ನಡಾಲ್, ಸಾನಿಯಾ, ಬೋಪಣ್ಣ ಮುಂಬೈಗೆ
ದುಬೈ: ವಿಶ್ವದ ನಂಬರ್ 1 ಆಟಗಾರ ರಾಫೆಲ್ ನಡಾಲ್ ಉದ್ಘಾಟನಾ ಅಂತಾರಾಷ್ಟ್ರೀಯ ಟೆನಿಸ್ ಪ್ರೀಮಿಯರ್ ಲೀಗ್ನಲ್ಲಿ (ಐಟಿಪಿಎಲ್) ಮುಂಬೈ ತಂಡದ ಪರ ಆಡಲಿದ್ದಾರೆ. ಸಾನಿಯಾ ಮಿರ್ಜಾ, ಮತ್ತು ರೋಹನ್ ಬೋಪಣ್ಣ ಅವರು ಸಹ ಮುಂಬೈ ತಂಡದ ಪರ ಆಡಲಿದ್ದಾರೆ.ಮುಂಬೈ, ಸಿಂಗಾಪುರ, ದುಬೈ ಹಾಗೂ ಬ್ಯಾಂಕಾಕ್ ಸೇರಿದಂತೆ ಪಂದ್ಯಾವಳಿಯಲ್ಲಿ ಒಟ್ಟು ನಾಲ್ಕು ತಂಡಗಳು ಆಡುವುದು ಖಚಿತಪಟ್ಟಿದೆ.
ಇದುವರೆಗೂ ತಂಡದ ಮಾಲೀಕರು ಆಟಗಾರರ ಖರೀದಿಗಾಗಿ, ಒಟ್ಟು ರು. 1,482,302,325 ಹಣ ಖರ್ಚು ಮಾಡಿದ್ದಾರೆ. ಭಾರತದ ಹಿರಿಯ ಟೆನಿಸ್ ತಾರೆ ಮಹೇಶ್ ಭೂಪತಿ ಅವರು ಪಂದ್ಯಾವಳಿಯ ನೀಲ ನಕ್ಷೆಯನ್ನು ರೂಪಿಸಿದ್ದಾರೆ. ಪಂದ್ಯಾವಳಿ ನವೆಂಬರ್ 28ರಿಂದ ಸಿಂಗಾಪುರದಲ್ಲಿ ಆರಂಭವಾಗಿ ಡಿಸೆಂಬರ್ 14ಕ್ಕೆ ದುಬೈನಲ್ಲಿ ಅಂತ್ಯಗೊಳ್ಳಲಿದೆ. ಅಚ್ಚರಿಯ ವಿಷಯವೆಂದರೆ, ಭಾರತದ ಸಿಂಗಲ್ಸ್ ಟೆನಿಸ್ ತಾರೆ ಸೋಮ್ದೇವ್ ದೇವ್ವರ್ಮನ್ ಅವರು ಇದುವರೆಗೂ ಯಾವುದೇ ತಂಡದ ಭಾಗವಾಗಿಲ್ಲ. ರೌಂಡ್ ರಾಬಿನ್ ಪಂದ್ಯಾವಳಿಯಲ್ಲಿ ನಾಲ್ಕು ತಂಡಗಳು ಭಾಗವಹಿಸಲಿದ್ದು, 2014ರ ಋತುವಿನಲ್ಲಿ ಒಟ್ಟು 24 ಪಂದ್ಯಗಳು ನಡೆಯಲಿವೆ.
ಫ್ರಾನ್ಸ್ನ ಗಾಯೆಲ್ ಮಾನ್ಫಿಲ್ಸ್, ಅಮೆರಿಕದ ಪೇಟ್ ಸ್ಯಾಂಪ್ಸ್ ಹಾಗೂ ಅನಾ ಇವಾನೋವಿಚ್, ಫ್ಯಾಬ್ರಿಕ್ ಸ್ಯಾಂಟ್ರೋ ಅವರು ಮುಂಬೈನ್ ಅತರ ಆಟಗಾರರಾಗಿದ್ದಾರೆ. ವಿಶ್ವದ ನಂಬರ್ 2 ಆಟಗಾರ ನೋವಾಕ್ ಜೋಕೊವಿಚ್ ಅವರು ದುಬೈ ತಂಡದ ನಾಯಕತ್ವ ವಹಿಸಲಿದ್ದಾರೆ. ಕಾರೋಲಿನ್ ವೋಜ್ನಿಕಿ, ಗೋರಾನ್ ಇವಾನಿಸ್ವೆವಿಚ್, ಜಂಕೋ ತಿಪ್ಸರ್ವಿಚ್, ನೆನಾದ್ ಜಿಮೋನಿಕ್, ಮಲೆಕ್ ಜಜಾರಿ ಅವರು ದುಬೈ ತಂಡದಲ್ಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

