ಕ್ರೀಡೆ

ಐಚ್ಚಂಡ, ತೀತಮಾಡಕ್ಕೆ ಜಯ

Published On :

ರಾಜಪೇಟೆ: ಇಲ್ಲಿನ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ತಾತಂಡ ಕೌಟುಂಬಿಕ ಹಾಕಿ ಪಂದ್ಯದಲ್ಲಿ ಶನಿವಾರ ಐಚ್ಚಂಡ, ಬೊವಿರಂಡ ತಂಡಗಳು ಸೇರಿದಂತೆ ಒಟ್ಟು 12 ತಂಡಗಳು ಮುನ್ನಡೆ ಸಾಧಿಸಿವೆ.
ಮೊದಲನೇ ಮೈದಾನ: ದಿನದ ಆರಂಭದಲ್ಲಿ ಐಚ್ಚಂಡ ತಂಡವು ಉತ್ತಮ ಪ್ರದರ್ಶನ ನೀಡಿ, ಅಲ್ಲಾರಂಡ ತಂಡವನ್ನು 4- 0 ಗೋಲುಗಳಿಂದ ಮಣಿಸಿತು. ಐಚ್ಚಂಡದ ತಂಡದ ಪರವಾಗಿ ಗೋಲುಗಳ ವೀರ ನಿರಣ್ 3 ಗೋಲು ದಾಖಲಿಸಿದರೆ, ಮುತ್ತಣ್ಣ 1 ಗೋಲು ದಾಖಲಿದರು.
ತೀತಮಾಡ (ಕುಂದ) ತಂಡವು ಮುಂಡ್ಯೋಳಂಡ ತಂಡವನ್ನು 4- 0 ಗೋಲುಗಳಿಂದ ಸೋಲಿಸಿತು. ತೀತಮಾಡ ತಂಡದ ಪರವಾಗಿ ಸಂಜು, ಕಾಳಪ್ಪ, ವಿನು ಮತ್ತು ಸುಜಿತ್ ತಲಾ 1 ಗೋಲು ಗಳಿಸಿ ತಂಡವನ್ನು ಮುನ್ನಡೆಸಿದರು.  ಕಾಂಡಂಡ ತಂಡವು ಪುಚ್ಚಿಮಾಡ ತಂಡವನ್ನು 6- 0 ಗೋಲುಗಳಿಂದ ಬಗ್ಗು ಬಡಿಯಿತು. ಕಾಂಡಂಡ ತಂಡದ ಮುಂದೆ ಯಾವುದೇ ಪ್ರತಿರೋಧ ತೋರದ ಪುಚ್ಚಿಮಾಡ ತಂಡವು ಸುಲಭವಾಗಿ ಸೋಲೊಪ್ಪಿಕೊಂಡಿತು. ಕಾಂಡಂಡ ತಂಡದ ಪರವಾಗಿ ವೀರಪ್ಪ ಮತ್ತು ಚಂಗಪ್ಪ ತಲಾ 1 ಗೋಲು, ಮಾದಯ್ಯ 4 ಗೋಲು ದಾಖಲಿಸಿ ತಂಡಕ್ಕೆ ಜಯ ತಂದುಕೊಟ್ಟರು. ಒಡಿಯಂಡ ತಂಡವು ಮಲ್ಲಮಾಡ ತಂಡವನ್ನು 4- 3 ಅಂತರದಿಂದ ಮಣಿಸಿತು. ಮಲ್ಲಮಾಡ ಮತ್ತು ಒಡಿಯಂಡ ತಂಡವು ಮೈದಾನದಲ್ಲಿ ಉತ್ತಮ ಪ್ರದರ್ಶನ ತೋರಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು. ಒಡಿಯಂಡ ತಂಡದ ಪರವಾಗಿ ಕಾರ್ಯಪ್ಪ, ಪೊನ್ನಣ್ಣ, ಬಿದ್ದಪ್ಪ ಹಾಗೂ ಉತ್ತಪ್ಪ ತಲಾ 1 ಗೋಲು ದಾಖಲಿಸಿದರು. ಮಲ್ಲಮಾಡ ತಂಡದ ಪರವಾಗಿ ಗುಲ್ಶನ್ 1 ಗೋಲು ದಾಖಲಿಸಿದರೆ, ತಿಮ್ಮಯ್ಯ 2 ಗೋಲು ದಾಖಲಿಸಿದರು.
