ಕ್ರೀಡೆ

ಅಫ್ಘಾನ್‌ಗೆ ಆಘಾತ, ಬಾಂಗ್ಲಾ ಶುಭಾರಂಭ

Published On :

ಮೀರ್‌ಪುರ: ತಮ್ಮೆಲ್ಲ ಅನುಭವ ಪಣಕ್ಕಿಟ್ಟು ಆಡಿದ ಬಾಂಗ್ಲಾದೇಶ ಆಟಗಾರರು ದುರ್ಬಲ ಅಫ್ಘಾನಿಸ್ತಾನ ತಂಡವನ್ನು ಸದೆಬಡಿಯುವ ಮೂಲಕ ವಿಶ್ವಕಪ್ ಟಿ-20 ಪಂದ್ಯಾವಳಿಯ ಅರ್ಹತಾ ಸುತ್ತಿನ ಮೊದಲ ಪಂದ್ಯದಲ್ಲಿ ನಿರಾಯಾಸ ಗೆಲವು ದಾಖಲ್ನಿ ಶುಭಾರಂಭ ಮಾಡಿದ್ದಾರೆ.
ಶೇರೇ-ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಅರ್ಹತಾ ಸುತ್ತಿನ 'ಎ' ಗುಂಪಿನ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ 9 ವಿಕೆಟ್‌ಗಳಿಂದ ಅಫ್ಘಾನಿಸ್ತಾನ ವಿರುದ್ಧ ಜಯಗಳ್ನಿತು. ಈ ಗೆಲವಿನೊಂದಿಗೆ ಬಾಂಗ್ಲಾದೇಶ 2 ಅಂಕಗಳನ್ನು ಪಡೆಯಿತು. ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಅಫ್ಘಾನಿಸ್ತಾನ 17.1 ಓವರುಗಳಲ್ಲಿ 72 ರನ್‌ಗಳಿಸಲಷ್ಟೇ ಶಕ್ತವಾಯಿತು.
ಬಾಂಗ್ಲಾದೇಶ ಬೌಲರ್‌ಗಳ ಚುರುಕಿನ ಬೌಲಿಂಗ್ ಪ್ರದರ್ಶನದ ಮುಂದೆ ಅಫ್ಘಾನಿಸ್ತಾನ ದಾಂಡಿಗರಿಗೆ ಮೈಚಳಿ ಬಿಟ್ಟು ಆಡಲು ಸಾಧ್ಯವಾಗಲಿಲ್ಲ. 49 ರನ್‌ಗಳಿಸುವಷ್ಟರಲ್ಲಿಯೇ 5 ವಿಕೆಟ್ ಕಳೆದುಕೊಂಡಿತು.
ಮೂರನೇ ಕ್ರಮಾಂಕದ ಆಟಗಾರ ಗುಲ್ಬದಿನ್ ನೈಬ್ 22 ಎಸೆತಗಳಲ್ಲಿ 3 ಬೌಂಡರಿ ಮತ್ತು 1 ್ನಕ್ಸರ್ ಸೇರಿದಂತೆ 21 ರನ್‌ಗಳ್ನಿದ್ದೇ ತಂಡದ ಪರ ವೈಯಕ್ತಿಕ ಗರಿಷ್ಠ ಮೊತ್ತದ ಸಾಧನೆಯಾಯಿತು. ಪ್ರವ್ನಾ ತಂಡದಲ್ಲಿ 8 ಮಂದಿ ಬ್ಯಾಟ್ಸ್‌ಮನ್‌ಗಳು ವೈಯಕ್ತಿಕ ಎರಡಂಕಿಯ ಗಡಿ ಕೂಡ ತಲುಪದೇ ಇದ್ದುದು ಅಫ್ಘಾನ್ ಪಡೆ ಅತ್ಯಲ್ಪ ಮೊತ್ತಕ್ಕೆ ಕ್ನುಯಲು ಕಾರಣವಾಯಿತು.
