ಡೆಲ್ಲಿಗೆ ಕರುಣ್ ಕಿಕ್
ನವದೆಹಲಿ: ಆರಂಭಿಕ ಆಟಗಾರ ಕರ್ನಾಟಕದ ಕರುಣ್ ನಾಯರ್ ಅದ್ಭುತ ಬ್ಯಾಟಿಂಗ್ ನೆರವಿನೊಂದಿಗೆ ರಾಜಸ್ಥಾನ್ ರಾಯಲ್ಸ್ ತಂಡ ಶನಿವಾರ ನಡೆದ ಐಪಿಎಲ್ನ ಎರಡನೇ ಪಂದ್ಯದಲ್ಲಿ ಡೆಲ್ಲಿ ಡೇರ್ಡೆವಿಲ್ಸ್ ವಿರುದ್ಧ 7ವಿಕೆಟ್ ಅಂತರದಿಂದ ಜಯ ಸಾಧಿಸಿತು.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ರಾಜಸ್ಥಾನ, ಡೆಲ್ಲಿ ತಂಡವನ್ನು 152 ರನ್ಗಳಿಗೆ ಕಟ್ಟಿ ಹಾಕಿತು. ನಂತರ 153 ರನ್ಗಳ ಗುರಿ ಬೆನ್ನಟ್ಟಿದ ರಾಜಸ್ಥಾನ, ಇನ್ನೂ 9 ಎಸೆತಗಳು ಬಾಕಿ ಇರುವಂತೆಯೇ 3 ವಿಕೆಟ್ ನಷ್ಟಕ್ಕೆ 156 ರನ್ ಕಲೆ ಹಾಕಿ ಗೆಲವಿನ ದಡ ಸೇರಿತು. ಆರಂಭಿಕ ಆಟಗಾರ ಕರುಣ್ ನಾಯರ್ (ಅಜೇಯ 73) ಆಕರ್ಷಕ ಅರ್ಧ ಶತಕದಲ್ಲಿ 2 ಸಿಕ್ಸರ್ ಮತ್ತು 8 ಬೌಂಡರಿ ಸೇರಿದ್ದವು. ರಜಾಸ್ಥಾನದ ಇನ್ನೊಬ್ಬ ಯುವ ಬ್ಯಾಟ್ಸ್ಮನ್ ಸಂಜು ಸ್ಯಾಮ್ಸನ್ (34) ಸಹ ಆಕರ್ಷಕ ಬ್ಯಾಟಿಂಗ್ ಪ್ರದರ್ಶಿಸಿದರು.
ಡೆಲ್ಲಿ ತಂಡದ ಪರ ಶಹಬಾಜ್ ನದೀಂ, ಮೊಹ್ಮದ್ ಶಮಿ ಹಾಗೂ ವೇನೆ ಪಾರ್ನೆಲ್ ತಲಾ 1 ವಿಕೆಟ್ ಪಡೆದರು. ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಡೆಲ್ಲಿ ಡೇರ್ ಡೆವಿಲ್ಸ್, ಆರಂಭಿಕ ಆಟಗಾರ ಡಿ ಕಾಕ್ (43) ಮತ್ತು ಕೆಳ ಕ್ರಮಾಂಕದಲ್ಲಿ ಜೀನ್ ಪಾಲ್ ಡುಮಿನಿ (39) ಹಾಗೂ ಕೇದಾರ್ ಜಾಧವ್ (ಅಜೇಯ 28) ಅವರ ತಕ್ಕ ಬ್ಯಾಟಿಂಗ್ ನೆರವಿನೊಂದಿಗೆ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಿತ್ತು. ರಾಜಸ್ಥಾನದ ಪರ ಆಕರ್ಷಕ ಬೌಲಿಂಗ್ ಮಾಡಿದ ಜೇಮ್ಸ್ ಫಾಕ್ನರ್ ಮತ್ತು ಪ್ರವೀಣ್ ತಾಂಬೆ ತಲಾ 2 ವಿಕೆಟ್ ಕಬಳಿಸಿದರೆ, ಕೇನ್ ರಿಚರ್ಡ್ಸ್ನ್ ಒಂದು ವಿಕೆಟ್ ಪಡೆದರು.
