ಕ್ರೀಡೆ

ಮೇತಿಯಂಡ, ಚೆರಿಯಂಡ ಮುನ್ನಡೆ

Published On :

ಕ.ಪ್ರ.ವಾರ್ತೆ , ವಿರಾಜಪೇಟೆ , ಮೇ 4
ಇಲ್ಲಿನ ಜ್ಯೂನಿಯರ್ ಕಾಲೇಜ್ ಮೈದಾನದಲ್ಲಿ ನಡೆಯುತ್ತಿರುವ ಕೊಡವ ಕೌಟುಂಬಿಕ ಹಾಕಿ ಉತ್ಸವದ 14ನೇ ದಿನ ಭಾನುವಾರ ಒಟ್ಟು 12 ತಂಡಗಳು ಉತ್ತಮ ಪ್ರದರ್ಶನ ನೀಡಿ ಮುನ್ನಡೆ ಸಾಧಿಸಿದವು.
ಮೈದಾನ 1: ಮೈದಾನ 1ರಲ್ಲಿ ನಡೆದ ಮೊದಲನೇ ಪಂದ್ಯದಲ್ಲಿ ಮೇತಿಯಂಡ ತಂಡವು ಅವರೇಮಾದಂಡ ತಂಡವನ್ನು ಟೈಬ್ರೇಕರ್‌ನಲ್ಲಿ 5-3 ಗೋಲುಗಳಿಂದ ಮಣಿಸಿತು. ಎರಡೂ ತಂಡಗಳೂ ಮೈದಾನದಲ್ಲಿ ಉತ್ತಮವಾಗಿ ಆಟವಾಡಿ 1-1 ಸಮಬಲ ಸಾಧಿಸಿದರು.
ಮೇತಿಯಂಡ ತಂಡದ ಪರವಾಗಿ ಚೆಂಗಪ್ಪ 1 ಗೋಲು ದಾಖಲಿಸಿದರೆ, ಅವರೆಮಾದಂಡ ತಂಡದ ಪರ ಬೋಪಯ್ಯ 1 ಗೋಲು ದಾಖಲಿಸಿದರು.
ಪೆಮ್ಮಾರ ಗೆಲವು: ಎರಡನೇ ಪಂದ್ಯದಲ್ಲಿ ಐನಂಡ ತಂಡವು ಪೆಮ್ಮಾರ ತಂಡದ ಮುಂದೆ ಶರಣಾಯಿತು. ಪೆಮ್ಮಾರ ತಂಡದ ಪರವಾಗಿ ಸೋಮಣ್ಣ 1 ಗೋಲು ದಾಖಲಿಸಿ ತಂಡಕ್ಕೆ ಜಯ ತಂದೊದಗಿಸಿದರು.
ಮೂರನೇ ಪಂದ್ಯದಲ್ಲಿ ಹೊಟ್ಟೆಂಗಡ ಮುಕ್ಕಾಟಿರ ತಂಡವು (ಬೇತ್ರಿ) ಕೊಟ್ಟಂಗಡ ತಂಡವನ್ನು 2-1 ಗೋಲುಗಳಿಂದ ಮಣಿಸಿತು. ಮುಕ್ಕಾಟಿರ ತಂಡದ ಪರವಾಗಿ ಪೆಮ್ಮಯ್ಯ 2 ಗೋಲು ದಾಖಲಿಸಿ ತಂಡಕ್ಕೆ ಜಯ ತಂದೊದಗಿಸಿದರು. ಹಾಗೂ ಕೊಟ್ಟಂಗಡ ತಂಡದ ಪರವಾಗಿ ಸೋಮಣ್ಣ 1 ಗೋಲು ದಾಖಲಿಸಿದರು.
