ವಿಶ್ವ ಕರಾಟೆ: ನಯನಾಗೆ ಚಿನ್ನ
ಬ್ಯಾಡಗಿ: ಬಲಿಷ್ಠ ಹೋರಾಟ ನಡೆಸಿದ ನಯನಾ ಹೊಸಮನೆ ಅವರು ಮಲೇಷ್ಯಾದಲ್ಲಿ ನಡೆದ 11ನೇ ವಿಶ್ವ ಕರಾಟೆ ಚಾಂಪಿಯನ್ಶಿಪ್ನ ಬಾಲಕಿಯರ ವಿಭಾಗದಲ್ಲಿ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿದ್ದಾರೆ.
ಉದಯೋನ್ಮುಖ ಕರಾಟೆ ಪಟು ನಯನಾ ಬುಧವಾರ ತವರಿಗೆ ಮರಳಿದಾಗ ಅವರನ್ನು ಅದ್ಧೂರಿಯಿಂದ ಸ್ವಾಗತಿಸಲಾಯಿತು. ಒಟ್ಟು 7 ಸುತ್ತಿನ ಅಂತಿಮ ಪಂದ್ಯದಲ್ಲಿ ಕೊರಿಯಾದ ಎದುರಾಳಿಯನ್ನು ಮಣಿಸಿದ ನಯನಾ 3 ಅಂಕಗಳ ಅಂತರದಿಂದ ಜಯ ಸಾಧಿಸಿದಳು. ಇದಕ್ಕೂ ಮುನ್ನ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಅತಿಥೇಯ ಮಲೇಷ್ಯಾದ ಬಾಲಕಿ ವಿರುದ್ಧ 5 ಅಂಕಗಳಿಂದ ಸುಲಭ ಗೆಲುವು ದಾಖಲಿಸಿದ್ದರು.
ನಾರಾಯಣಗೆ ಬೆಳ್ಳಿ: ಬ್ಯಾಡಗಿಯ ಇನ್ನೋರ್ವ ಕರಾಟೆ ಪಟು ನಾರಾಯಣ ಪೂಜಾರ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ. ಫೈನಲ್ ಪಂದ್ಯದಲ್ಲಿ ನಾರಾಯಣ ಮಾಡಿದ ಸಣ್ಣ ತಪ್ಪಿನಿಂದ ಭಾರತದವರೇ ಆದ ಅಣ್ಣಪ್ಪ ಮಾರ್ಕಳ ವಿರುದ್ಧ 5 ಅಂಕಗಳಿಂದ ಪರಾಜಯಗೊಂಡರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

