ಕ್ರೀಡೆ

ಕ್ರೀಡೆಯಲ್ಲಿ ಪಾರದರ್ಶಕತೆ ತರುತ್ತೇನೆ, ಇಲ್ಲವೆ ರಾಜಿನಾಮೆ ನೀಡುತ್ತೇನೆ

Published On :

ಚೆನ್ನೈ: ರಾಷ್ಟ್ರೀಯ ಕ್ರೀಡಾ ಫೆಡರೇಷನ್‌ಗಳಲ್ಲಿ ಜವಾಬ್ದಾರಿ ಮತ್ತು ಪಾರದರ್ಶಕತೆಯನ್ನು ತರುತ್ತೇನೆ. ಇಲ್ಲವಾದರೆ ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಇತ್ತೀಚೆಗಷ್ಟೇ ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಎನ್. ರಾಮಚಂದ್ರನ್ ಅವರು ಹೇಳಿಕೊಂಡಿದ್ದಾರೆ.ಅಥ್ಲೀಟ್‌ಗಳ ಹಿತದೃಷ್ಟಿಯಿಂದ ದೇಶದ ಕ್ರೀಡೆಯಯಲ್ಲಿ ಬದಲಾವಣೆ ಅಗತ್ಯವಿದೆ ಎಂದು ಕಳೆದ ತಿಂಗಳು ಐಒಎ ಅದ್ಯಕ್ಷರಾಗಿ ಆಯ್ಕೆಯಾಗಿರುವ ರಾಮಚಂದ್ರನ್ ಹೇಳಿದ್ದಾರೆ.'ರಾಷ್ಟ್ರೀಯ ಕ್ರೀಡಾ ಫೆಡರೇಷನ್‌ಗಳು ಮತ್ತು ಅವುಗಳಿಂದ ಮಾನ್ಯತೆ ಪಡೆದಿರುವ ರಾಜ್ಯ ಸಂಸ್ಥೆಗಳು, ಕ್ರೀಡೆಯಲ್ಲಿ ಜವಾಬ್ದಾರಿ ಮತ್ತು ಪಾರದರ್ಶಕತೆ ತರಬೇಕು, ಎಂಬ ಅಂಶವನ್ನು ಆ ಸಂಸ್ಥೆಗಳು ಅರ್ಥ ಮಾಡಿಕೊಳ್ಳಬೇಕು' ಎಂದು ಚೈನ್ನೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ತಿಳಿಸಿದರು.'ದೇಶದ ಉನ್ನತ ಕ್ರೀಡಾ ಸಂಸ್ಥೆಯ ಅಧ್ಯಕ್ಷನಾಗಿ ನಾನು ಉತ್ತಮ ಸಾಧನೆ ಮಾಡುತ್ತೇನೆ. ಇಲ್ಲವಾದರೆ, ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ವಿಶ್ವ ಸ್ಕ್ವಾಷ್ ಫೆಡರೇಷನ್ ಮುಖ್ಯಸ್ಥರೂ ಆಗಿರುವ ಅವರು ಖಡಕ್ಕಾಗಿ ನುಡಿದಿದ್ದಾರೆ.'ಕ್ರೀಡೆಯ ಬೆನ್ನೆಲುಬು ಕ್ರೀಡಾಪಟುಗಳೇ ಹೋರತು, ಫೆಡರೇಷನ್‌ಗಳಲ್ಲ. ಭಾರತದಲ್ಲಿ ಕ್ರೀಡೆ ಬದಲಾಗಿದೆ ಮತ್ತು ಅದನ್ನು ಹಂತ ಹಂತವಾಗಿ ಐಒಎ ಬದಲಿಸಲಿದೆ. ಒಂದು ವೇಳೆ ಅದನ್ನು ಮಾಡಲಾಗದಿದ್ದರೆ, ನಾನು ದೂರ ಸರಿಯುತ್ತೇನೆ' ಎಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.