ಕ್ರೀಡೆ

ಬಾಂಗ್ಲಾಗೆ ಹ್ಯಾಟ್ರಿಕ್ ಸೋಲು

ಬಾಂಗ್ಲಾಗೆ ಹ್ಯಾಟ್ರಿಕ್ ಸೋಲು
Published On :

ಮೀರ್‌ಪುರ: ಆರಂಭಿಕ ಅಹ್ಮದ್ ಶೆಹಜಾದ್(ಅಜೇಯ 111) ಅವರ ಅಮೋಘ ಶತಕದ ನೆರವಿನಿಂದ ಪಾಕಿಸ್ತಾನ ತಂಡವು ಟಿ20 ವಿಶ್ವಕಪ್ ಪಂದ್ಯಾವಳಿಯ ಸೂಪರ್ 10 ಹಂತದ ಪಂದ್ಯದಲ್ಲಿ ಆತಿಥೇಯ ಬಾಂಗ್ಲಾದೇಶದ ವಿರುದ್ಧ ಗೆಲವು ದಾಖಲಿಸಿದೆ. ಈ ಮೂಲಕ ಪಾಕಿಸ್ತಾನ ತಂಡದ ಉಪಾಂತ್ಯದ ಕನಸು ಜೀವಂತವಾಗಿ ಉಳಿದಿದೆ.
ಭಾನುವಾರ ಇಲ್ಲಿನ ಶೇರೇ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಪಾಕಿಸ್ತಾನ  50 ರನ್‌ಗಳ ಅಂತರದಲ್ಲಿ ಬಾಂಗ್ಲಾದೇಶವನ್ನು ಮಣಿಸಿತು. ಇದು ಮಾಡು ಇಲ್ಲವೆ ಮಡಿ ಪಂದ್ಯವಾಗಿದ್ದ ಹಿನ್ನೆಲೆಯಲ್ಲಿ ಪಾಕಿಸ್ತಾನಕ್ಕೆ ಈ ಗೆಲವು ಮಹತ್ವದ್ದಾಗಿದೆ.
ಟಾಸ್ ಗೆದ್ದ ಪಾಕಿಸ್ತಾನ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರ ತೆಗೆದುಕೊಂಡಿತು. ಆಗ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 190 ರನ್ ದಾಖಲಿಸುವಲ್ಲಿ ಯಶಸ್ವಿಯಾಯಿತು. ನಂತರ ಈ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಬಾಂಗ್ಲಾದೇಶ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 140 ರನ್ ದಾಖಲಿಸಿತು. ಈ ಮೂಲಕ ಬಾಂಗ್ಲಾದೇಶ ಸೂಪರ್ 10 ಹಂತದಲ್ಲಿ ಸತತ ಮೂರನೇ ಸೋಲನುಭವಿಸಿ ನಿರಾಸೆ ಮೂಡಿಸಿತು.
ಅಬ್ಬರಿಸಿದ ಶೆಹಜಾದ್: ಮೊದಲು ಬ್ಯಾಟಿಂಗ್ ಮಾಡಲು ಆಗಮಿಸಿದ ಪಾಕಿಸ್ತಾನಕ್ಕೆ ಆರಂಭಿಕರಿಂದ ಸಾಧಾರಣ ಮೊತ್ತ ದೊರಕಿತು. ಅಹ್ಮದ್ ಶೆಹಜಾದ್ ಜತೆಗೆ ಕಣಕ್ಕಿಳಿದ ಕಮ್ರಾನ್ ಅಕ್ಮಲ್(9) 43 ರನ್‌ಗಳ ಜತೆಯಾಟ ನೀಡಿದರು.
ನಂತರ ಬಂದ ಮೊಹಮದ್ ಹಫೀಜ್(8) ಹಾಗೂ ಉಮರ್ ಅಕ್ಮಲ್(0) ಬಂದ ವೇಗದಲ್ಲೇ ಪೆವಿಲಿಯನ್ ಸೇರಿಕೊಂಡರು ಹಾಗಾಗಿ ಪಾಕಿಸ್ತಾನ ಸಂಕಷ್ಟಕ್ಕೆ ಸಿಲುಕಿತು. ಈ ವೇಳೆ ಶೆಹಜಾದ್ ಜತೆಗೂಡಿದ ಶೊಹೆಬ್ ಮಲಿಕ್(26) ತಂಡಕ್ಕೆ 83 ರನ್‌ಗಳ ಜತೆಯಾಟ ನೀಡಿ ತಂಡದ ಮೊತ್ತವನ್ನು 150ರ ಗಡಿದಾಟುವಂತೆ ಮಾಡಿದರು.
ಮಲಿಕ್ ನಂತರ ಬಂದ ಶಾಹಿದ್ ಅಫ್ರಿದಿ (22 ರನ್, 9 ಎಸೆತ, 1 ಬೌಂಡರಿ, 2 ಸಿಕ್ಸರ್) ಅಬ್ಬರದ ಬ್ಯಾಟಿಂಗ್ ನಡೆಸಿ ತಂಡ ಬೃಹತ್ ಮೊತ್ತ ದಾಖಲಿಸುವಂತೆ ನೋಡಿಕೊಂಡರು.
ಇನ್ನು ಪಾಕಿಸ್ತಾನದ ಪರ ಅದ್ಭುತ ರೀತಿ ಇನಿಂಗ್ಸ್ ಕಟ್ಟಿದ ಅಹ್ಮದ್ ಶೆಹಜಾದ್ (ಅಜೇಯ 111, 62 ಎಸೆತ, 10 ಬೌಂಡರಿ, 5 ಸಿಕ್ಸರ್) ತಂಡದ ಗೆಲವಿನಲ್ಲಿ ಪ್ರಭಾವ ಬೀರಿದರು.
ಇನ್ನು ಬಾಂಗ್ಲಾ ಪರ ಅಬ್ದುರ್ ರೆಹಮಾನ್ 2, ಅಲ್ ಅಮೀನ್, ಶಕಿಬ್ ಹಾಗೂ ಮಹಮದ್ದುಲ್ಲಾ ತಲಾ 1 ವಿಕೆಟ್ ಪಡೆದರು.
ಕಠಿಣ ಹಾದಿ: ಬೃಹತ್ ಮೊತ್ತವನ್ನು ಬೆನ್ನಟ್ಟಿದ ಬಾಂಗ್ಲಾದೇಶಕ್ಕೆ ಹಾದಿ ಬಹಳ ಕಠಿಣವಾಗಿ ಪರಿಣಮಿಸಿತು. ಆರಂಭಿಕ ಮೂವರು ಬ್ಯಾಟ್ಸ್‌ಮನ್‌ಗಳಾದ ತಮೀಮ್ ಇಕ್ಬಾಲ್(16), ಅನಾಮುಲ್ ಹಕ್(18) ಹಾಗೂ ಶಕಿಬ್ ಅಲ್ ಹಸನ್(38) ಉತ್ತಮ ಆರಂಭ ಪಡೆದರಾದರೂ ನಂತರ ಅದನ್ನು ದೊಡ್ಡ ಇನಿಂಗ್ಸ್ ಆಗಿ ಪರಿವರ್ತಿಸುವಲ್ಲಿ ವಿಫಲರಾದರು.
ನಂತರ ಬಂದ ಬ್ಯಾಟ್ಸ್‌ಮನ್‌ಗಳಲ್ಲಿ ನಾಸಿರ್ ಹುಸೇನ್ 23 ರನ್ ಗಳಿಸಿದ್ದು ಬಿಟ್ಟರೆ ಉಳಿದ ಯಾವುದೇ ಬ್ಯಾಟ್ಸ್‌ಮನ್‌ಗಳ ಬ್ಯಾಟ್‌ನಿಂದ ಹೆಚ್ಚಿನ ರನ್ ಹರಿದು ಬರಲಿಲ್ಲ. ಹಾಗಾಗಿ ಬಾಂಗ್ಲಾ ಮತ್ತೊಮ್ಮೆ ದಯನೀಯ ಸೋಲನುಭವಿಸುವಂತಾಯಿತು.
ಪಾಕಿಸ್ತಾನದ ಪರ ಉಮರ್ ಗುಲ್ 30 ರನ್‌ಗಳಿಗೆ 3 ವಿಕೆಟ್ ಪಡೆದರೆ, ಸಯೀದ್ ಅಜ್ಮಲ್ 20ಕ್ಕೆ2 ವಿಕೆಟ್ ಪಡೆದರು. ಇನ್ನು ಬಬರ್ ಹಾಗೂ ಅಫ್ರಿದಿ ತಲಾ 1 ವಿಕೆಟ್ ಪಡೆದರು.
ಪಾಕಿಸ್ತಾನದ ಬ್ಯಾಟಿಂಗ್‌ನಲ್ಲಿ ಶತಕ ಸಿಡಿಸಿ ತಂಡದ ಗೆಲವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಅಹ್ಮದ್ ಶೆಹಜಾದ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ಸಂಕ್ಷಿಪ್ತ ಸ್ಕೋರ್
ಪಾಕಿಸ್ತಾನ 20 ಓವರ್‌ಗಳಲ್ಲಿ     5 ವಿಕೆಟ್‌ಗೆ 190
ಶೆಹಜಾದ್ ಅಜೇಯ 111, ಶೊಹೆಬ್ ಮಲಿಕ್ 26, ರಜಾಕ್ 20ಕ್ಕೆ2
ಬಾಂಗ್ಲಾದೇಶ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 140
ಶಕಿಬ್ 38, ಹುಸೇನ್ 23, ಉಮರ್ ಗುಲ್ 30ಕ್ಕೆ3, ಅಜ್ಮಲ್ 20ಕ್ಕೆ2

