ಪೀಟರ್ಸನ್ ಬಗ್ಗೆ ಮಾತನಾಡದ ಬ್ರಾಡ್
ಢಾಕಾ: ಕೆವಿನ್ ಪೀಟರ್ಸನ್ ಅವರನ್ನು ತಂಡದಿಂದ ಕೈಬಿಟ್ಟ ವಿವಾದ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲು ಇಂಗ್ಲೆಂಡ್ ಟಿ20 ತಂಡಗ ನಾಯಕ ಸ್ಟುವರ್ಟ್ ಬ್ರಾಡ್ ಅವರು ಹಿಂದೇಟು ಹಾಕಿದರು.
ಆ್ಯಶಸ್ ಟೆಸ್ಟ್ ವೈಫಲ್ಯದ ಹಿನ್ನೆಲೆಯಲ್ಲಿ ಕೆವಿನ್ ಪೀಟರ್ಸನ್ ಅವರ ವೃತ್ತಿ ಜೀವನ ನಾಟಕೀಯವಾಗಿ ಅಂತ್ಯಗೊಂಡಿದ್ದು ಮತ್ತು ಗ್ರೇಮ್ ಸ್ವಾನ್ ಅವರು ತಕ್ಷಣ ನಿವೃತ್ತಿ ಘೋಷಿಸಿದ್ದು ತಂಡದ ಮೇಲೆ ಪರಿಣಾಮ ಬೀರುವುದಿಲ್ಲವೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಬ್ರಾಡ್, 'ಅನುಭವಿಗಳು ಇಲ್ಲದಿರುವುದು ನಮಗೆ ತೊಂದರೆ ಅಲ್ಲ. ಟಿ20 ಆಡಿದ ಅನುಭವ ಇರುವ ಆಟಗಾರರೂ ಇಲ್ಲ. ಆದರೆ, ಟೆಸ್ಟ್ ಮತ್ತು ಏಕದಿನ ಪಂದ್ಯವನ್ನಾಡಿದ ಆಟಗಾರರು ಇದ್ದಾರೆ' ಎಂದು ಅವರು ತಿಳಿಸಿದರು.
'ನಾವು ತಂಡದಲ್ಲಿ ಉತ್ತಮ ಆಟಗಾರರನ್ನು ಹೊಂದಿದ್ದೇವೆ. ಬೋಪರಾ, ಮಾರ್ಗನ್ ಹಾಗೂ ಅಲೆಕ್ಸ್ ಹೇಲ್ಸ್ ಅವರಂತೆ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಬಲ್ಲ ಬ್ಯಾಟ್ಸ್ಮನ್ಗಳಿದ್ದಾರೆ. ಟೆಸ್ಟ್ ಪಂದ್ಯದಲ್ಲಿ 8ರಿಂದ 9ನೇ ಬ್ಯಾಟ್ಸ್ಮನ್ವರೆಗೂ ಬ್ಯಾಟ್ಸ್ಮನ್ಗಳನ್ನು ನಂಬಿಕೊಂಡಿರಬೇಕು. ಆದರೆ, ಟಿ20ಯಲ್ಲಿ ಹಾಗಲ್ಲ. ಇಲ್ಲಿ ಒಬ್ಬರು ಅಥವಾ ಇಬ್ಬರು ಆಡಿದರೆ ಸಾಕು ಪಂದ್ಯವನ್ನು ಗೆಲ್ಲಬಹುದು. ಅಲ್ಲದೆ ಒಂದು ಓವರ್ನಲ್ಲಿ ಪಂದ್ಯ ತಿರುವು ಪಡೆದುಕೊಳ್ಳುತ್ತದೆ' ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

