ಬೆಂಗ್ಳೂರಲ್ಲಿ ಬಿಎಫ್ಸಿ ಶಾಲೆ
ಬೆಂಗಳೂರು: ಈ ವರ್ಷವಷ್ಟೇ ಅಸ್ಥಿತ್ವಕ್ಕೆ ಬಂದಿರುವ ಬೆಂಗಳೂರು ಫುಟ್ಬಾಲ್ ಕ್ಲಬ್ (ಬಿಎಫ್ಸಿ) ಬೆಂಗಳೂರು ನಗರದಲ್ಲಿ ಫುಟ್ಬಾಲ್ ಶಾಲೆಯನ್ನು ಆರಂಭಿಸಿದೆ. ಗ್ರಾಮೀಣಮಟ್ಟದ ಫುಟ್ಬಾಲ್ ಪ್ರತಿಭೆಗಳಿಗೆ ನೆರವಾಗುವ ನಿಟ್ಟಿನಲ್ಲಿ ಶಾಲೆ ಆರಂಭಿಸಿರುವುದಾಗಿ ಬಿಎಫ್ಸಿ ತಿಳಿಸಿದೆ.
ಬಿಎಫ್ಸಿ ಕಾರ್ಯನಿರ್ವಾಹಕ ಅಧಿಕಾರಿ ಮುಸ್ತಫಾ ಘೋಶ್, ಮುಖ್ಯ ಕೋಚ್ ಆ್ಯಶ್ಲಿ ವೆಸ್ಟ್ವುಡ್, ತಂಡದ ಯುವ ಅಭಿವೃದ್ಧಿ ವಿಭಾಗದ ಮುಖ್ಯಸ್ಥ ರಿಚರ್ಡ್ ಹೂಡ್ ಹಾಗೂ ಸ್ಟ್ರೈಕರ್ ರಾಬಿನ್ ಸಿಂಗ್ ಅವರು ಶಾಲೆಯ ಆರಂಭವನ್ನು ಘೋಷಿಸಲು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.
ಶಾಲೆಯನ್ನು ಬೆಳ್ಳಂದೂರಿನಲ್ಲಿ ಏಪ್ರಿಲ್ 20ರಂದು ಅಧಿಕೃತವಾಗಿ ಆರಂಭಿಸಲು ಯೋಜಿಸಲಾಗಿದೆ. ತಂಡದ ಕೋಚಿಂಗ್ ಸಿಬ್ಬಂದಿ ವಿನ್ಯಾಸಗೊಳಿಸಿರುವ ಶಾಲೆಯಲ್ಲಿ 7, 9 ಮತ್ತು 11ನೇ ವಯಸ್ಸಿನ ಮಕ್ಕಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.
7 ವರ್ಷದೊಳಗಿನ ಮಕ್ಕಳ ವಿಭಾಗದಲ್ಲಿ ಎರಡು ತಂಡಗಳಿದ್ದು, ವಾರದಲ್ಲಿ ಎರಡು ಅವಧಿಯಲ್ಲಿ ಅಭ್ಯಾಸ ನಡೆಸಿದರೆ, 9 ಮತ್ತು 11 ವಯೋವಾನದ ಮಕ್ಕಳು ವಾರದಲ್ಲಿ ಮೂರು ಅವಧಿಯಲ್ಲಿ ಅಭ್ಯಾಸ ನಡೆಸಲಿದ್ದಾರೆ.
ಶಾಲೆ ಆರಂಭವಾದ ನಂತರ ಇನ್ನೂ ಹೆಚ್ಚಿನ ರೀತಿಯಲ್ಲಿ ಮಕ್ಕಳಿಗೆ ತರಬೇತಿ ನೀಡುವ ಯೋಜನೆ ರೂಪಿಸಿಕೊಳ್ಳಲು ಬಿಎಫ್ಸಿ ಚಿಂತನೆ ನಡೆಸಿದೆ. ಅಲ್ಲದೆ ಶಾಲೆಯಲ್ಲಿ ಬೆಳೆಯುವ ಪ್ರತಿಭೆಗಳನ್ನು ಆಯ್ದುಕೊಂಡು ಹಿರಿಯರ ತಂಡಕ್ಕೆ ಸೇರಿಸಿಕೊಳ್ಳುವ ಯೋಜನೆಯನ್ನೂ ಬಿಎಫ್ಸಿ ಹೊಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

