ಕ್ರೀಡೆ

ವಿಜಯ್ ಹಜಾರೆ: ರೈಲ್ವೇಸ್ ಜಾರ್ಖಂಡ್ ಸೆಮೀಸ್‌ಗೆ

Published On :

ಕೋಲ್ಕತಾ: ಲೆಗ್ ಸ್ಪಿನ್ನರ್ ರಾಹುಲ್ ಶರ್ಮಾ ಅವರ ಆಲ್ರೌಂಡ್ ಪ್ರದರ್ಶನದ ನೆರವಿನಿಂದ ಜಾರ್ಖಂಡ್ ತಂಡ ವಿಜಯ್ ಹಜಾರೆ ಟ್ರೋಫಿ ಪಂದ್ಯಾವಳಿಯ ಸೆಮಿಫೈನಲ್‌ಗೆ ಪ್ರವೇಶಿಸಿದೆ.
ಬುಧವಾರ ಜಾಧವ್‌ಪುರ ಯೂನಿವರ್ಸಿಟಿ ಸಂಕೀರ್ಣದಲ್ಲಿ ನಡೆದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಜಾರ್ಖಂಡ್ ತಂಡವು ಸರ್ವೀಸಸ್ ವಿರುದ್ಧ 25 ರನ್‌ಗಳ ಗೆಲವು ದಾಖಲಿಸಿತು.
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಜಾರ್ಖಂಡ್ 48.2 ಓವರ್‌ಗಳಲ್ಲಿ 214 ರನ್‌ಗಳಿಗೆ ಆಲೌಟ್ ಆಯಿತು. ಈ ಮೊತ್ತವನ್ನು ಬೆನ್ನಟ್ಟಿದ ಸರ್ವೀಸಸ್ ತಂಡ 48.4 ಓವರ್‌ಗಳಲ್ಲಿ 189 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಸೋಲನುಭವಿಸಿತು.
ಜಾರ್ಖಂಡ್ ಪರ ಕುಮಾರ್ ದೇವಬ್ರತ್(84) ಅರ್ಧಶತಕ ದಾಖಲಿಸಿ ತಂಡಕ್ಕೆ ಆಧಾರವಾಗಿ ನಿಂತರು. ಉಳಿದಂತೆ ಕೇಶವ್ ಕುಮಾರ್(41) ಹಾಗೂ ರಾಹುಲ್ ಶುಕ್ಲಾ(32) ಉತ್ತಮ ಸಾಥ್ ನೀಡಿದರು. ಇನ್ನು ಬೌಲಿಂಗ್‌ನಲ್ಲೂ ಮಿಂಚಿದ ರಾಹುಲ್ ಶುಕ್ಲಾ 5 ವಿಕೆಟ್ ಪಡೆದು ಆಲ್ರೌಂಡ್ ಪ್ರದರ್ಶನ ನೀಡಿದರು.
ಸರ್ವೀಸಸ್ ತಂಡದ ಪರ ರಂಜನ್ ಸ್ವೈನ್(45), ಯಶ್‌ಪಾಲ್ ಸಿಂಗ್(39) ಹೋರಾಟ ನೀಡುವ ಪ್ರದರ್ಶನ ನೀಡಿದರಾದರೂ ಗೆಲವಿನ ದಡ ಸೇರಲು ಸಾಧ್ಯವಾಗಲಿಲ್ಲ.
ರೈಲ್ವೇಸ್‌ಗೆ ರಾವತ್ ರಕ್ಷೆ: ಇನ್ನು ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆದ ಮತ್ತೊಂದು ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಪಂಜಾಬ್ ತಂಡ ರೈಲ್ವೇಸ್ ವಿರುದ್ಧ 137 ರನ್‌ಗಳಿಂದ ಸೋಲನುಭವಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ ರೈಲ್ವೇಸ್ ತಂಡ 47.5 ಓವರ್‌ಗಳಲ್ಲಿ 242 ರನ್‌ಗಳಿಗೆ ಆಲೌಟ್ ಆಯಿತು. ಈ ಮೊತ್ತವನ್ನು ಬೆನ್ನಟ್ಟಿದ ಪಂಜಾಬ್ 33.4 ಓವರ್‌ಗಳಲ್ಲಿ 105 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಹೀನಾಯ ಸೋಲನುಭವಿಸಿತು.
ಒಂದು ಹಂತದಲ್ಲಿ 64 ರನ್‌ಗಳಿಗೆ ಆರಂಭಿಕ ನಾಲ್ವರು ಬ್ಯಾಟ್ಸ್‌ಮನ್‌ಗಳನ್ನು ಕಳೆದುಕೊಂಡ ರೈಲ್ವೇಸ್ ತಂಡಕ್ಕೆ ಆಸರೆಯಾಗಿದ್ದು, ಮಹೇಶ್ ರಾವತ್(108).
ಐದನೇ ವಿಕೆಟ್‌ಗೆ ರಾಗ್‌ಸನ್ ಜೊನಾಥನ್(58) ಜತೆಗೂಡಿದ ರಾವತ್ ತಂಡಕ್ಕೆ 141 ರನ್‌ಗಳ ಜತೆಯಾಟ ನೀಡಿದರು.
ಇನ್ನು ಪಂಜಾಬ್ ತಂಡದ ಪರ ಉತ್ತಮ ಬೌಲಿಂಗ್ ದಾಳಿ ನಡೆಸಿದ ಸಿದ್ಧಾರ್ಥ್ ಕೌಲ್, 47 ರನ್‌ಗಳಿಗೆ 5 ವಿಕೆಟ್ ಪಡೆದು ಗಮನ ಸೆಳೆದರು.
ಇನ್ನು ಪಂಜಾಬ್ ಪರ ತರುವಾರ್ ಕೊಹ್ಲಿ 27 ರನ್ ಗಳಿಸಿದ್ದು ತಂಡದ ಪರ ಗರಿಷ್ಠ ಮೊತ್ತವಾಗಿತ್ತು. ರೈಲ್ವೇಸ್ ಪರ ಆಶೀಶ್ ಯಾದವ್ 3 ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್
ಜಾರ್ಖಂಡ್ 48.2 ಓವರ್‌ಗಳಲ್ಲಿ 214
(ಕುಮಾರ್ ದೇವಬ್ರತ್ 84, ಕೇಶವ್ ಕುಮಾರ್ 41, ಸೂರಜ್ ಯಾದವ್ 36ಕ್ಕೆ4, ಶಹಬಾದ್ ನಾಜರ್ 53ಕ್ಕೆ4)

ಸರ್ವೀಸಸ್ 48.4
ಓವರ್‌ಗಳಲ್ಲಿ 189
(ರಂಜನ್ ಸ್ವೈನ್ 45, ಯಶ್‌ಪಾಲ್ ಸಿಂಗ್ 39, ರಾಹುಲ್ ಶುಕ್ಲಾ 61ಕ್ಕೆ5)

ರೈಲ್ವೇಸ್ 47.5
ಓವರ್‌ಗಳಲ್ಲಿ 242
(ಮಹೇಶ್ ರಾವತ್ 108, ಜೊನಾಥನ್ 58, ಸಿದ್ಧಾರ್ಥ್ ಕೌಲ್ 47ಕ್ಕೆ5)

ಪಂಜಾಬ್ 33.4
ಓವರ್‌ಗಳಲ್ಲಿ 105
(ತರುವಾರ್ ಕೊಹ್ಲಿ 27, ಗೀತಾಂಶ್ ಖೇರಾ 23, ಆಶೀಶ್ ಯಾದವ್ 12ಕ್ಕೆ3)

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.