ಅಫ್ರಿದಿ ಆವೇಶ, ಭಾರತಕ್ಕೆ ಕ್ಲೇಶ
ಮಿರ್ಪುರ: ಕೊನೆಯ ಓವರ್ವರೆಗೂ ತೀವ್ರ ರೋಚಕವಾಗಿ ನಡೆದ ಪಂದ್ಯದಲ್ಲಿ ಭಾರತ ತಂಡದ ವಿರುದ್ಧ ಒಂದು ವಿಕೆಟ್ ಅಂತರದಿಂದ ಜಯಿಸುವಲ್ಲಿ ಯಶಸ್ವಿಯಾದ ಪಾಕಿಸ್ತಾನ ತಂಡ, ಏಷ್ಯಾಕಪ್ ಫೈನಲ್ನನತ್ತ ಹೆಜ್ಜೆ ಹಾಕಿದೆ.
ಅಂತ್ಯದವರೆಗೂ ಉಭಯ ತಂಡಗಳಿಗೆ ಗೆಲ್ಲಲು ಅವಕಾಶವಿದ್ದ ಪಂದ್ಯದಲ್ಲಿ, ಶಾಹಿದ್ ಅಫ್ರಿದಿ (ಅಜೇಯ 34) ಸ್ಫೋಟಕ ಬ್ಯಾಟಿಂಗ್ ನೆರವಿನೊಂದಿಗೆ ಪಾಕಿಸ್ತಾನ ತಂಡ ಜಯ ಕಂಡುಕೊಂಡಿತು. ಕೇವಲ 18 ಎಸೆತಗಳನ್ನು ಎದುರಿಸಿದ ಅಫ್ರಿದಿ ಮೊತ್ತದಲ್ಲಿ 3 ಸಿಕ್ಸರ್ ಮತ್ತು 2 ಬೌಂಡರಿಗಳು ಸೇರಿದ್ದವು. ಅಫ್ರಿದಿ ಆಪದ್ಭಾಂದವರಾಗುವುದರೊಂದಿಗೆ, ಭಾರತ ನೀಡಿದ್ದ 246 ರನ್ ಗುರಿ ಬೆನ್ನಟ್ಟಿದ ಪಾಕಿಸ್ತಾನ, ಇನ್ನೂ ಎರಡು ಎಸೆತಗಳು ಬಾಕಿ ಇರುವಂತೆ 9 ವಿಕೆಟ್ ನಷ್ಟಕ್ಕೆ 249 ರನ್ ಗಳಿಸಿ ಜಯದ ಕೇಕೆ ಹಾಕಿತು.ಆರಂಭಿಕರಾದ ಶಾರ್ಜಿಲ್ ಖಾನ್ (25) ಮತ್ತು ಅಹ್ಮದ್ ಶಹಜಾದ್ (42) ಅವರು ಮೊದಲ ವಿಕೆಟ್ಗೆ 75ರನ್ ಗಳಿಸುವ ಮೂಲಕ ಪಾಕ್ಗೆ ಭದ್ರ ಬುನಾದಿ ಹಾಕಿಕೊಟ್ಟರು. ನಂತರ ತಾಳ್ಮೆಯ ಬ್ಯಾಟಿಂಗ್ ಪ್ರದರ್ಶಿಸಿದ ಮೊಹ್ಮದ್ ಹಫೀಜ್ (75) ತಂಡವನ್ನು ಜಯದ ಹಾದಿ ಹಿಡಿಸಿದರು. ಒಂದು ಹಂತದಲ್ಲಿ 203 ರನ್ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಪಾಕಿಸ್ತಾನ ವಿಜಯ ಕಾಣಲು, ಅಫ್ರಿದಿ ಪ್ರಮುಖ ಪಾತ್ರ ವಹಿಸಿದರು. ಭಾರತದ ಆಕರ್ಷಕ ಬೌಲಿಂಗ್ ಪ್ರದರ್ಶಿಸಿದ ಆರ್. ಅಶ್ವಿನ್ 3 ವಿಕೆಟ್ ಕಬಳಿಸಿದರೆ, ಭುವನೇಶ್ವರ ಕುಮಾರ್ ಮತ್ತು ಅಮಿತ್ ಮಿಶ್ರಾ ತಲಾ 2 ವಿಕೆಟ್ ಪಡೆದರು.