ಏಕಮುಖ ಗೆಲವು: ನಾಲ್ಕನೇ ಪಂದ್ಯದಲ್ಲಿ ಕುಂಡ್ಯೋಳಂಡ ತಂಡವು ಉದ್ದಪಂಡ ತಂಡವನ್ನು 3-0 ಗೋಲುಗಳಿಂದ ಮಣಿಸಿ ಭರ್ಜರಿ ಜಯ ಗಳಿಸಿತು. ಕುಂಡ್ಯೋಳಂಡ ತಂಡದ ಪರವಾಗಿ ಬಿಪಿನ್ ಬೆಳ್ಯಪ್ಪ, ಸೋಮಯ್ಯ ಹಾಗೂ ಗಗನ್ ತಲಾ 1 ಗೋಲು ದಾಖಲಿಸಿ ತಂಡಕ್ಕೆ ಜಯ ತಂದುಕೊಟ್ಟರು. ಐದನೇ ಪಂದ್ಯದಲ್ಲಿ ತಂಬುಕುತ್ತಿರ ತಂಡವು ಕೇಳೇಟಿರ ತಂಡವನ್ನು ಟೈಬ್ರೇಕರ್‌ನಲ್ಲಿ 4-3 ಗೋಲುಗಳಿಂದ ಮಣಿಸಿತು. ಎರಡೂ ತಂಡಗಳು ಮೈದಾನದಲ್ಲಿ ಸಮ ಸಮ ಗೋಲು ದಾಖಲಿಸಿದವು.
ಕೊನೆಯ ಪಂದ್ಯದಲ್ಲಿ ಮೂಕಳೇರ ತಂಡವು ಅಪ್ಪನೆರವಂಡ ತಂಡವನ್ನು 4-1 ಗೋಲುಗಳಿಂದ ಟೈಬ್ರೇಕರ್‌ನಲ್ಲಿ ಮಣಿಸಿತು. ಎರಡು ತಂಡಗಳು ತಲಾ ಒಂದೊಂದು ಗೋಲು ದಾಖಲಿಸಿದವು.
ಮೈದಾನ 2: ಎರಡನೇ ಮೈದಾನದಲ್ಲಿ ಚೆರಿಯಂಡ ತಂಡವು ಪಾಡಂಡ ತಂಡವನ್ನು 1-0 ಗೋಲುಗಳಿಂದ ಬಗ್ಗು ಬಡಿಯಿತು. ಚೆರಿಯಂಡ ರೋಷನ್ 1 ಗೋಲು ದಾಖಲಿಸಿ, ತಂಡಕ್ಕೆ ಜಯ ತಂದೊದಗಿಸಿದರು.
ತೀವ್ರ ಹಣಾಹಣಿ: 2ನೇ ಪಂದ್ಯದಲ್ಲಿ ಕೋಡಿಮಣಿಯಂಡ ತಂಡವು ಟೈಬ್ರೇಕರ್‌ನಲ್ಲಿ ಬೋಳ್ಳೆಪಂಡ ತಂಡವನ್ನು 7-6 ಗೋಲುಗಳಿಂದ ಮಣಿಸಿತು.  ಮೂರನೇ ಪಂದ್ಯದಲ್ಲಿ ಅಪ್ಪಚ್ಚಿರ ತಂಡವು ಅಣ್ಣಾಡಿಯಂಡ ತಂಡವನ್ನು 3-1 ಗೋಲುಗಳಿಂದ ಮಣಿಸಿತು. ಅಣ್ಣಾಡಿಯಂಡ ತಂಡವು ಅಪ್ಪಚ್ಚೀರ ತಂಡದ ಎದುರು ಉತ್ತಮ ಪ್ರದರ್ಶನ ತೋರಿದರೂ ಕೊನೆಯಲ್ಲಿ ಅಪ್ಪಚ್ಚಿರ ತಂಡವು 3-1 ಗೋಲುಗಳಿಂದ ಅಣ್ಣಾಡಿಯಂಡ ತಂಡವನ್ನು ಮಣಿಸಿತು. ಅಪ್ಪಚ್ಚೀರ ತಂಡದ ಪರವಾಗಿ ಜೆಸಿನ್ ಬೋಪಣ್ಣ ಹಾಗೂ ದರ್ಶನ್ ಹಾಗೂ ಆಶಿತ್ ತಲಾ 1 ಗೋಲು ದಾಖಲಿಸಿ ತಂಡಕ್ಕೆ ಜಯ ತಂದು ಕೊಡುವಲ್ಲಿ ಸಫಲರಾದರು. ಅಣ್ಣಾರಿಯಂಡ ತಂಡದ ಪರವಾಗಿ ಬಿಪಿನ್ ಚರ್ಮಣ್ಣ ಏಕೈಕ ಗೋಲು ದಾಖಲಿಸಿದರು.
