ವಿಜಯ್ ಹಜಾರೆ ಟ್ರೋಫಿಗೆ ಕರ್ನಾಟಕ ತಂಡ ಪ್ರಕಟ
ಬೆಂಗಳೂರು: ವಿಜಯ್ ಹಜಾರೆ ಟ್ರೋಫಿ ಏಕದಿನ ಅಖಿಲ ಭಾರತ ನಾಕೌಟ್ ಕ್ರಿಕೆಟ್ ಟೂರ್ನಿಗಾಗಿ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದ್ದು, ಆರ್. ವಿನಯ್ಕುಮಾರ್ ನಾಯಕರಾಗಿ ಮುಂದುವರಿದಿದ್ದಾರೆ.
ಈ ಪಂದ್ಯಾವಳಿ ಕೋಲ್ಕತಾದಲ್ಲಿ ಮಾರ್ಚ್ 11ರಿಂದ 18ರ ವರೆಗೆ ನಡೆಯಲಿದೆ.
ಕರ್ನಾಟಕ ತಂಡ
ಆರ್. ವಿನಯ್ಕುಮಾರ್ (ನಾಯಕ), ರಾಬಿನ್ ಉತ್ತಪ್ಪ (ಉಪನಾಯಕ), ಕೆ.ಎಲ್. ರಾಹುಲ್, ಗಣೇಶ್ ಸತೀಶ್, ಮನೀಶ್ ಪಾಂಡೆ, ಕರುಣ್ ನಾಯರ್, ಶ್ರೇಯಸ್ ಗೋಪಾಲ್, ಅಭಿಮನ್ಯು ಮಿಥುನ್, ಎಚ್.ಎಸ್. ಶರತ್, ಮಾಯಾಂಕ್ ಅಗರ್ವಾಲ್, ಶ್ರೀನಾಥ್ ಅರವಿಂದ್, ರೋನಿತ್ ಮೋರೆ, ಅಬ್ರಾರ್ ಖಾಜಿ, ಅಮಿತ್ ವರ್ಮಾ, ಕುನಾಲ್ ಕಪೂರ್. ಬ್ಯಾಟಿಂಗ್ ಕೋಚ್- ಜೆ. ಅರುಣ್ಕುಮಾರ್, ಬೌಲಿಂಗ್ ಕೋಚ್- ಮನ್ಸೂರ್ ಅಲಿ ಖಾನ್.
ಸ್ಪಾಟ್ ಫಿಕ್ಸಿಂಗ್: ಮಾ.25ಕ್ಕೆ ವಿಚಾರಣೆ ಮುಂದೂಡಿಕೆ
ನವದೆಹಲಿ: ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮಾ.25ಕ್ಕೆ ಮುಂದೂಡಿದೆ.ಅಲ್ಲದೆ ಮುದ್ಗಲ್ ಸಮಿತಿ ವರದಿಯ ಕುರಿತಂತೆ ವಾದ ಪ್ರತಿವಾದವನ್ನು ಆಲಿಸಲಿದೆ.
ಪ್ರಕರಣದಲ್ಲಿ ಪ್ರತಿವಾದಿಯಾಗಿರುವ ಬಿಸಿಸಿಐ ಮುದ್ಗಲ್ ಸಮಿತಿ ನೀಡಿರುವ ಕೆಲವು ಪ್ರಮುಖ ಅಂಶವನ್ನು ಬಹಿರಂಗ ಪಡಿಸದಂತೆ ಸುಪ್ರೀಂ ಕೋರ್ಟ್ಗೆ ಮನವಿ ಮಾಡಿದೆ.