ನೆಲ್ಲಮಕ್ಕಡ ತಂಡವು ಮಾತಂಡ ತಂಡವನ್ನು 4- 0 ಗೋಲುಗಳಿಂದ ಸೋಲಿಸಿತು. ನೆಲ್ಲಮಕ್ಕಡ ತಂಡದ ಪರವಾಗಿ ಸಾಜಿ, ಸೋಮಯ್ಯ ತಲಾ 1 ಗೋಲು ದಾಖಲಿಸಿದರೆ, ಅಯ್ಯಪ್ಪ 2 ಗೋಲು ದಾಖಲಿಸಿ ತಂಡದ ವಿಜಯಕ್ಕೆ ಕಾರಣರಾದರು.
ಮಚ್ಚರಂಡ ತಂಡವು ಮಾಂಡೇಡ ತಂಡವನ್ನು 1- 0 ಗೋಲುಗಳಿಂದ ಮಣಿಸಿತು. ಮಚ್ಚರಂಡ ಪ್ರಧಾನ್ 1 ಗೋಲು ದಾಖಲಿಸಿದರು.
2ನೇ ಮೈದಾನ: ಆರಂಭದ ಸೆಣಸಾಟ ಪ್ರಾರಂಭಿಸಿದ ಅಜೆಂಗಡ ತಂಡವು ಬೊವಿರಂಡ ತಂಡದ ಮುಂದೆ ಉತ್ತಮ ಪ್ರದರ್ಶನ ತೋರಿದರೂ ಕೊನೆಯಲ್ಲಿ 2- 3 ಅಂತರದಿಂದ ಶರಣಾಯಿತು. ಅಜೆಂಗಡ ತಂಡದ ಪರವಾಗಿ ನಿಶಾನ್, ಪ್ರಶಾಂತ್ ತಲಾ 1 ಗೋಲು ದಾಖಲಿಸಿದರು. ಬೊವಿರಂಡ ತಂಡದ ಪರವಾಗಿ ಅಪ್ಪಯ್ಯ, ಸಚಿನ್, ಮೇದಪ್ಪ ತಲಾ 1 ಗೋಲು ದಾಖಲಿಸಿ ತಂಡದ ವಿಜಯಕ್ಕೆ ಕಾರಣರಾದರು.
2ನೇ ಪಂದ್ಯದಲ್ಲಿ ಇಟ್ಟೀರ ತಂಡವು ಕುಟ್ಟಂಡ ತಂಡವನ್ನು ಭರ್ಜರಿ 5- 0 ಗೋಲುಗಳಿಂದ ಮಣಿಸಿತು. ಇಟ್ಟೀರ ತಂಡದ ಪರವಾಗಿ ಚಿತಿಯಪ್ಪ ಹಾಗೂ ರಕ್ಷಿತ್ ತಲಾ 2 ಗೋಲು ದಾಖಲಿಸಿದರೆ, ರೋಷನ್ 1 ಗೋಲು ದಾಖಲಿಸಿದರು.
3ನೇ ಪಂದ್ಯದಲ್ಲಿ ಚೇಂದಿರ ತಂಡವು ವಾಟೇರಿರ ತಂಡವನ್ನು 2- 1 ಗೋಲುಗಳಿಂದ ಮಣಿಸಿತು. ಚೇಂದಿರ ತಂಡದ ಪರವಾಗಿ ಉತ್ತಪ್ಪ ಮತ್ತು ಅಪ್ಪಣ್ಣ ತಲಾ 1 ಗೋಲು ದಾಖಲಿಸಿದರು. ವಾಟೇರಿರ ತಂಡದ ಪರವಾಗಿ ಪೂವಣ್ಣ 1 ಗೋಲು ದಾಖಲಿಸಿದರು.
4ನೇ ಪಂದ್ಯದಲ್ಲಿ ಗೋದೆಂಗಡ ತಂಡವು ದೇಪಾಡಿಯಂಡ ತಂಡದ ಮುಂದೆ 0- 1 ಗೋಲುಗಳಿಂದ ಶರಣಾಯಿತು. ದೇಪಾಡಿಯಂಡ ತಂಡದ ಪರ ಪೊನ್ನಣ್ಣ 1 ಗೋಲು ದಾಖಲಿಸಿ ತಂಡವನ್ನು ಮುನ್ನಡೆಸಿದರು.
5ನೇ ಪಂದ್ಯದಲ್ಲಿ ಬಾರಿಯಂಡ ತಂಡವು ಬಾದುವಂಡ ತಂಡವನ್ನು 5- 1 ಗೋಲುಗಳಿಂದ ಮಣಿಸಿತು. ಬಾರಿಯಂಡ ತಂಡದ ಪರವಾಗಿ ಮಧುರ್ 1 ಗೋಲು, ರಿಗನ್ ಮತ್ತು ಭರತ್ ತಲಾ 2 ಗೋಲು ದಾಖಲಿಸಿದರು. ಬಾದುವಂಡ ಪರವಾಗಿ ಅಪ್ಪಚ್ಚು ಏಕೈಕ 1 ಗೋಲು ದಾಖಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.