ವಿಶ್ವಕಪ್ ಹಿನ್ನೆಲೆ ಆಸ್ಟ್ರೇಲಿಯಾಕ್ಕೆ ಭಾರತ ಪ್ರವಾಸ
ಮೆಲ್ಬೋರ್ನ್: ಹಾಲಿ ಚಾಂಪಿಯನ್ ಭಾರತ ತಂಡ ಮುಂಬರುವ 50 ಓವರುಗಳ ವಿಶ್ವಕಪ್ ಪಂದ್ಯಾವಳಿಗಾಗಿ ಆಸ್ಟ್ರೇಲಿಯಾದ ವಾತಾವರಣಕ್ಕೆ ಹೊಂದಿಕೊಳ್ಳುವ ಉದ್ದೇಶದಿಂದ ಆತಿಥೇಯ ತಂಡದ ವಿರುದ್ಧ ಟೆಸ್ಟ್, ಏಕದಿನ ಮತ್ತು ಟಿ-20 ಅಂತಾರಾಷ್ಟ್ರೀಯ ಪಂದ್ಯಗಳ ಸರಣಿ ಆಡಲು ನಿರ್ಧರಿಸಿದೆ.
2015ರಲ್ಲಿ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ಫೆಬ್ರವರಿ 14ರಿಂದ ಆರಂಭವಾಗಲಿದ್ದು, ಮಾರ್ಚ್ 29ಕ್ಕೆ ಕೊನೆಗೊಳ್ಳಲಿದೆ. ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ನ ಜಂಟಿ ಆತಿಥ್ಯದಲ್ಲಿ ಈ ಟೂರ್ನಿ ನಡೆಯಲಿದೆ. ಹಾಗಾಗಿ, ಈ ಟೂರ್ನಿಗೆ ಮುನ್ನ ಭಾರತೀಯ ಕ್ರಿಕೆಟಿಗರು ನವಂಬರ್ 5ರಿಂದ ಫೆಬ್ರವರಿ 5ರ ವರೆಗೆ ಆಸ್ಟ್ರೇಲಿಯಾ ವಿರುದ್ಧ 3 ಟಿ-20, 5 ಪಂದ್ಯಗಳ ಏಕದಿನ ಮತ್ತು 4 ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ. ಬಳಿಕ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳನ್ನು ಒಳಗೊಂಡಂತೆ ಏಕದಿನ ತ್ರಿಕೋನ ಕ್ರಿಕೆಟ್ ಸರಣಿಯಲ್ಲೂ ಭಾರತ ತಂಡ ಪಾಲ್ಗೊಳ್ಳಲಿದೆ. ಕ್ರಿಕೆಟ್ ಆಸ್ಟ್ರೇಲಿಯಾ ಸೋಮವಾರ ವೇಳಾಪಟ್ಟಿ ಬಿಡುಗಡೆ ಮಾಡಿದೆ.
ಟಿ-20 ಸರಣಿ: ನವೆಂಬರ್ 5: ಮೊದಲ ಪಂದ್ಯ, ಅಡಿಲೇಡ್, ನ.7: ಎರಡನೇ ಪಂದ್ಯ, ಮೆಲ್ಬೋರ್ನ್, ನ.9: ಮೂರನೇ ಪಂದ್ಯ, ಸಿಡ್ನಿ
ಏಕದಿನ ಸರಣಿ: ನ.14: ಮೊದಲ ಏಕದಿನ, ಪರ್ತ್, ನ.16: ಎರಡನೇ ಏಕದಿನ, ಪರ್ತ್, ನ. 19: ಮೂರನೇ ಏಕದಿನ, ಕ್ಯಾನ್ಬೆರಾ, ನ. 21: ನಾಲ್ಕನೇ ಏಕದಿನ, ಮೆಲ್ಬೋರ್ನ್, ನ. 23: ಐದನೇ ಏಕದಿನ, ಸಿಡ್ನಿ
ಟೆಸ್ಟ್ ಸರಣಿ: ಡಿಸೆಂಬರ್ 4-8: ಮೊದಲ ಟೆಸ್ಟ್, ಬ್ರಿಸ್ಬೇನ್, ಡಿ. 12-16: ಎರಡನೇ ಟೆಸ್ಟ್, ಅಡಿಲೇಡ್, ಡಿ. 26-30: ಮೂರನೇ ಟೆಸ್ಟ್, ಮೆಲ್ಬೋರ್ನ್, ಜನವರಿ 3-7: ನಾಲ್ಕನೇ ಟೆಸ್ಟ್, ಸಿಡ್ನಿ
ತ್ರಿಕೋನ ಸರಣಿ: ಜ.16: ಆಸ್ಟ್ರೇಲಿಯಾ-ಭಾರತ, ಮೆಲ್ಬೋರ್ನ್, ಜ.18: ಆಸ್ಟ್ರೇಲಿಯಾ-ಇಂಗ್ಲೆಂಡ್, ಸಿಡ್ನಿ, ಜ. 20: ಇಂಗ್ಲೆಂಡ್-ಭಾರತ, ಬ್ರಿಸ್ಬೇನ್, ಜ. 23: ಆಸ್ಟ್ರೇಲಿಯಾ-ಇಂಗ್ಲೆಂಡ್, ಹೋಬರ್ಟ್, ಜ. 26: ಆಸ್ಟ್ರೇಲಿಯಾ-ಭಾರತ, ಸಿಡ್ನಿ, ಜ.30: ಇಂಗ್ಲೆಂಡ್-ಭಾರತ, ಪರ್ತ್, ಫೆಬ್ರವರಿ 1: ಫೈನಲ್ ಪಂದ್ಯ, ಪರ್ತ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