ಸ್ಕೋರ್ ವಿವರ
ಡೆಲ್ಲಿ ಡೇರ್ಡೆವಿಲ್ಸ್ 20 ಓವರ್ಗಳಲ್ಲಿ 5 ವಿಕೆಟ್ಗೆ 152
ಡಿ ಕಾಕ್ ಸಿ ಮತ್ತು ಬಿ ಪ್ರವೀಣ್ ತಾಂಬೆ 43 (33), ಮುರಳಿ ವಿಜಯ್ ಸಿ ವ್ಯಾಟ್ಸನ್ ಬಿ ಫಾಕ್ನರ್ 13 (11), ಕೆವಿನ್ ಪೀಟರ್ಸನ್ ಸಿ ಸ್ಮಿತ್ ಬಿ ತಾಂಬೆ 14 (15), ದಿನೇಶ್ ಕಾರ್ತಿಕ್ ಸಿ ಬಿನ್ನಿ ಬಿ ಫಾಕ್ನರ್ 12 (16), ಜೀನ್ ಪಾಲ್ ಡುಮಿನಿ ಸಿ ಭಾಟಿಯಾ ಬಿ ರಿಚರ್ಡ್ಸ್ನ್ 39 (31), ಕೇದಾರ ಜಾಧವ್ ಅಜೇಯ 27 (13), ವೇಯ್ನ್ ಪಾರ್ನೆಲ್ ಅಜೇಯ 0 (0)
ಇತರೆ (ಎಲ್ಬಿ-2, ವೈಡ್-1) 3
ವಿಕೆಟ್ ತಪನ: 1-33, 2-69, 3-71, 4-95, 5-141.
ಬೌಲಿಂಗ್ ವಿವರ:
ಸ್ಟುವರ್ಟ್ ಬಿನ್ನಿ 1-0-9-0
ಕೇನ್ ರಿಟರ್ಡ್ಸ್ನ್ 4-0-39-1
ಧವಳ್ ಕುಲಕರ್ಣಿ 3-0-18-0
ಶೇನ್ ವ್ಯಾಟ್ಸನ್ 1-0-11-0
ಜೇಮ್ಸ್ ಫಾಕ್ನರ್ 4-0-26-2
ಪ್ರವೀಣ್ ತಾಂಬೆ 4-0-26-2
ರಜತ್ ಭಾಟಿಯಾ 3-0-21-0
ರಾಜಸ್ಥಾನ ರಾಯಲ್ಸ್ 18.3 ಓವರ್ಗಳಲ್ಲಿ 3 ವಿಕೆಟ್ಗೆ 156
ರಹಾನೆ ಸಿ ವಿಜಯ್ ಬಿ ಪಾರ್ನೆಲ್ 12 (10), ಕರುಣ್ ನಾಯರ್ ಅಜೇಯ 73 (50), ಸಂಜು ಸ್ಯಾಮ್ಸನ್ ಸ್ಟಂಪ್ ಕಾರ್ತಿಕ್ ಬಿ ನದೀಂ 34 (28), ರಜತ್ ಭಾಟಿಯಾ ಬಿ ಮೊಹ್ಮದ್ ಶಮಿ 17 (13), ಶೇನ್ ವ್ಯಾಟ್ಸನ್ (ಅಜೇಯ 16) (10)
ಇತರೆ (ಎಲ್ಬಿ-1, ವೈಡ್3) 4
ವಿಕೆಟ್ ಪತನ 1-20, 2-71, 3-115.
ಬೌಲಿಂಗ್ ವಿವರ:
ಶಹಬಾಜ್ ನದೀಂ 4-0-30-1
ಮೊಹ್ಮದ್ ಶಮಿ 4-0-22-1
ವೇನೆ ಪಾರ್ನೆಲ್ 4-0-35-1
ಉನಾದ್ಕತ್ 3.3-0-36-0
ರಾಹುಲ್ ಶರ್ಮಾ 3-0-32-0
ಪಂದ್ಯಶ್ರೇಷ್ಠ
ಕರುಣ್ ನಾಯರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