ಇದಕ್ಕೂ ಮುನ್ನ ಟಾಸ್ ಸೋತರೂ, ಬ್ಯಾಟಿಂಗ್ ಅವಕಾಶ ಪಡೆದ ಭಾರತ ತಂಡ ಬ್ಯಾಟಿಂಗ್ ವೈಫಲ್ಯ ಕಾಣುವ ಮೂಲಕ, ಕೆಳಕ್ರಮಾಂಕದಲ್ಲಿ ರವೀಂದ್ರ ಜಡೇಜಾ (ಅಜೇಯ 52) ಆಕರ್ಷಕ ಅರ್ಧ ಶತಕ ದಾಖಲಿಸುವುದರೊಂದಿಗೆ 245 ರನ್ಗಳ ಸಾಧಾರಣ ಮೊತ್ತ ಕಲೆ ಹಾಕಿತ್ತು. ಆರಂಭಿಕ ಆಟಗಾರ ರೋಹಿತ್ ಶರ್ಮಾ (56) ಕೊನೆಗೂ ಲಯ ಕಂಡುಕೊಂಡಿದ್ದಾರೆ. ಅಂಬಟಿ ರಾಯುಡು (58) ಸಹ ತಂಡಕ್ಕೆ ತಮ್ಮ ಕೊಡುಗೆಯನ್ನು ನೀಡಿದರು. ಆದರೆ, ಇತರ ಬ್ಯಾಟ್ಸ್ಮನ್ಗಳು ಸಮರ್ಥ ಬ್ಯಾಟಿಂಗ್ ನಡೆಸುವಲ್ಲಿ ವೈಫಲ್ಯ ಕಂಡರು.
62 ಎಸೆತಗಳನ್ನು ಎದುರಿಸಿದ ರಾಯುಡು ಅರ್ಧ ಶತಕದಲ್ಲಿ 1 ಸಿಕ್ಸರ್ ಮತ್ತು 4 ಬೌಂಡರಿಗಳು ಸೇರಿದ್ದರೆ, 49 ಎಸೆತಗಳನ್ನು ಎದುರಿಸಿದ ಜಡೇಜಾ ಅರ್ಧ ಶತಕದಲ್ಲಿ 2 ಸಿಕ್ಸರ್ ಮತ್ತು 4 ಬೌಂಡರಿಗಳು ಸೇರಿದ್ದವು. ರೋಹಿತ್ ಶರ್ಮಾ ಅರ್ಧ ಶತಕದಲ್ಲಿ 2 ಸಿಕ್ಸರ್ ಮತ್ತು 7 ಬೌಂಡರಿಗಳು ಸೇರಿದ್ದವು.
ಇನ್ನು ಪಾಕಿಸ್ತಾನದ ಪರ ಗಮನ ಸೆಳೆಯುವ ಬೌಲಿಂಗ್ ಪ್ರದರ್ಶಿಸಿದ ಸಯೀದ್ ಅಜ್ಮಲ್ 40 ರನ್ ನೀಡಿ 3 ವಿಕೆಟ್ ಕಬಳಿಸಿದರು. ಅಂತಿಮ ಓವರ್ಗಳಲ್ಲಿ ಬೌಲಿಂಗ್ ಮೇಲೆ ಹಿಡಿತ ಸಾಧಿಸಿದ ಅಜ್ಮಲ್ ಭಾರತ ತಂಡ 250 ರನ್ಗಳ ಗಡಿ ದಾಟದಂತೆ ನೋಡಿಕೊಂಡರು. ಇನ್ನು ಪಂದ್ಯದಲ್ಲಿ ಪದಾರ್ಪಣೆ ಮಾಡಿದ ಪಾಕ್ನ ವೇಗಿ ಮೊಹ್ಮದ್ ತಲ್ಹಾ 22 ರನ್ ನೀಡಿ 2 ವಿಕೆಟ್ ಕಬಳಿಸಿದರೆ, ಸ್ಪಿನ್ನರ್ ಮೊಹ್ಮದ್ ಹಫೀಜ್ 38 ರನ್ ನೀಡಿ 2 ವಿಕೆಟ್ ತಮ್ಮದಾಗಿಸಿಕೊಂಡರು.
