ಕ್ರೀಡೆ

ಸಂತೋಷ್ ಟ್ರೋಫಿ: ಮಿಜೋರಾಮ್‌ಗೆ ಪ್ರಶಸ್ತಿ ಗೆಲ್ಲುವ ವಿಶ್ವಾಸ

Published On :

ಸಿಲಿಗುರಿ: ಒಂದೆಡೆ ಮೊದಲ ಬಾರಿಗೆ ರಾಷ್ಟ್ರೀಯ ಫುಟ್ಬಾಲ್ ಚಾಂಪಿಯನ್ ಆಗುವ ಕನಸು ಕಾಣುತ್ತಿರುವ ಮಿಜೋರಾಮ್, ಇನ್ನೊಂದೆಡೆ 48 ವರ್ಷಗಳ ನಂತರ ಪ್ರಶಸ್ತಿ ಗೆಲ್ಲುವ ಕಾತರದಲ್ಲಿರುವ ರೈಲ್ವೇಸ್, ಸಂತೋಷ್ ಟ್ರೋಫಿಯಲ್ಲಿ (68ನೇ ರಾಷ್ಟ್ರೀಯ ಫುಟ್ಬಾಲ್ ಚಾಂಪಿಯನ್‌ಶಿಪ್) ಕಾದಾಡಲಿವೆ. ಉಭಯ ತಂಡಗಳು ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಪ್ರಶಸ್ತಿಗಾಗಿ ಸೆಣಸಲಿವೆ. ರೈಲ್ವೇಸ್ ಕಳೆದ ಬಾರಿ 1966ರಲ್ಲಿ ಗೆದ್ದುಕೊಂಡಿದೆ. ಆದರೆ, 80ರ ದಶಕದ ಮಧ್ಯದಲ್ಲಿ ಉದಯವಾಗಿರುವ ಈಶಾನ್ಯ ರಾಜ್ಯದ ತಂಡವಾದ ಮಿಜೋರಾಮ್ ಇದುವರೆಗೂ ಪ್ರಶಸ್ತಿ ಗೆದ್ದುಕೊಂಡಿಲ್ಲ. ಈ ಹಿಂದೆ ರೈಲ್ವೇಸ್ ತಂಡ 1987ರಲ್ಲಿ ಫೈನಲ್ ಪ್ರವೇಶಿಸಿತ್ತು. ಅಲ್ಲದೆ, ಇದಕ್ಕೂ ಮುನ್ನ ಆ ತಂಡ ಮೂರು ಬಾರಿ ಪ್ರಶಸ್ತಿ ಗೆದ್ದುಕೊಂಡಿದೆ. ಅಲ್ಲದೆ, ಐದು ಬಾರಿ ಶ್ರೇಷ್ಠ ಪ್ರದರ್ಶನ ನೀಡಿದೆ.ಆದರೆ, ರೈಲ್ವೇಗೆ ಇಬ್ಬರು ಪ್ರಮುಖ ಆಟಗಾರರಾದ ವಿಮಲ್ ಕುಮಾರ್ ಮತ್ತು ರಾಜೀವ್ ಬೊರೋ ಅವರು ಅಮಾನತುಗೊಂಡು ಅಂತಿಮ ಪಂದ್ಯಕ್ಕೆ ಅಲಭ್ಯರಾಗಿರುವುದು ಆತಂಕವಾಗಿ ಪರಿಣಮಿಸಿದೆ. ಅಖಿಲ್ ರಾಜಬನ್ಷಿ ಮತ್ತು ಮಿಡ್‌ಫೀಲ್ಡರ್ ದಿಪಾಂಕರ್ ದಾಸ್ ಅವರು ಮೊಹ್ಮದ್ ಸಯೀದ್ ಅವರು ಅಮಾನತುಗೊಂಡಿರುವ ಆಟಗಾರರ ಸ್ಥಾನದಲ್ಲಿ ಆಡಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.