ಕ್ರೀಡೆ

ಕೋಚ್ ಜವಾಬ್ದಾರಿ ನಿರ್ವಹಿಸಲು ಇದು ಸಮಯವಲ್ಲ: ದ್ರಾವಿಡ್

Published On :

ನವದೆಹಲಿ: ಭಾರತ ತಂಡ ಕಳಪೆ ಪ್ರದರ್ಶನದ ಹಿನ್ನಲೆಯಲ್ಲಿ ಮಾಜಿ ನಾಯಕ ಸುನಿಲ್ ಗವಾಸ್ಕರ್, ಭಾರತ ತಂಡದ ಕೋಚ್ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು ಎಂಬ ಸಲಹೆಯನ್ನು ರಾಹುಲ್ ದ್ರಾವಿಡ್ ಅವರು ನಿರಾಕರಿಸಿದ್ದಾರೆ.
ಭಾರತ ತಂಡದ ಕೋಚ್ ಜವಾಬ್ದಾರಿಯನ್ನು ವಹಿಸಿಕೊಳ್ಳಲು ನಾನು ಉತ್ತಮ ವ್ಯಕ್ತಿ ಎಂದು ಸುನಿಲ್ ಗವಾಸ್ಕರ್ ಅವರು ಸೂಚಿಸಿರುವುದು ಸಂತೋಷ ತಂದಿದೆ. ಆದರೆ ಈ ಕೆಲಸ ನಿರ್ವಹಿಸಲು ಸಾಕಷ್ಟು ಸಮಯದ ಅಗತ್ಯವಿದೆ. ನಾನು ಈಗಷ್ಟೇ ನಿವೃತ್ತಿ ತೆಗೆದುಕೊಂಡಿದ್ದೇನೆ. ಈಗ ಸಮಯದ ಕೊರತೆ ಇರುವುದರಿಂದ ಈ ಸಲಹೆಯನ್ನು ಈಗ ನಿರಾಕರಿಸಬೇಕಿದೆ ಎಂದು ದ್ರಾವಿಡ್ ತಿಳಿಸಿದ್ದಾರೆ.
ನನ್ನ ಪ್ರಕಾರ ಡಂಕನ್ ಫ್ಲೆಚರ್ ಭಾರತ ತಂಡದ ಕೋಚ್ ಆಗಿ ಸಾಧಿಸಿರುವ ಯಶಸ್ಸಿಗೆ 10ರಲ್ಲಿ 1.5 ಅಂಕಗಳನ್ನು ನೀಡಲಷ್ಟೇ ಸಾಧ್ಯ. ಭಾರತ ತಂಡಕ್ಕೆ ಯುವ ಕೋಚ್‌ನ ಅಗತ್ಯವಿದೆ ಎಂದು ಗವಾಸ್ಕರ್ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೇ ನೀಡಿದ್ದರು.
ದ್ರಾವಿಡ್ ಸದ್ಯದ ಪರಿಸ್ಥಿತಿಯಲ್ಲಿ ಭಾರತ ತಂಡದ ಕೋಚ್ ಜವಾಬ್ದಾರಿಯನ್ನು ನಿರಾಕರಿಸಿದ್ದರು, ಭವಿಷ್ಯದಲ್ಲಿ ಈ ಸ್ಥಾನ ತುಂಬಲು ಉತ್ಸುಕರಾಗಿರುವುದಾಗಿ ದ್ರಾವಿಡ್ ತಿಳಿಸಿದ್ದಾರೆ.
ನಾನು ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಮಾರ್ಗದರ್ಶಕನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಭವಿಷ್ಯದಲ್ಲಿ ಏನಾಗಲಿದೆ ಎಂಬುದನ್ನು ಹೇಳಲಾಗದು ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.