ಸಾನಿಯಾ- ಕಾರಾ ಮುಡಿಗೇರಿದ ಗರಿ
ಓಯೆರಾಸ್ (ಪೋರ್ಚುಗಲ್): ಭಾರತದ ಸಾನಿಯಾ ಮಿರ್ಜಾ ಮತ್ತು ಜಿಂಬಾಬ್ವೆಯ ಕಾರಾ ಬ್ಲ್ಯಾಕ್ ಡಬ್ಲ್ಯುಟಿಎ ಪೋರ್ಚುಗಲ್ ಓಪನ್ ಟೆನಿಸ್ ಚಾಂಪಿಯನ್ಶಿಪ್ನ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ಆ ಮೂಲಕ ಈ ಋುತುವಿನ ಮೊದಲ ಪ್ರಶಸ್ತಿ ಜಯಿಸಿದ ಸಾಧನೆ ಮಾಡಿದ್ದಾರೆ. ಇದಕ್ಕೂ ಮುನ್ನ ಅವರು ಇದೇ ಋತುವಿನಲ್ಲಿ ಮಾರ್ಚ್ ತಿಂಗಳು ನಡೆದ ಇಂಡಿಯಾನ ವೆಲ್ಸ್ ಹಾಗೂ ಕಳೆದ ವಾರ ಮುಕ್ತಾಯಗೊಂಡ ಸ್ಟಟ್ಗರ್ಟ್ ಟೂರ್ನಿಯಲ್ಲಿ ರನ್ನರ್ಸ್ ಅಪ್ ಪ್ರಶಸ್ತಿಗೆ ಸಮಾಧಾನಗೊಂಡಿದ್ದರು.
ಶನಿವಾರ ಇಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಸಾನಿಯಾ ಮತ್ತು ಕಾರಾ 6-4, 6-3 ನೇರ ಸೆಟ್ಗಳಿಂದ ಜೆಕ್ ಗಣರಾಜ್ಯದ ಇವಾ ಹೃಡಿನೋವಾ ಮತ್ತು ರಷ್ಯಾದ ವಲೆರಿಯಾ ಸೊಲೊಯೆವಾ ಅವರನ್ನು ಪರಾಭವಗೊಳಿಸಿ ಪ್ರಶಸ್ತಿಯ ಮೇಲೆ ಮೊಹರು ಒತ್ತಿದರು. ಅಗ್ರಶ್ರೇಯಾಂಕಿತ ಜೋಡಿಯಾಗಿದ್ದ ಸಾನಿಯಾ ಮತ್ತು ಕಾರಾ ಅತ್ಯುತ್ತಮ ಹೊಂದಾಣಿಕೆ ಆಟ ಪ್ರದರ್ಶಿಸುವ ಮೂಲಕ ಒಂದು ಗಂಟೆ 18 ನಿಮಿಷಗಳ ಆಟದಲ್ಲಿ ಅಂತಿಮ ಜಯಘೋಷ ಮೊಳಗಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದರು.
ಈ ಗೆಲವಿನೊಂದಿಗೆ ಭಾರತ-ಜಿಂಬಾಬ್ವೆ ಜೋಡಿಯು 9,919 ಯೂರೊ ನಗದು ಬಹುಮಾನದ ಜೊತೆಗೆ ತಲಾ 280 ರ್ಯಾಂಕಿಂಗ್ ಅಂಕಗಳನ್ನು ತಮ್ಮದಾಗಿಸಿಕೊಂಡರು.
ಜೆಕ್-ರಷ್ಯಾ ಆಟಗಾರ್ತಿಯರ ವಿರುದ್ಧದ ಸೆಣಸಿನಲ್ಲಿ ಸಾನಿಯಾ ಮತ್ತು ಕಾರಾ ಆರಂಭದಿಂದಲೇ ಉತ್ತಮ ಹೋರಾಟ ಸಂಘಟಿಸಿದರು. ಸಾನಿಯಾ ಎಂದಿನ ತಮ್ಮ ಆಕ್ರಮಣಕಾರಿ ಆಟಕ್ಕೆ ಮುಂದಾದರೆ, ಮತ್ತೊಂದೆಡೆಯಿಂದ ಜಿಂಬಾಬ್ವೆ ಆಟಗಾರ್ತಿ ಕೂಡ ಸೂಕ್ತ ಬೆಂಬಲ ನೀಡಿದರು. ಪ್ರಮುಖವಾಗಿ ಪಂದ್ಯದಲ್ಲಿ ಈ ಇಬ್ಬರ ತಾಳಮೇಳದಿಂದಾಗಿ ಎದುರಾಳಿ ಜೋಡಿಗೆ ಮೈಕೊಡವಿ ಮೇಲೇಳಲು ಅವಕಾಶ ದೊರೆತರು, ಸದ್ಭಳಕೆ ಮಾಡಿಕೊಳ್ಳಲಾಗದೆ ಅಂತಿಮವಾಗಿ ಕಹಿ ಉಣ್ಣಬೇಕಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