4ನೇ ಪಂದ್ಯದಲ್ಲಿ ಕಂಬೀರಂಡ ತಂಡವು ಕುಪ್ಪಣಮಾಡ ತಂಡವನ್ನು ಮೈದಾನದಲ್ಲಿ ಭರ್ಜರಿಯಾಗಿ 5-0 ಗೋಲುಗಳಿಂದ ಮಣಿಸಿತು. ಕಂಬೀರಂಡ ತಂಡದ ಪರವಾಗಿ ಮಿಂಚಿನ ಆಟಗಾರರಾದ ಯೋಗೇಶ್ ಹಾಗೂ ರಾಯ್ ತಲಾ ಎರಡು ಗೋಲು ದಾಖಲಿಸಿದರು. ಸತೀಶ್ ಒಂದು ಗೋಲು ದಾಖಲಿಸಿದರು.
5ನೇ ಪಂದ್ಯದಲ್ಲಿ ಕಾಯಪಂಡ ತಂಡವು ಚರ್ಮಣಂಡ ತಂಡವನ್ನು 1-0 ಗೋಲುಗಳಿಂದ ಮಣಿಸಿತು. ಕಾಯಪಂಡ ತಂಡದ ಪರವಾಗಿ ದೇವಯ್ಯ ದಾಖಲಿಸಿದ ಏಕೈಕ ಗೋಲು ಕಾಯಪಂಡ ತಂಡ ಮುಂದಿನ ಹಂತಕ್ಕೆ ತೇರ್ಗಡೆಯಾಗಲು ಸಹಕಾರಿಯಾಯಿತು.
ಕೊನೆಯ ಪಂದ್ಯದಲ್ಲಿ ಮುರುವಂಡ ತಂಡವು ಚೊಟ್ಟೇರ ತಂಡವನ್ನು 6-1 ಗೋಲುಗಳಿಂದ ಮಣಿಸಿತು. ದಿನದ ಕೊನೆಯ ಪಂದ್ಯದಲ್ಲಿ ಮುರುವಂಡ ತಂಡವು ಉತ್ತಮ ಪ್ರದರ್ಶನ ನೀಡಿ ಜನರಿಗೆ ಮನರಂಜನೆಯ ರಸದೌತಣ ನೀಡಿತು. ಮುರುವಂಡ ತಂಡದ ಪರವಾಗಿ ಅಣ್ಣಯ್ಯ ಗೋಲುಗಳ ಮೇಲೆ ಗೋಲಿನಂತೆ 3 ಗೋಲು ದಾಖಲಿಸಿದರೆ, ಅಪ್ಪಣ್ಣ ಎರಡು ಗೋಲು ದಾಖಲಿಸಿದರು. ಕಾರ್ಯಪ್ಪ ಏಕೈಕ ಗೋಲು ದಾಖಲಿಸಿ ಭರ್ಜರಿ ಜಯ ತಂದುಕೊಡುವಲ್ಲಿ ಕಾರಣರಾದರು. ಚಟ್ಟೇರ ತಂಡದ ಪರವಾಗಿ ಕವನ್ ದಾಖಲಿಸಿದ ಏಕೈಕ ಗೋಲು ಚಟ್ಟೇರ ತಂಡವು ಖಾತೆ ತೆರೆಯುವಲ್ಲಿ ಸಹಕಾರಿಯಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.