ಐರ್ಲೆಂಡ್ಗೆ ಸ್ಟ್ರಿಲ್ಲಿಂಗ್ ಬಲ
ಸಿಲ್ಹೆಟ್: ಬೌಲಿಂಗ್ ಹಾಗೂ ಬ್ಯಾಟಿಂಗ್ ವಿಭಾಗದಲ್ಲಿ ಸಂಘಟಿತ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾದ ಐರ್ಲೆಂಡ್ ತಂಡವು ಟಿ20 ವಿಶ್ವಕಪ್ ಪಂದ್ಯಾವಳಿಯ ಅರ್ಹತಾ ಸುತ್ತಿನ ಪಂದ್ಯದಲ್ಲಿ ಜಿಂಬ್ಬಾಬ್ವೆ ವಿರುದ್ಧ ಗೆಲವು ದಾಖಲಿಸಿದೆ. ಸೋಮವಾರ ಇಲ್ಲಿನ ಸಿಲ್ಹೆಟ್ ಕ್ರೀಡಾಂಗಣದಲ್ಲಿ ನಡೆದ ಬಿ ಗುಂಪಿನ ಪಂದ್ಯದಲ್ಲಿ ಐರ್ಲೆಂಡ್ ತಂಡವು ಜಿಂಬಾಬ್ವೆ ವಿರುದ್ಧ 3 ವಿಕೆಟ್ಗಳ ಗೆಲವು ದಾಖಲಿಸುವಲ್ಲಿ ಯಶಸ್ವಿಯಾಯಿತು. ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಐರ್ಲೆಂಡ್ ತಂಡವು ಜಿಂಬಾಬ್ವೆ ತಂಡವನ್ನು 20 ಓವರ್ಗಳಲ್ಲಿ 163 ರನ್ಗಳಿಗೆ 5 ವಿಕೆಟ್ ಪಡೆದು ನಿಯಂತ್ರಿಸಿತು. ನಂತರ ಈ ಮೊತ್ತವನ್ನು ಬೆನ್ನಟ್ಟಿದ ಐರ್ಲೆಂಡ್ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 164 ರನ್ ದಾಖಲಿಸುವ ಮೂಲಕ ಗೆಲವಿನ ಕೇಕೆ ಹಾಕಿತು.
ಟೇಲರ್ ಅರ್ಧಶತಕ: ಬ್ಯಾಟಿಂಗ್ನಲ್ಲಿ ಜಿಂಬಾಬ್ವೆ ತಂಡಕ್ಕೆ ಬಲ ನೀಡಿದ್ದು, ನಾಯಕ ಬ್ರೆಂಡನ್ ಟೇಲರ್(59 ರನ್, 46 ಎಸೆತ, 1 ಬೌಂಡರಿ, 1 ಸಿಕ್ಸರ್). ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಹ್ಯಾಮಿಲ್ಟನ್ ಮಸಕಜ(21) ಹಾಗೂ ಸಿಕಂದರ್ ರಾಜಾ(10) ರನ್ಗಳಿ ಪೆವಿಲಿಯನ್ ಸೇರಿಕೊಂಡರು. ಈ ವೇಳೆ ಕಣಕ್ಕಿಳಿದ ಟೇಲರ್, ಐರ್ಲೆಂಡ್ ತಂಡದ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದರು. ಹಾಗಾಗಿ ತಂಡ 150ರ ಗಡಿ ದಾಟಲು ನೆರವಾಯಿತು. ಉಳಿದಂತೆ ಚಿಗುಂಬುರಾ 13 ಎಸೆತದಲ್ಲಿ 2 ಸಿಕ್ಸರ್ ಸೇರಿದ ಅಜೇಯ 22 ರನ್ ದಾಖಲಿಸಿದರು. ಐರ್ಲೆಂಡ್ ಪರ ಜಾರ್ಜ್ ಡಕ್ರೆಲ್ ಹಾಗೂ ಮೆಕ್ಬ್ರಿನ್ ತಲಾ 2 ವಿಕೆಟ್ ಕಬಳಿಸಿದರು.
ಭದ್ರ ಅಡಿಪಾಯ: ಜಿಂಬಾಬ್ವೆ ನೀಡಿದ ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನಟ್ಟಿದ ಐರ್ಲೆಂಡ್ ತಂಡಕ್ಕೆ ಆರಂಭಿಕರಾದ ವಿಲಿಯಮ್ ಪೋಟರ್ಫೀಲ್ಡ್(31) ಹಾಗೂ ಪೌಲ್ ಸ್ಟ್ರಿಲ್ಲಿಂಗ್(60 ರನ್, 34 ಎಸೆತ, 9 ಬೌಂಡರಿ, 1ಸಿಕ್ಸರ್) 80 ರನ್ಗಳ ಅತ್ಯುತ್ತಮ ಜತೆಯಾಟ ನೀಡುವ ಮೂಲಕ ತಂಡಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟರು. ಈ ಜತೆಯಾಟ ತಂಡದ ಗೆಲವಿನ ಹಾದಿಯನ್ನು ಸುಗಮವಾಗುವಂತೆ ಮಾಡಿತು. ನಂತರ ಬಂದ ಎಡ್ ಜೋಯ್ಸ್(22) ಹಾಗೂ ಆ್ಯಂಡ್ರೂ ಪಾಂಯ್ಟಿರ್(23) ತಂಡವನ್ನು ಗೆಲವಿನ ಹೊಸ್ತಿಲಿಗೆ ತಂದು ನಿಲ್ಲಿಸಿದರು. ಜಿಂಬಾಬ್ವೆ ತಂಡದ ಪರ ತಿನಾಶೆ ಪನ್ಯಾಂಗಾರ 4 ವಿಕೆಟ್ ಪಡೆದು ಮಿಂಚಿದರು. ಈ ಮೂಲಕ ಐರ್ಲೆಂಡ್ ತಂಡ ಪಂದ್ಯಾವಳಿಯಲ್ಲಿ ಗೆಲವಿನ ಆರಂಭ ಪಡೆದಿದೆ.
ಸಂಕ್ಷಿಪ್ತ ಸ್ಕೋರ್
ಜಿಂಬಾಬ್ವೆ 20 ಓವರ್ಗಳಲ್ಲಿ 5 ವಿಕೆಟ್ಗೆ 163
(ಬ್ರೆಂಡನ್ ಟೇಲರ್ 59, ಎಲ್ಟನ್ ಚಿಗುಂಬುರಾ ಅಜೇಯ 22, ಜಾರ್ಜ್ ಡಕ್ರೆಲ್ 18ಕ್ಕೆ2, ಆ್ಯಂಡಿ ಮೆಕ್ಬ್ರಿನ್ 26ಕ್ಕೆ2)
ಐರ್ಲೆಂಡ್ 20 ಓವರ್ಗಳಲ್ಲಿ 7 ವಿಕೆಟ್ಗೆ 164
(ಪೌಲ್ ಸ್ಟ್ರಿಲ್ಲಿಂಗ್ 60, ಪೊಟರ್ಫೀಲ್ಡ್ 31, ಪನ್ಯಂಗಾರ 37ಕ್ಕೆ4, ಚಟಾರ 20ಕ್ಕೆ1)
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

