ಮ್ಯಾಡ್ರಿಡ್ ಓಪನ್: ಕ್ವಾರ್ಟರ್ಫೈನಲ್ನಲ್ಲಿ ನಡಾಲ್-ಬೆರ್ಡಿಚ್ ಮುಖಾಮುಖಿ
ಮ್ಯಾಡ್ರಿಡ್ (ಸ್ಪೇನ್): ಅಗ್ರಕ್ರಮಾಂಕದ ಆಟಗಾರ, ತವರಿನ ಫೇವರಿಟ್ ರಾಫೆಲ್ ನಡಾಲ್ ಮತ್ತು ಜೆಕ್ ಗಣರಾಜ್ಯದ ಟೊಮಾಸ್ ಬೆರ್ಡಿಚ್ ಅವರು ಮ್ಯಾಡ್ರಿಡ್ ಓಪನ್ ಟೆನಿಸ್ ಟೂರ್ನಿಯ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಪರಸ್ಪರ ಮುಖಾಮುಖಿಯಾಗಲಿದ್ದಾರೆ.
ಪುರುಷರ ಸಿಂಗಲ್ಸ್ ಪ್ರಿಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಸ್ಪೇನಿನ ರಾಫೆಲ್ ನಡಾಲ್, ಫಿನ್ಲ್ಯಾಂಡ್ನ ಜಾಕ್ಕೊ ನೀಮಿನೆನ್ ಅವರನ್ನು 6-1, 6-4 ನೇರ ಸೆಟ್ಗಳಿಂದ ಪರಾಭವಗೊಳಿಸಿದರು.
ಇನ್ನು ಆರನೇ ಶ್ರೇಯಾಂಕಿತ ಆಟಗಾರ ಜೆಕ್ ಗಣರಾಜ್ಯದ ಟೊಮಾಸ್ ಬೆರ್ಡಿಚ್ ತಮ್ಮ 16ರ ಘಟ್ಟದ ಪಂದ್ಯದಲ್ಲಿ ಬಲ್ಗೇರಿಯಾದ 12ನೇ ಶ್ರೇಯಾಂಕಿತ ಗ್ರಿಗೊರ್ ಡಿಮಿಟ್ರೊವ್ ಅವರನ್ನು ಪರಾಭವಗೊಳಿಸಿದರು.
ಪ್ರಮುಖ ಆಟಗಾರರಾದ ಸ್ವಿಜರ್ಲ್ಯಾಂಡ್ನ ರೋಜರ್ ಫಡರರ್ ಮತ್ತು ಸರ್ಬಿಯಾದ ನೊವಾಕ್ ಜೊಕೊವಿಚ್ ಸ್ಪರ್ಧೆಯಿಂದ ಹೊರಗುಳಿದಿದ್ದು ಹಾಗೂ ಆರಂಭದಲ್ಲೇ ಮೂರನೇ ಕ್ರಮಾಂಕದ ಆಟಗಾರ ಸ್ಟಾನಿಸ್ಲಾಸ್ ವಾವ್ರಿಂಕಾ ನಿರ್ಗಮಿಸಿದ್ದರಿಂದ ನಡಾಲ್ಗೆ ಪ್ರಶಸ್ತಿ ಗೆದ್ದುಕೊಳ್ಳುವ ಹಾದಿ ಸುಗಮವಾಗಿದೆ. ಈ ಮಧ್ಯೆ ಗುರುವಾರ ನಡೆದ ಪಂದ್ಯಗಳಲ್ಲಿ ಏಳನೇ ಶ್ರೇಯಾಂಕಿತ ಬ್ರಿಟನ್ನಿನ ಆ್ಯಂಡಿ ಮರ್ರೆ ಮತ್ತು ಎಂಟನೇ ಶ್ರೇಯಾಂಕಿತ ಮಿಲೋಸ್ ರಾನಿಕ್ ಸೋಲನುಭವಿಸಿ ಪ್ರಶಸ್ತಿ ಸುತ್ತಿನ ಆಸೆ ಕೈಬಿಟ್ಟರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