ಅಂಕಪಟ್ಟಿ
ಗುಂಪು-1
ತಂಡ    ಪಂದ್ಯ    ಜಯ    ಸೋಲು    ಅಂಕ    ರನ್‌ಸರಾಸರಿ
ದಕ್ಷಿಣ ಆಫ್ರಿಕಾ    4    3    1    6    ೤0.075
ಶ್ರೀಲಂಕಾ    3    2    1    4    ೤2.199
ನ್ಯೂಜಿಲೆಂಡ್    3    2    1    4    ೤0.362
ಇಂಗ್ಲೆಂಡ್    3    1    2    2    -0.102
ನೆದರ್‌ಲ್ಯಾಂಡ್ಸ್    2    0    2    0    -2.950

ಗುಂಪು-2
ತಂಡ    ಪಂದ್ಯ    ಜಯ    ಸೋಲು    ಅಂಕ    ರನ್‌ಸರಾಸರಿ
ಭಾರತ    3    3    0    6    ೤0.477
ವೆಸ್ಟ್ ಇಂಡೀಸ್    3    2    1    4    ೤1.223
ಪಾಕಿಸ್ತಾನ    3    2    1    4    ೤0.893
ಆಸ್ಟ್ರೇಲಿಯಾ    2    0    2    0    -0.503
ಬಾಂಗ್ಲಾದೇಶ    3    0    3    0    -2.315

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.