ವಿಶ್ವ ಕುಸ್ತಿ: ಭಾರತಕ್ಕೆ ಅಮಿತ್ ನೇತೃತ್ವ
ನವದೆಹಲಿ: ವಿಶ್ವ ಚಾಂಪಿಯನ್ಶಿಪ್ ಬೆಳ್ಳಿ ಪದಕ ವಿಜೇತ ಅಮಿತ್ ಕುಮಾರ್ ದಹಿಯಾ ಲಾಸ್ ಏಂಜಲೀಸ್ನಲ್ಲಿ ಮಾರ್ಚ್ 15-16ರಂದು ನಡೆಯಲಿರುವ ವಿಶ್ವಕಪ್ ಕುಸ್ತಿ ಪಂದ್ಯಾವಳಿಯಲ್ಲಿ ಭಾರತದ ಸವಾಲು ಮುನ್ನಡೆಸಲಿದ್ದಾರೆ. ಅಮಿತ್ಗೆ ಇದು ತಮ್ಮ ಚೊಚ್ಚಲ ಫ್ರೀಸ್ಟೈಲ್ ವಿಶ್ವಕಪ್ ಸಮರವಾಗಿದೆ.
ಒಲಿಂಪಿಕ್ಸ್ ಪದಕ ವಿಜೇತರಾದ ಸುಶೀಲ್ ಕುಮಾರ್ ಮತ್ತು ಯೋಗೇಶ್ವರ್ ದತ್ ಅನುಪಸ್ಥಿತಿಯಲ್ಲಿ ಭಾರತ ತನ್ನ ಹೋರಟ ನಡೆಸಲಿದೆ.
ಅಮಿತ್ ಕುಮಾರ್ 57 ಕೆ.ಜಿ. ವಿಭಾಗದಲ್ಲಿ ಸ್ಪರ್ಧೆಗಿಳಿಯಲಿದ್ದಾರೆ. ಉಳಿದಂತೆ, ಭಜರಂಗ (61ಕೆ.ಜಿ.), ರಜನೀಶ್ (65ಕೆ.ಜಿ.), ಅಮಿತ್ ಧನಕರ್ (70ಕೆ.ಜಿ.), ಪ್ರವೀಣ್ ರಾಣಾ (74ಕೆ.ಜಿ.), ಪವನ್ ಕುಮಾರ್ (86ಕೆ.ಜಿ.), ಸತ್ಯವೃತ (97ಕೆ.ಜಿ.) ಮತ್ತು ಕೃಷ್ಣಕುಮಾರ್ ಈ ಚಾಂಪಿಯನ್ಶಿಪ್ನಲ್ಲಿ ಪಾಲ್ಗೊಳ್ಳಲಿರುವ ಇತರೆ ಭಾರತೀಯ ಸ್ಪರ್ಧಿಗಳಾಗಿದ್ದಾರೆ.
ತಂಡದಲ್ಲಿ ಅನಿಲ್ ಮನ್, ಅನಿಲ್ಕುಮಾರ್ ಮತ್ತು ವಿನೋದ್ಕುಮಾರ್ ಈ ಮೂವರು ತರಬೇತುದಾರರಿದ್ದಾರೆ.
ಎರಡು ಬಾರಿ ಒಲಿಂಪಿಕ್ ಚಾಂಪಿಯನ್ ಎನಿಸಿರುವ ಸುಶೀಲ್ ಕುಮಾರ್ ಮತ್ತು ಲಂಡನ್ ಗೇಮ್ಸ್ನ ಕಂಚಿನ ಪದಕ ವಿಜೇತ ಯೋಗೇಶ್ವರ್ಗೆ ವಿಶ್ರಾಂತಿ ನೀಡಲಾಗಿದೆ. ಈ ಇಬ್ಬರು ಪಟುಗಳು ಬರುವ ಜುಲೈನಲ್ಲಿ ನಡೆಯಲಿರುವ ಕಾಮನ್ವೆಲ್ತ್ ಗೇಮ್ಸ್ ಮೇಲೆ ತಮ್ಮ ದೃಷ್ಟಿ ನೆಟ್ಟಿದ್ದಾರೆ. ಇದಕ್ಕೂ ಮುನ್ನ ಅವರು ಮೇ-ಜೂನ್ನಲ್ಲಿ ಇಟಲಿಯಲ್ಲಿ ನಡೆಯಲಿರುವ ಎರಡು ಆಹ್ವಾನಿತ ಟೂರ್ನಿಗಳಲ್ಲೂ ಪಾಲ್ಗೊಳ್ಳಲಿದ್ದಾರೆ. ಸುಶೀಲ್ 70 ಕೆ.ಜಿ. ವಿಭಾಗ ಹಾಗೂ ಯೋಗೇಶ್ವರ್ 65 ಕೆ.ಜಿ. ವಿಭಾಗದಲ್ಲಿ ಸ್ಪರ್ಧೆಗಿಳಿಯಲಿದ್ದಾರೆ.
ಬುಡಾಪೆಸ್ಟ್ನಲ್ಲಿ ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ನಡೆದ ಪುರುಷರ ಫ್ರೀಸ್ಟೈಲ್ ವಿಶ್ವ ಚಾಂಪಿಯನ್ಶಿಪ್ನಲ್ಲಿ ಭಾರತ ಆರನೇ ಸ್ಥಾನ ಪಡೆದಿತ್ತು. ಇರಾನ್, ರಷ್ಯಾ, ಜಾರ್ಜಿಯಾ, ಉಕ್ರೇನ್ ಮತ್ತು ಅಮೆರಿಕಾ ಮೊದಲ ಐದು ಸ್ಥಾನಗಳನ್ನು ಹಂಚಿಕೊಂಡಿದ್ದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