ತವರು ನೆಲದ ಪೂರ್ಣ ಲಾಭ ಪಡೆದುಕೊಂಡ ಬಾಂಗ್ಲಾದೇಶ ಬೌಲರ್‌ಗಳು ಎದುರಾಳಿ ಬ್ಯಾಟ್ಸ್‌ಮನ್‌ಗಳು ಚೇತರ್ನಿಕೊಳ್ಳಲು ಅವಕಾಶವನ್ನೇ ನೀಡಲಿಲ್ಲ. ಶಕೀಬ್ ಅಲ್ ಹಸನ್ 3 ಮತ್ತು ಅಬ್ದುರ್ ರಜಾಕ್ 2 ವಿಕೆಟ್ ಪಡೆದು ಎದುರಾಳಿಯನ್ನು ಬೇಗನೆ ಬಂಧ್ನಿದರು.
ಉತ್ತರವಾಗಿ 73 ರನ್‌ಗಳ ಅಲ್ಪ ಮೊತ್ತದ ಗುರಿ ಬೆಂಬತ್ತಿದ ಬಾಂಗ್ಲಾದೇಶ ಕೇವಲ 12 ಓವರುಗಳಲ್ಲಿ 1 ವಿಕೆಟ್ ಮಾತ್ರ ಕಳೆದುಕೊಂಡು 78 ರನ್‌ಗಳ್ನಿ ಗೆಲವಿನ ಕೇಕೆ ಹಾಕಿತು.
ಆರಂಭಿಕರಾದ ಅನಾಮುಲ್ (ಅಜೇಯ 44, 33 ಎಸೆತ, 4 ಬೌಂಡರಿ, 3 ್ನಕ್ಸರ್) ಮತ್ತು ತಮೀಮ್ ಇಕ್ಬಾಲ್ (21ರನ್, 27 ಎಸೆತ, 2 ಬೌಂಡರಿ) ಮೊದಲ ವಿಕೆಟ್‌ಗೆ 7.4 ಓವರುಗಳಲ್ಲಿ 45 ರನ್ ಸೇರ್ನಿ ಬಹುಬೇಗನೆ ತಂಡದ ಗೆಲವು ಖಚಿತಪಡ್ನಿದರು. ಅಫ್ಘಾನಿಸ್ತಾನ ಬೌಲರ್‌ಗಳನ್ನು ಆತ್ಮವಿಶ್ವಾಸದಿಂದ ಎದುರ್ನಿದ ಬಾಂಗ್ಲಾದೇಶ ಬ್ಯಾಟ್ಸ್‌ಮನ್‌ಗಳು ಸುಲಭವಾಗಿ ರನ್ ಕಲೆಹಾಕಿದರು.
ಸಂಕ್ಷಿಪ್ತ ಸ್ಕೋರ್
ಅಫ್ಘಾನಿಸ್ತಾನ 17.1 ಓವರುಗಳಲ್ಲಿ 72 (ಗುಲ್ಬದಿನ್ ನೈಬ್ 21, ಶಫೀಕುಲ್ಲಾ 16, ಕರೀಂ ಸಾದಿಕ್ 10, ಶಕೀಬ್ ಅಲ್ ಹಸನ್ 8ಕ್ಕೆ3, ಅಬ್ದುರ್ ರಜಾಕ್ 20ಕ್ಕೆ2). ಬಾಂಗ್ಲಾದೇಶ 12 ಓವರುಗಳಲ್ಲಿ 1 ವಿಕೆಟ್‌ಗೆ 78 (ಅನಾಮುಲ್ ಹಕ್ ಅಜೇಯ 44, ತಮೀಮ್ ಇಕ್ಬಾಲ್ 21, ಶಕೀಬ್ ಅಲ್ ಹಸನ್ ಅಜೇಯ 10, ಶಮೀವುಲ್ಲಾ ಶೇನವಾರಿ 14ಕ್ಕೆ1).

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.