ಇಂಡಿಯಾ ಓಪನ್ನತ್ತ ಜ್ವಾಲಾ-ಅಶ್ವಿನ್ ಚಿತ್ತ
ನವದೆಹಲಿ: ಭಾರತದ ಅಗ್ರ ಮಹಿಳಾ ಡಬಲ್ಸ್ ಬ್ಯಾಡ್ಮಿಂಟನ್ ತಾರೆ ಅಶ್ವಿನಿ ಪೊನ್ನಪ್ಪ ಅವರು ತಮ್ಮ ಜತೆಯಾಟಗಾರ್ತಿ ಜ್ವಾಲಾ ಗುಟ್ಟಾ ಅವರೊಂದಿಗೆ ಇಂಡಿಯಾ ಓಪನ್ ಸೂಪರ್ ಸಿರೀಸ್ನಲ್ಲಿ ಉತ್ತಮ ಪ್ರದರ್ಶನ ನೀಡಲು ಎದುರು ನೋಡುತ್ತಿದ್ದಾರಂತೆ. ಪಂದ್ಯಾವಳಿ ಏಪ್ರಿಲ್ 1ರಿಂದ 6ರವರೆಗೆ ನಡೆಯಲಿದೆ.
ಈ ಹಿಂದೆ ಸ್ವಿಸ್ ಓಪನ್ ಮತ್ತು ಆಲ್ ಇಂಗ್ಲೆಂಡ್ ಪಂದ್ಯಾವಳಿಗಳಲ್ಲಿ ವೈಫಲ್ಯ ಕಂಡಿರುವ ಈ ಜೋಡಿ, ಈಗ ತಕ್ಕ ಪ್ರದರ್ಶನ ನೀಡಲು ಎದುರು ನೋಡುತ್ತಿದೆ. ಗ್ಲಾಸ್ಗೋದಲ್ಲಿ ನಡೆಯಲಿರುವ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಮಹಿಳೆಯರ ಡಬಲ್ಸ್ ಪ್ರಶಸ್ತಿ ಉಳಿಸಿಕೊಳ್ಳಲು ಎದುರು ನೋಡುತ್ತಿರುವ 24 ವರ್ಷದ ಅಶ್ವಿನಿ ಜೋಡಿ, ಆಲ್ ಇಂಗ್ಲೆಂಡ್ ಪಂದ್ಯಾವಳಿಯ ಅರ್ಹತಾ ಸುತ್ತಿನಲ್ಲಿ ಮತ್ತು ಸ್ವಿಸ್ ಓಪನ್ನ ಮೊದಲ ಸುತ್ತಿನಲ್ಲೇ ಪರಾಭವ ಹೊಂದಿತ್ತು. 'ಇತ್ತೀಚೆಗೆ ನಾವು ಭಾಗವಹಿಸಿದ ಪಂದ್ಯಾವಳಿಗಳಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲಾಗಿಲ್ಲ. ಆದರೆ, ನಾವು ಅಲ್ಲಿ ಕಠಿಣ ಎದುರಾಳಿಗಳೊಂದಿಗೆ ಹೋರಾಡಿದ್ದನ್ನು ಗಮನಿಸಬಹುದು. ಆದರೆ, ಈಗ ಇಂಡಿಯಾ ಓಪನ್ನಲ್ಲಿ ಉತ್ತಮ ಪ್ರದರ್ಶನ ನೀಡಲು ಎದುರು ನೋಡುತ್ತಿದ್ದೇವೆ' ಎಂದು ಬುಧವಾರ ಅಶ್ವಿನಿ ತಿಳಿಸಿದ್ದಾರೆ. 'ಆಲ್ ಇಂಗ್ಲೆಂಡ್ನಲ್ಲಿ ನಾವು ಕಠಿಣ ಜೋಡಿ ವಿರುದ್ಧ ಸೋಲನುಭವಿಸಿದೆವು. ಆದರೆ, ನಾವು ಹೋರಾಟ ನೀಡಿದ ರೀತಿ ನಮ್ಮಲ್ಲಿ ವಿಶ್ವಾಸ ತುಂಬಿದೆ. ಆ ಪಂದ್ಯಗಳು ನಾವು ಸೂಕ್ತ ಹೋರಾಟ ನಡೆಸಿದ್ದೇವೆ ಎಂಬುದನ್ನು ತೋರಿಸಿಕೊಟ್ಟಿವೆ. ಈಗೇನಿದ್ದರೂ ನಿರತಂರವಾಗಿ ಸಕರಾತ್ಮಕ ಫಲಿತಾಂಶ ಕಾಣಬೇಕಾಗಿರುವುದು ಮುಖ್ಯ' ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

