ಉಪಾಂತ್ಯಕ್ಕೆ ಕಮಲ್
ನವದೆಹಲಿ: ತಮ್ಮ ಮನಮೋಹಕ ಪ್ರದರ್ಶನ ಮುಂದುವರಿಸಿರುವ ಭಾರತದ ಭರವಸೆಯ ಸ್ನೂಕರ್ ತಾರೆ ಕಮಲ್ ಚಾವ್ಲಾ, ಏಷ್ಯನ್ ಸ್ನೂಕರ್ ಚಾಂಪಿಯನ್‌ಶಿಪ್‌ನಲ್ಲಿ ಉಪಾಂತ್ಯಕ್ಕೆ ಪ್ರವೇಶಿಸಿದ್ದಾರೆ.
ಯುನೈಟೆಡ್ ಅರಬ್ ಎಮಿರೆಟ್ಸ್‌ನ ಅಲ್ ಫುಜೈರಹ್‌ನಲ್ಲಿ ನಡೆಯುತ್ತಿರುವ ಪಂದ್ಯಾವಳಿಯ ಶುಕ್ರವಾರದ ಎಂಟರ ಘಟ್ಟದ ಪಂದ್ಯದಲ್ಲಿ ಕಮಲ್ ಚಾವ್ಲಾ ಮಲೇಷಿಯಾದ ಮೊಹ್ ಕೀನ್ ಹೊ ವಿರುದ್ಧ ಗೆಲವು ದಾಖಲಿಸಿದ್ದಾರೆ. ಈ ಮೂಲಕ ಚಾವ್ಲಾ, ಪಂದ್ಯಾವಳಿಯ ಉಪಾಂತ್ಯಕ್ಕೆ ಪ್ರವೇಶಿಸಿದ್ದು, ಪ್ರಶಸ್ತಿಗೆ ಮುತ್ತಿಕ್ಕಲು ಕೇವಲ ಎರಡು ಹೆಜ್ಜೆ ಮಾತ್ರ ಬಾಕಿ ಉಳಿದಿದೆ.
ಚಾವ್ಲಾ ಪ್ರಿಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಚೀನಾದ ಚೆನ್ ಜಿಫಾನ್ ವಿರುದ್ಧ 4-2 ಅಂಕಗಳ ಅಂತರದಲ್ಲಿ ಗೆಲವು ದಾಖಲಿಸಿದರೆ, ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಮಲೇಷಿಯಾದ ಮೊಹ್ ಕೀನ್ ಹೊ ವಿರುದ್ಧ 5-3 ಅಂಕಗಳಿಂದ ಜಯ ಸಾಧಿಸಿದರು.
ಚಾವ್ಲಾ ಈ ಸಾಲಿನ ರಾಷ್ಟ್ರೀಯ ಪಂದ್ಯಾವಳಿಯಲ್ಲಿ ಪಂಕಜ್ ಅಡ್ವಾಣಿ ವಿರುದ್ಧ ಸೋಲನುಭವಿಸಿ ನಿರಾಸೆಗೊಂಡಿದ್ದರು. ಆನಂತರ ಉತ್ತಮ ಪ್ರದರ್ಶನ ನೀಡುತ್ತಿರುವ ಚಾವ್ಲಾ ಈಗ ಪ್ರಶಸ್ತಿ ಪಡೆಯುವತ್ತ ದಾಪುಗಾಲು ಹಾಕಿದ್ದಾರೆ.
ಕಮಲ್ ತಮ್ಮ ಮುಂದಿನ ಪಂದ್ಯದಲ್ಲಿ ಮಲೇಷ್ಯಾದ ಚೌನ್ ಲೆಂಗ್ ಥೋರ್ ವಿರುದ್ಧ ಸೆಣೆಸಾಟ ನಡೆಸಲಿದ್ದಾರೆ.
ಇನ್ನು ಭಾರತದ ಇತರೆ ಆಟಗಾರರಾದ ಧರ್ಮಿಂದರ್ ಲಿಲ್ಲಿ ತಮ್ಮ ಹಾದಿಯಲ್ಲಿ ಎಡವಿದ್ದಾರೆ. ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ತಮ್ಮ ಎದುರಾಳಿ ಮಲೇಷಿಯಾದ ಚೌನ್ ಲೆಂಗ್ ಥೋರ್ ವಿರುದ್ಧ 0-4 ಅಂತರದಲ್ಲಿ ಪರಾಭವಗೊಂಡಿದ್ದಾರೆ.
ಈ ಪಂದ್ಯಾವಳಿಯಲ್ಲಿ ಗೆಲವು ಸಾಧಿಸುವ ಆಟಗಾರ ಮುಂದಿನ ಎರಡು ಋತುಗಳಲ್ಲಿ ನಡೆಯುವ ಪ್ರೊ ಟೂರ್ ಪಂದ್ಯಾವಳಿಗೆ ಪ್ರವೇಶ ಪಡೆಯಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