ಮುದ್ಗಲ್ ಸಮಿತಿ ವರದಿಯಲ್ಲಿ ಸ್ಪಾಟ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ಪ್ರಕರಣ ಕುರಿತಂತೆ ಕೆಲವು ಪ್ರಮುಖ ಅಂಶವನ್ನು ಲಕೋಟೆಯಲ್ಲಿ ಸುಪ್ರೀಂ ಕೋರ್ಟ್ಗೆ ಸಲ್ಲಿಸಿದೆ. ಇದರಲ್ಲಿನ ಮಾಹಿತಿಯನ್ನು ಬಹಿರಂಗ ಪಡಿಸಿದರೆ, ಬಿಸಿಸಿಐ ಹಾಗೂ ಕೆಲವು ಕ್ರಿಕೆಟಿಗರ ಘನತೆಗೆ ಧಕ್ಕೆಯಾಗಲಿದೆ ಹಾಗಾಗಿ ಮಾಹಿತಿಯನ್ನು ಬಹಿರಂಗ ಪಡಿಸದಂತೆ ಬಿಸಿಸಿಐ ಮನವಿ ಮಾಡಿದೆ.
ಸರ್ವೀಸಸ್ ಆಟಗಾರರ ಕೈಕುಲುಕದ ಗಂಭೀರ ಪಡೆಯ ಅಸಭ್ಯ ವರ್ತನೆ
ನವದೆಹಲಿ: ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಸೋಲನುಭವಿಸಿದ ಹತಾಶೆಯಲ್ಲಿ ಗೌತಮ್ ಗಂಭೀರ್ ನಾಯಕತ್ವದ ದೆಹಲಿ ತಂಡದ ಆಟಗಾರರು ದುರಾಳಿ ಸರ್ವೀಸಸ್ ಆಟಗಾರರ ಕೈಕುಲುಕದೇ ಅಸಭ್ಯವಾಗಿ ವರ್ತಿಸಿದ ಘಟನೆ ಜರುಗಿದೆ.
ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಸರ್ವೀಸಸ್ 44 ರನ್ಗಳಿಂದ ದೆಹಲಿಯನ್ನು ಮಣಿಸಿತು. ಪಂದ್ಯದ ಬಳಿಕ ಉಭಯ ಆಟಗಾರರು ಪರಸ್ಪರ ಕೈಕುಲುಕುವುದು ಸಂಪ್ರದಾಯ. ಆದರೆ, ದೆಹಲಿ ಆಟಗಾರರು ಪಂದ್ಯ ಮುಕ್ತಾಯವಾಗುತ್ತಲೇ, ಡ್ರೆಸ್ಸಿಂಗ್ ರೂಮ್ಗೆ ತೆರಳಿದರು. ಇತ್ತ ಮೈದಾನದಲ್ಲಿದ್ದ ಸರ್ವೀಸಸ್ ಆಟಗಾರರು ದೆಹಲಿ ಆಟಗಾರರ ಆಗಮನಕ್ಕೆ ಕಾಯುತ್ತಲೇ ಇದ್ದರು. ಸುಮಾರು ಅರ್ಧಗಂಟೆ ಮೈದಾನದಲ್ಲಿಯೇ ಕಾದರೂ, ದೆಹಲಿ ಆಟಗಾರರು ಸೌಜನ್ಯಕ್ಕಾದರೂ ಎದುರಾಳಿಯನ್ನು ಅಭಿನಂದಿಸಲು ಬರಲಿಲ್ಲ.
ದೆಹಲಿ ಆಟಗಾರರ ಈ ನಡವಳಿಕೆ ಭಾರಿ ಬೇಸರ ತರಿಸಿದೆ. ನಾಯಕ ಅಥವಾ ಕೋಚ್ ಕೂಡ ಆಗಮಿಸಲಿಲ್ಲ. ದೆಹಲಿಯ ಈ ನಡವಳಿಕೆ ಮೊದಲಲ್ಲ. ಹಿಂದೆ ಕೋಟ್ಲಾದಲ್ಲಿನ ಸೈಯದ್ ಮುಷ್ತಾಕ್ ಅಲಿ ಟಿ-20 ಪಂದ್ಯದ ಸಂದರ್ಭದಲ್ಲೂ ದೆಹಲಿ ಆಟಗಾರರು ಇದೇ ರೀತಿಯಲ್ಲಿ ನಡೆದುಕೊಂಡಿದ್ದರು ಎಂದು ಸರ್ವೀಸಸ್ ತಂಡದ ನಾಯಕ ಯಶ್ಪಾಲ್ ಸಿಂಗ್ ತೀವ್ರ ಬೇಸರದಿಂದ ಪ್ರತಿಕ್ರಿಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

