ಆಸೀಸ್ ತಂಡ ಶ್ವಾನಗಳ ಗುಂಪಿನಂತೆ ವರ್ತಿಸುತ್ತಿದೆ: ಮಾಧ್ಯಮಗಳ ಟೀಕೆ
ಸಿಡ್ನಿ: ಮೈದಾನದಲ್ಲಿ ಆಕ್ರಮಣಕಾರಿ ಆಟದಿಂದ ವಿಶ್ವದ ನಂ.1 ಟೆಸ್ಟ್ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ ಗೆದ್ದ ಆಸ್ಟ್ರೇಲಿಯಾ ತಂಡ, ಶ್ವಾನಗಳ ಗುಂಪು ಎಂದು ಮಾಧ್ಯಮಗಳು ಟೀಕಿಸಿವೆ. ಮೈದಾನದಲ್ಲಿ ಆಸೀಸ್ ಆಟಗಾರರ ಅಸಭ್ಯ ವರ್ತನೆಯಿಂದ ಈ ಟೀಕೆ ಕೇಳಿಬಂದಿದೆ. ಅಲ್ಲದೆ ಸಾಮಾಜಿಕ ತಾಣಗಳಲ್ಲಿ ಅಭಿಮಾನಿಗಳಿಂದಲೂ ವ್ಯಾಪಕ ಟೀಕೆಗಳು ವ್ಯಕ್ತವಾಗಿದೆ. ಕೋಚ್ ಡಾರೆನ್ ಲೇಮನ್ ಆಸೀಸ್ ತಂಡವನ್ನು ವಿಶ್ವದ ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತಿದ್ದಾರೆ. ಆದರೆ ಅವರು ತಂಡದ ಆಟಗಾರರನ್ನು ಉತ್ತಮ ರೀತಿಯಲ್ಲಿ ನಿಯಂತ್ರಿಸುವ ಜವಾಬ್ದಾರಿ ನಿರ್ವಹಿಸಬೇಕಿದೆ ಎಂದು ಕ್ರೀಡಾ ಅಂಕಣಕಾರ ರಾಬರ್ಟ್ ಕ್ರಾಡೊಕ್ ತಿಳಿಸಿದ್ದಾರೆ. ಆಸ್ಟ್ರೇಲಿಯಾ ತಂಡ ಉತ್ತಮ ಪ್ರದರ್ಶನ ನೀಡಿರುವುದು ಸಂತಸ ನೀಡಿದೆ. ಆದರೆ ಮೈದಾನದಲ್ಲಿ ಉತ್ತಮ ರೀತಿಯಲ್ಲಿ ವರ್ತಿಸುವುದನ್ನು ಕಲಿಯಬೇಕಿದೆ ಎಂದು ಸಾಮಾಜಿಕ ತಾಣಗಳಲ್ಲಿ ಅಭಿಮಾನಿಗಳು ಪ್ರತಿಕ್ರಿಯೆ ನೀಡಿದ್ದಾರೆ. ನಾಯಕ ಮೈಕಲ್ ಕ್ಲಾರ್ಕ್ ಅಂಪೈರ್ ವಿರುದ್ಧ ಅನಾವಶ್ಯಕವಾಗಿ ಮಾತಿನ ಚಕಮಕಿ ನಡೆಸುತ್ತಾರೆ. ಅಲ್ಲದೆ ಮೈದಾನದಲ್ಲಿ ಕ್ಷೇತ್ರರಕ್ಷಣೆಯ ವೇಳೆ ಎದುರಾಳಿ ಬ್ಯಾಟ್ಸ್ಮನ್ ಔಟಾದರೆ, ಆಸೀಸ್ ಆಟಗಾರರು ಶ್ವಾನಗಳಂತೆ ಅರಚುತ್ತಾರೆ. ಆಟಗಾರರು ಚಿಕ್ಕ ಮಕ್ಕಳಂತೆ ವರ್ತಿಸುತ್ತಿದ್ದಾರೆ. ದಕ್ಷಿಣ ಆಫ್ರಿಕಾದ ಫಫ್ ಡುಪ್ಲಿಸಿಸ್ ವಿಕೆಟ್ ಪಡೆದ ನಂತರ ಆಸೀಸ್ ಆಟಗಾರರ ವರ್ತನೆ ಉತ್ತಮವಾಗಿಲ್ಲ ಎಂದು ರಾಬರ್ಟ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

