ಕ್ರೀಡೆ

ಛತ್ತೀಸ್‌ಗಡ- ಕೇರಳ ಫೈನಲ್‌ಗೆ

Published On :

-ಡಿ.ಎನ್. ಮಹೇಂದ್ರ
ಮೈಸೂರು:
ಕಿರಿಯ ಮಹಿಳೆಯರ 4ನೇ ರಾಷ್ಟ್ರೀಯ ಹಾಕಿ ಪಂದ್ಯಾವಳಿಯ ಬಿ ವಿಭಾಗದಲ್ಲಿ ಛತ್ತೀಸ್‌ಗಡ ಮತ್ತು ಕೇರಳ ಹಾಕಿ ತಂಡಗಳು ಫೈನಲ್ ಪ್ರವೇಶಿಸಿವೆ.
ಚಾಮುಂಡಿ ವಿಹಾರ ಕ್ರೀಡಾಂಗಣದ ಹಾಕಿ ಟರ್ಫ್‌ನಲ್ಲಿ ಬುಧವಾರ ನಡೆದ ಸೆಮಿ ಫೈನಲ್‌ನಲ್ಲಿ ಛತ್ತೀಸ್‌ಗಡ ತಂಡವು, ಮಣಿಪುರ ತಂಡವನ್ನು 4-0 ಅಂತರದಲ್ಲೂ, ಕೇರಳ ತಂಡವು ಒಡಿಶಾ ತಂಡವನ್ನು 2-0 ಅಂತರದಲ್ಲೂ ಪರಾಭವಗೊಳಿಸಿ ಫೈನಲ್ ಪ್ರವೇಶಿಸಿದವು.
ಪ್ರಬಲ ಮಣಿಪುರ ತಂಡವನ್ನು ಶೂನ್ಯಕ್ಕೆ ತಳ್ಳಿ ನಾಲ್ಕು ಗೋಲ್ ಬಾರಿಸಿದ ಛತ್ತೀಸ್‌ಗಡ ತಂಡವು ಕ್ರೀಡಾಂಗಣದಲ್ಲಿ ವಿಜಯೋತ್ಸವ ಆಚರಿಸಿತು. ಪಂದ್ಯದ ಎಂಟನೆ ನಿಮಿಷದಲ್ಲಿ ಇಶಿಕ ಚೌದರಿ ಬಾರಿಸಿದ ಮೊದಲ ಗೋಲ್, ಬಳಿಕ ಪ್ರಿಯಾಂಕ ಪರಿಹಾರ್, ಆಕಾಂಕ್ಷ ಪರ್ಮಾರ್ ಮತ್ತು ಸಾಧನ ಸೆಂಗಾರ್ ಅವರು ತಲಾ ಒಂದೊಂದು ಗೋಲ್ ಬಾರಿಸಿದರು. ಛತ್ತೀಸ್‌ಗಡ ತಂಡ ಪಂದ್ಯದ ಮೊದಲಾರ್ಧದಲ್ಲಿ 2 ಗೋಲ್ ಮತ್ತು ದ್ವಿತೀಯಾರ್ಧದಲ್ಲಿ ಮತ್ತೆರಡು ಗೋಲ್ ಬಾರಿಸಿತು.
ಬಹು ನಿರೀಕ್ಷೆ ಮತ್ತು ಕುತೂಹಲ ಮೂಡಿಸಿದ್ದ ಕೇರಳ ಮತ್ತು ಒಡಿಶಾ ನಡುವಿನ ಪಂದ್ಯದಲ್ಲಿ ಒಡಿಶಾ ತಂಡದ ಗೋಲ್ ಕೀಪರ್‌ನ ಪ್ರಬಲ ಪ್ರತಿರೋಧದ ನಡುವೆಯೂ ಕೇರಳ 2-0 ಅಂತರದ ಗೆಲುವು ಸಾಧಿಸಿತು. ಉಭಯ ತಂಡಗಳ ಆಟಗಾರರು ಗೋಲ್ ಬಾರಿಸಲು ಒದ್ದಾಡಿದರಾದರೂ ಒಡಿಶಾ ಗೋಲ್ ಕೀಪರ್ ಚೆಂಡನ್ನು ತಡೆಯಲು ಮುಂದೆ ಬರುವುದನ್ನೇ ಕಾದು ಎರಡು ಗೋಲ್ ಬಾರಿಸಿದರು. ತಂಡದ ಎಂ.ಆರ್. ಸಿಂಧು ಮತ್ತು ಅಮಲ ಥಾಮಸ್ ತಲಾ ಒಂದು ಗೋಲ್ ಬಾರಿಸಿದರು. ಪಂದ್ಯದ ಮೊದಲಾರ್ಧದಲ್ಲಿ ಒಂದು ಗೋಲ್ ದಾಖಲಿಸಿ, ಪಂದ್ಯ ಅಂತ್ಯಗೊಳ್ಳಲು ಐದು ನಿಮಿಷ ಬಾಕಿ ಇರುವಂತೆ ಮತ್ತೊಂದು ಗೋಲ್ ಬಾರಿಸಿ ಸಂಭ್ರಮಿಸಿದರು. ಹಲವು ಬಾರಿ ಗೋಲ್ ಬಾರಿಸಲು ಒಡಿಶಾ ತಂಡದ ಆಟಗಾರರು ಪ್ರಯತ್ನಿಸಿದರಾದರೂ ಒಮ್ಮೆಯೂ ಫಲ ನೀಡಲಿಲ್ಲ.
ಸೆಮಿ ಫೈನಲ್‌ನಲ್ಲಿ ಸೋಲನುಭವಿಸಿದ ಮಣಿಪುರ ಮತ್ತು ಒಡಿಶಾ ತಂಡಗಳು ಶುಕ್ರವಾರ ಮಧ್ಯಾಹ್ನ 2ಕ್ಕೆ ಮೂರನೆ ಸ್ಥಾನಕ್ಕಾಗಿ ಸೆಣಸಲಿವೆ. ಸಂಜೆ 4ಕ್ಕೆ ಛತ್ತೀಸ್‌ಗಡ ಮತ್ತು ಕೇರಳ ನಡುವೆ ಪಂದ್ಯಾವಳಿಯ ಬಿ ವಿಭಾಗದ ಫೈನಲ್ ಪಂದ್ಯ ನಡೆಯುವುದು.

ಪಂದ್ಯ ಇಪ್ಪತ್ತೈದು- ಮಣಿಪುರ
ಮಣಿಸಿದ ಛತ್ತೀಸ್‌ಗಡ 4-0.
ಛತ್ತೀಸ್‌ಗಡ ಗೋಲ್ ಸ್ಕೋರ್
ಇಶಿಕಾ ಚೌದರಿ    8ನಿ.
ಪ್ರಿಯಾಂಕ ಪರಿಹಾರ್    34ನಿ.
ಆಕಾಂಕ್ಷ ಪರ್ಮಾರ್    38ನಿ.
ಸಾಧನ ಸೆಂಗಾರ್    65ನಿ.

ಪಂದ್ಯ ಇಪ್ಪತ್ತಾರು- ಒಡಿಶಾ
ಮಣಿಸಿದ ಕೇರಳ 2-0
ಕೇರಳ ಗೋಲ್ ಸ್ಕೋರ್
ಎಂ.ಆರ್. ಸಿಂಧು    26ನಿ.
ಅಮಲ ಥಾಮಸ್    68ನಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.