12 ರನ್ ಗಳಿಸಿ ಆಡುತ್ತಿದ್ದಾಗ 43ನೇ ಓವರ್ನ ಅಂತಿಮ ಎಸೆತದಲ್ಲಿ ಮೊಹ್ಮದ್ ಹಫೀಜ್ ಜೀವದಾನ ನೀಡಿದ್ದನ್ನು ಸದುಪಯೋಗ ಪಡಿಸಿಕೊಂಡ ಜಡೇಜಾ, ಏಕದಿನ ಕ್ರಿಕೆಟ್ನಲ್ಲಿ ತಮ್ಮ 9ನೇ ಅರ್ಧ ಶತಕ ಪೂರೈಸಿದರು.
ಆರಂಭದಲ್ಲಿ ಶಿಖರ್ ಧವನ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದ ಮೊಹ್ಮದ್ ಹಫೀಜ್ ಅವರು ಪಾಕಿಸ್ತಾನಕ್ಕೆ ಮೊದಲ ವಿಕೆಟ್ ದೊರಕಿಸಿಕೊಟ್ಟರು. ನಂತರ ಮಧ್ಯಮ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ (5) ಮತ್ತು ಅಜಿಂಕ್ಯ ರಹಾನೆ (23) ವಿಕೆಟ್ ಪಡೆದ ಪಾಕ್ ಪಂದ್ಯದ ಮೇಲೆ ಹಿಡಿತ ಸಾಧಿಸಿತ್ತು.
ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ನಲ್ಲಿ ಸಂಪೂರ್ಣವಾಗಿ ವೈಫಲ್ಯ ಕಂಡಿದ್ದ ರೋಹಿತ್ ಶರ್ಮಾ, ಈ ಪಂದ್ಯದಲ್ಲಿ ವಿಭಿನ್ನ ಪ್ರದರ್ಶನ ತೋರಿದರು.
ಸ್ಕೋರ್ ವಿವರ
ಭಾರತ 50 ಓವರ್ಗಳಲ್ಲಿ 8 ವಿಕೆಟ್ಗೆ 245
ರೋಹಿತ್ ಶರ್ಮಾ ಸಿ ಹಫೀಜ್ ಬಿ ತಲ್ಹಾ 56 (58), ಶಿಖರ್ ಧವನ್ ಎಲ್ಬಿಡಬ್ಲ್ಯೂ ಹಫೀಜ್ 10 (13), ವಿರಾಟ್ ಕೊಹ್ಲಿ ಸಿ ಉಮರ್ ಅಕ್ಮಲ್ ಬಿ ಉಮರ್ ಗುಲ್ 5 (11), ಅಜಿಂಕ್ಯ ರಹಾನೆ ಸಿ ಹಫೀಜ್ ಬಿ ತಲ್ಹಾ 23 (50), ರಾಯುಡು ಸಿ ಅನ್ವರ್ ಅಲಿ ಬಿ ಅಜ್ಮಲ್ 58 (62), ದಿನೇಶ್ ಕಾರ್ತಿಕ್ ಸಿ ಅಜ್ಮಲ್ ಬಿ ಹಫೀಜ್ 23 (46), ರವೀಂದ್ರ ಜಡೇಜಾ ಅಜೇಯ 52 (49), ಆರ್. ಅಶ್ವಿನ್ ಸ್ಟಂಪ್ ಉಮರ್ ಅಕ್ಮಲ್ ಬಿ ಅಜ್ಮಲ್ 9 (7), ಮೊಹ್ಮದ್ ಶಮಿ ಸಿ ಮಖ್ಸೂದ್ ಬಿ ಅಜ್ಮಲ್ 0 (3), ಅಮಿತ್ ಮಿಶ್ರಾ ಅಜೇಯ 1 (1). ಇತರೆ (ಎಲ್ಬಿ-3, ವೈಡ್-5) 8 ವಿಕೆಟ್ ಪತನ: 1-18, 2-56, 3-92, 4-103, 5-155, 6-214,7-237, 8-237.
