ಕ್ರೀಡೆ

ಅಶ್ವಿನ್ ನನ್ನ ಪ್ರತಿಸ್ಪರ್ಧಿಯಲ್ಲ: ಹರ್ಭಜನ್ ಸಿಂಗ್

Published On :

ನವದೆಹಲಿ: ಕಳಪೆ ಫಾರ್ಮ್‌ನಿಂದಾಗಿ ಭಾರತ ತಂಡದಿಂದ ಹೊರಗುಳಿದಿರುವ ಹಿರಿಯ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್, ನನಗೆ ನಾನೇ ಸ್ಪರ್ಧಿಯೇ ಹೊರತು ಅಶ್ವಿನ್ ಜತೆ ನಾನು ಸ್ಪರ್ಧೆ ಮಾಡುತ್ತಿಲ್ಲ ಎಂದು ತಿಳಿಸಿದ್ದಾರೆ.
ಇಷ್ಟು ವರ್ಷಗಳ ಕಾಲ ನನಗೆ ಒಬ್ಬ ಸ್ಪರ್ಧಿ ಇದ್ದ ಅದು ನಾನೆ. ನಾನು ಬೇರೆಯವರೊಂದಿಗೆ ಸ್ಪರ್ಧೆ ಮಾಡಲು ಇಚ್ಛಿಸುವುದಿಲ್ಲ. ಹಾಗಾಗಿ ನಾನು ಇಷ್ಟು ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನದಲ್ಲಿ ಏಕಾಂಗಿಯಾಗಿ ಸ್ಪರ್ಧೆ ಮಾಡುತ್ತಾ ಬಂದಿದ್ದೇನೆ. ನಾವು ನಮ್ಮ ಜತೆ ಸ್ಪರ್ಧೆ ನಡೆಸಿ ಕ್ರಿಕೆಟರ್ ಆಗಿ ಬೆಳವಣಿಗೆ ಕಾಣಲು ಪ್ರಯತ್ನಿಸಬೇಕು ಎಂದು ಹರ್ಭಜನ್ ಅಭಿಪ್ರಾಯಪಟ್ಟಿದ್ದಾರೆ. ಇಬ್ಬರು, ಮೂವರು ಅಥವಾ ನಾಲ್ವರ ಜತೆ ಸ್ಪರ್ಧೆ ನಡೆಸುವುದರಲ್ಲಿ ಅರ್ಥವಿಲ್ಲ. ನಿನ್ನ ಸಾಮರ್ಥ್ಯಕ್ಕೆ ನೀನು ಪ್ರದಶಂನ ನೀಡಿ ನಾಲ್ಕು ಜನರು ನಿರ್ಧರಿಸಲು ಬಿಡಬೇಕು. ಅಲ್ಲದೆ ಪ್ರಸ್ತುತ ಭಾರತ ತಂಡದ ಯಾವುದೇ ಆಟಗಾರರ ಬಗ್ಗೆ ಮಾತನಾಡಲು ಇಚ್ಛಿಸುವುದಿಲ್ಲ ಎಂದು ತಿಳಿಸಿದ್ದಾರೆ. ವಯ್ಯಸ್ಸು ಎಂಬುದು ಕೇವಲ ಸಂಖ್ಯೆ ಅಷ್ಟೆ. ಒಬ್ಬ ವ್ಯಕ್ತಿ 45ರವರೆಗೂ ಉತ್ತಮ ಪ್ರದರ್ಶನ ನೀಡಿದರೆ, ಆತನನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ನನಗೆ ಉನ್ನತ ಮಟ್ಟದಲ್ಲಿ ಸಾಧ್ಯವಾದಷ್ಟು ದಿನ ಕ್ರಿಕೆಟ್ ಆಡಬೇಕೆಂಬ ಹಂಬಲವಿದೆ. ಈಗಲೂ ಭಾರತಕ್ಕೆ ಆಡಲು ಬಯಸುತ್ತೇನೆ. ನಾನು ನನ್ನ ಆಟವನ್ನು ಆನಂದಿಸುವಷ್ಟು ದಿನ ಆಡುತ್ತೇನೆ ಎಂದು ಹರ್ಭಜನ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.