ಸೋಲುಂಡ ಬಲಿಷ್ಠ ಅಲೆಮಂಗಡ
ವಿರಾಜಪೇಟೆ: ತಾತಂಡ ಕಪ್ ಹಾಕಿ ಪಂದ್ಯದಲ್ಲಿ ಮಂಗಳವಾರ ವಿರಾಜಪೇಟೆ ಮುಂಡೇಟಿರ ತಂಡ ಬಲಿಷ್ಠ ಅಲೆಮಂಗಡ ತಂಡವನ್ನು ಸೋಲಿಸಿ ಮುಂದಿನ ಹಂತಕ್ಕೆ ಪ್ರವೇಶ ಪಡೆಯಿತು.
ಇಲ್ಲಿನ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ತಾತಂಡ ಕೊಡವ ಕಪ್ ಕೌಟುಂಬಿಕ ಹಾಕಿ ಉತ್ಸವದ 16ನೇ ದಿನವಾದ ಮಂಗಳವಾರ ಮುಂಡೇಟಿರ, ಪರಂದಂಡ, ಸೋಮೆಯಂಡ ತಂಡಗಳು ಸೇರಿ ಒಟ್ಟು 9 ತಂಡಗಳು ಮುಂದಿನ ಸುತ್ತಿಗೆ ಅರ್ಹತೆ ಪಡೆದುಕೊಂಡವು.
ಮೈದಾನ- 1: 16ನೇ ದಿನದ ಆರಂಭದಲ್ಲಿ ಮೈದಾನಕ್ಕಿಳಿದ ವಿರಾಜಪೇಟೆ ಮುಂಡೇಟಿರ ತಂಡ ಬಲಿಷ್ಠ ಅಲೆಮಂಗಡ ತಂಡವನ್ನು 1-0 ಗೋಲುಗಳಿಂದ ಮಣಿಸಿತು. 2ನೇ ಪಂದ್ಯದಲ್ಲಿ ಸೋಮೆಯಂಡ ತಂಡ ಮಾಚಂಗಡ ತಂಡವನ್ನು 2- 1 ಅಂತರದಿಂದ ಸೋಲಿಸಿತು.
3ನೇ ಪಂದ್ಯದಲ್ಲಿ ಬಿದ್ದಂಡ ತಂಡವು ಕುಂಚೇಟಿರ ತಂಡವನ್ನು ಭರ್ಜರಿ 4- 0 ಅಂತರದಿಂದ ಮಣಿಸಿದ್ದು, 4ನೇ ಪಂದ್ಯದಲ್ಲಿ ಇಟ್ಟೀರ ತಂಡ ಬೋವಿರಿಯಂಡ ತಂಡವನ್ನು ಟೈ ಬ್ರೇಕರ್ನಲ್ಲಿ 5- 4 ಗೋಲುಗಳಿಂದ ಮಣಿಸಿತು. ಎರಡು ತಂಡಗಳು ಉತ್ತಮ ಆಟ ಪ್ರದರ್ಶಿಸಿ, ಮೈದಾನದಲ್ಲಿ ಸಮಾನಂತರ 1- 1 ಗೋಲು ದಾಖಲಿಸಿತು. ಮೈದಾನ- 2: ಇಲ್ಲಿ ಪಂದ್ಯ ಆರಂಭಿಸಿದ ಪರಂದಂಡ ಮತ್ತು ಮಾಚಮಾಡ ತಂಡಗಳು ಉತ್ತಮ ಆಟ ಪ್ರದರ್ಶಿಸಿ9ದವು. ಪ್ರಾರಂಭದಲ್ಲಿ ಎರಡೂ ತಂಡಗಳು 2- 2 ಗೋಲುಗಳಿಂದ ಸಮಬಲ ಸಾಧಿಸಿದ್ದವು. ಕೊನೆಯದಾಗಿ ಪರಂದಂಡ ತಂಡವು ಟೈ ಬ್ರೇಕರ್ನಲ್ಲಿ 5- 4ರ ಅಂತರದಿಂದ ಜಯಗಳಿಸಿ, ಮುನ್ನಡೆಯಿತು. 2ನೇ ಪಂದ್ಯದಲ್ಲಿ ಕುಪ್ಪಂಡ (ಕುಂದ) ತಂಡ ಸಾಂಘಿಕ ಹೋರಾಟದ ಮೂಲಕ ಕಾಂಡಂಡ ತಂಡವನ್ನು 1-0 ಗೋಲಿನಿಂದ ಮಣಿಸಿತು. 3ನೇ ಪಂದ್ಯದಲ್ಲಿ ಮುಕ್ಕಾಟೀರ (ಬೋಂದ) ತಂಡ ಮೂಡೇರ ತಂಡದ ಮುಂದೆ ಜಯಗಳಿಸಲು ಅವಕಾಶವಿದ್ದರೂ 0- 1ರ ಅಂತರದಿಂದ ಶರಣಾಯಿತು.
4ನೇ ಪಂದ್ಯದಲ್ಲಿ ಐಚ್ಚಂಡ ಮತ್ತು ಚಂದುರ ತಂಡಗಳು ಮೈದಾನದಲ್ಲಿ ಯಾವುದೇ ಗೋಲು ದಾಖಲಿಸದ ಕಾರಣ ಟೈಬ್ರೇಕರ್ನಲ್ಲಿ ಐಚ್ಚಂಡ ತಂಡವು 5- 2ರ ಅಂತರದಿಂದ ಜಯಗಳಿಸಿ ಮುನ್ನಡೆಯಿತು. ಐಚ್ಚಂಡ ತಂಡದ ಪರವಾಗಿ ರತನ್, ನಿರಣ್, ಜೀವನ್, ಸುಬ್ಬಯ್ಯ ಮತ್ತು ಲಿಕಿನ್ ತಲಾ 1 ಗೋಲು ದಾಖಲಿಸಿದರು. ಚಂದುರ ತಂಡದ ಪರವಾಗಿ ಸನ್ನು ಮತ್ತು ಸುರೇಶ್ ತಲಾ 1 ಗೋಲುಗಳಿಸಿದರು.
ಕೊನೆಯದಾಗಿ ಆಟವಾಡಿದ ಚೌರಿರ ತಂಡ ಕೋಟೇರ ತಂಡದ ವಿರುದ್ಧ ಉತ್ತಮ ಪ್ರದರ್ಶನ ನೀಡಿ 1- 0 ಗೋಲುಗಳಿಂದ ಜಯಗಳಿಸಿತು. ಚೌರಿರ ಧನುಷ್ ವಿಜಯದ ಗೋಲು ದಾಖಲಿಸಿದರು.
ಕಾರಣಾಂತರಗಳಿಂದ ಮಂಗಳವಾರ ನಡೆಯಬೇಕಿದ್ದ ಚೇಂದಿರ ಮತ್ತು ಬೇಪಾಡಿಯಂಡ ತಂಡದ ನಡುವೆ ನಡೆಯಬೇಕಿದ್ದ ಪಂದ್ಯವನ್ನು ಬುಧವಾರಕ್ಕೆ ಮುಂದೂಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