ಬೌಲಿಂಗ್ ವಿವರ: ಮೊಹ್ಮದ್ ಹಫೀಜ್ 9-0-38-2, ಉಮರ್ ಗುಲ್ 9-0-60-1, ಜುನೈದ್ ಖಾನ್ 7-0-44-0, ಶಾಹಿದ್ ಅಫ್ರಿದಿ 8-0-38-0, ಮೊಹ್ಮದ್ ತಲ್ಹಾ 7-1-22-2, ಸಯಿದ್ ಅಜ್ಮಲ್ 10-0-40-3.
ಪಾಕಿಸ್ತಾನ 49.4 ಓವರ್ಗಳಲ್ಲಿ 9 ವಿಕೆಟ್ಗೆ 249 ಸಾರ್ಜೀಲ್ ಖಾನ್ ಬಿ ಅಶ್ವಿನ್ 25 (30), ಅಹ್ಮದ್ ಶಹಜಾದ್ ಸಿ ಅಶ್ವಿನ್ ಬಿ ಮಿಶ್ರಾ 42 (44), ಮೊಹ್ಮದ್ ಹಫೀಜ್ ಸಿ ಭುವನೇಶ್ವರ ಬಿ ಅಶ್ವಿನ್ 75 (117), ಮಿಸ್ಬಾ ಉಲ್ ಹಕ್ ರನೌಟ್ (ಜಡೇಜಾ/ಮಿಶ್ರಾ) 1 (4), ಉಮರ್ ಅಕ್ಮಲ್ ಸಿ ಜಡೇಜಾ ಬಿ ಮಿಶ್ರಾ 4 (17), ಶೋಯಿಬ್ ಮಖ್ಸೂದ್ ರನೌಟ್ (ಅಶ್ವಿನ್/ಕಾರ್ತಿಕ್) 38 (53), ಶಾಹಿದ್ ಅಫ್ರಿದಿ ಅಜೇಯ 34 (18),
ಉಮರ್ ಗುಲ್ ಸಿ ರಹಾನೆ ಬಿ ಭವನೇಶ್ವರ 12 (12), ಮೊಹ್ಮದ್ ತಲ್ಹಾ ಸಿ ಜಡೇಜಾ ಬಿ ಭುವನೇಶ್ವರ 0 (1), ಸಯಿದ್ ಅಜ್ಮಲ್ ಬಿ ಅಶ್ವಿನ್ 0 (1), ಜುನೈದ್ ಖಾನ್ ಅಜೇಯ 1 (0)
ಇತರೆ: (ಲೆಗ್ಬೈ 11, ವೈಡ್ 6) 17
ವಿಕೆಟ್ ಪತನ: 1-71, 2-93, 3-96, 4-113, 5-200, 6-203, 7-235, 8-236, 9-236.
ಬೌಲಿಂಗ್ ವಿವರ: ಭುವನೇಶ್ವರ ಕುಮಾರ್ 10-0-56-2, ಮೊಹ್ಮದ್ ಶಮಿ 10-0-49-0, ಆರ್. ಅಶ್ವಿನ್ 9.4-0-44-3, ರವೀಂದ್ರ ಜಡೇಜಾ 10-1-61-0, ಅಮಿತ್ ಮಿಶ್ರಾ 10-0-40-3.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

