಲೊವ್ ಕಂಚಿನ ಪದಕ ಗೆದ್ದುಕೊಂಡರು.
ಪುರುಷರ 50 ಮೀಟರ್ ರೈಫಲ್ 3- ಪೋಸಿಷನ್‌ನಲ್ಲಿ ಒಲಿಂಪಿಕ್ ಕಂಚಿನ ಪದಕ ವಿಜೇತ ಗಗನ್ ನಾರಂಗ್ ನಿರಾಶಾದಾಯಕ ಪ್ರದರ್ಶನದೊಂದಿಗೆ ಅರ್ಹತಾ ಹಂತದಲ್ಲಿ 8ನೇ ಸ್ಥಾನಕ್ಕೆ ಸಮಾಧಾನಗೊಂಡರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.