ಕ್ರೀಡೆ

ದೆಹಲಿಗೆ ಸತತ ಮೂರನೇ ಜಯ

Published On :

ವಡೋದರಾ: ದೆಹಲಿ ತಂಡದ ಆಟಗಾರರು ರಾಷ್ಟ್ರೀಯ ಸಬ್ ಜೂನಿಯರ್ ಪುರುಷರ ಹಾಕಿ ಚಾಂಪಿಯನ್ಶಿಪ್ನಲ್ಲಿ ಸತತ ಮೂರನೇ ಗೆಲವು ದಾಖಲಿಸಿದ್ದಾರೆ.
ವಡೋದರಾದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ದೆಹಲಿ ತಂಡ 2-1 ಗೋಲುಗಳಿಂದ ಹಿಮಾಚಲಪ್ರದೇಶ ತಂಡವನ್ನು ಪರಾಭವಗೊಳಿಸಿತು.  'ಬಿ' ಗುಂಪಿನಲ್ಲಿ ನಡೆದ ಈ ಪಂದ್ಯದಲ್ಲಿ ದೆಹಲಿ ಆಟಗಾರರು ಉತ್ತಮ ಹೊಂದಾಣಿಕೆ ಆಟ ಪ್ರದರ್ಶಿಸಿದರು. ವಿಜೇತ ದೆಹಲಿ ತಂಡದ ಪರ ನಿತಿನ್ ರಾಮ್ 14ನೇ ನಿಮಿಷ ಮತ್ತು ಮೋಹಿತ್ ಆನಂದ್ 41ನೇ ನಿಮಿಷದಲ್ಲಿ ಗೋಲು ಬಾರಿಸಿ ಆಟದಲ್ಲಿ ಮಿಂಚಿದರು. ಹಿಮಾಚಲಪ್ರದೇಶ ಪರ ಪ್ರಕಾಶ್ ಚಾಂದ್ ಮಾತ್ರ 44ನೇ ನಿಮಿಷದಲ್ಲಿ ಏಕೈಕ ಗೋಲು ಗಳಿಸಿದರು.
'ಎ' ಗುಂಪಿನ ಪಂದ್ಯದಲ್ಲಿ ಬಿಹಾರ ತಂಡದ ಆಟಗಾರರು ಸತತ ಎರಡನೇ ಗೆಲವು ಸಂಪಾದಿಸಿದರು. ಇಂದು ನಡೆದ ಪಂದ್ಯದಲ್ಲಿ ಬಿಹಾರ ತಂಡ 4-3 ಗೋಲುಗಳಿಂದ ಅಸ್ಸಾಂ ತಂಡಕ್ಕೆ ಸೋಲುಣಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.