ನೈಟ್ರೈಡ್ಗೆ ಮುಂಬೈ ಸಿದ್ಧ

ಕಟಕ್: ಕಳೆದ ಪಂದ್ಯಗಳಲ್ಲಿ ಗೆಲವಿನ ಸವಿಯುಂಡಿರುವ ಕೋಲ್ಕತಾ ನೈಟ್ರೈಡರ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಪರಸ್ಪರ ಮುಖಾಮುಖಿಯಾಗಲಿದ್ದು, ಪ್ಲೇಆಫ್ ಸುತ್ತಿಗೆ ಪ್ರವೇಶಿಸುವ ನಿಟ್ಟಿನಲ್ಲಿ ಉಭಯ ತಂಡಗಳ ಕಾಳಗ ಕುತೂಹಲ ಮೂಡಿಸಿದೆ.
ಬುಧವಾರ ಇಲ್ಲಿನ ಬಾರಾಬತಿ ಕ್ರೀಡಾಂಗಣದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿದ್ದು, ಗೆಲವು ಯಾರ ಪಾಲಾಗಲಿದೆ ಎಂಬುದನ್ನು ಕಾದು ನೋಡಬೇಕು. ಕೋಲ್ಕತಾ ನೈಟ್ರೈಡರ್ಸ್ ಕಳೆದ ಪಂದ್ಯದಲ್ಲಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಗೆಲವು ದಾಖಲಿಸಿದರೆ, ಮುಂಬೈ ಇಂಡಿಯನ್ಸ್ ತಂಡ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಗೆಲವಿನ ನಗೆ ಬೀರಿತ್ತು. ಹಾಗಾಗಿ ಉಭಯ ತಂಡಗಳ ಆಟಗಾರರು ಈ ಪಂದ್ಯದಲ್ಲಿ ಆತ್ಮ ವಿಶ್ವಾಸದಿಂದ ಕಣಕ್ಕಿಳಿಯಲಿದ್ದಾರೆ.
ಇನ್ನು ಪಂದ್ಯಾವಳಿಯ ಆರಂಭಿಕ ಪಂದ್ಯದಲ್ಲಿ ಈ ಎರಡು ತಂಡಗಳು ಮುಖಾಮುಖಿಯಾಗಿದ್ದು, ಕೆಕೆಆರ್ ಗೆಲವಿನ ನಗೆ ಬೀರಿತ್ತು. ಹಾಗಾಗಿ ಮುಂಬೈ ತಂಡ ಸೋಡು ತೀರಿಸಿಕೊಳ್ಳಲು ಉತ್ತಮ ಅವಕಾಶವಿದೆ.
ಕೆಕೆಆರ್ ತಂಡ ಆರಂಭಿಕ ಹಂತದಲ್ಲಿ ಸ್ಥಿರ ಪ್ರದರ್ಶನ ನೀಡಲು ವಿಫಲವಾಗಿತ್ತಾದರೂ, ಕಳೆದೆರಡು ಪಂದ್ಯಗಳಲ್ಲಿನ ಗೆಲವು ತಂಡದಲ್ಲಿ ಸ್ಫೂರ್ತಿ ತುಂಬಿದೆ. ಆಡಿರುವ 9 ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆಲವು 5ರಲ್ಲಿ ಸೋಲನುಭವಿಸಿದ್ದು, 8 ಅಂಕಗಳ ಮೂಲಕ ನಾಲ್ಕನೇ ಸ್ಥಾನದಲ್ಲಿದೆ. ಈ ಮೂಲಕ ಕೆಕೆಆರ್ ಪ್ಲೇಆಫ್ ಸುತ್ತಿಗೆ ಪ್ರವೇಶಿಸುವ ತವಕದಲ್ಲಿದೆ.
ಇನ್ನು ಮುಂಬೈ ತಂಡದ ಪರಿಸ್ಥಿತಿ ನೋಡುವುದಾದರೆ, ಆಡಿರುವ ಕೇವಲ 3ರಲ್ಲಿ ಗೆಲವು ಹಾಗೂ 6ರಲ್ಲಿ ಸೋಲನುಭವಿಸುವ ಮೂಲಕ 6ನೇ ಸ್ಥಾನದಲ್ಲಿದೆಯಾದರೂ, ಪ್ಲೇಆಫ್ ಹಂತಕ್ಕ ಪ್ರವೇಶಿಸಲು ಸಾಕಷ್ಟು ಕಷ್ಟ ಪಡಬೇಕಿದೆ. ಆಟಗಾರರ ವಿಷಯಕ್ಕೆ ಬಂದರೆ, ನಾಯಕ ಗೌತಮ್ ಗಂಭಿರ್ ಆರಂಭಿಕ ಹಂತದಲ್ಲಿ ತೀವ್ರ ವೈಫಲ್ಯ ಅನುಭವಿಸಿದರೂ, ನಂತರ ರನ್ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಕರ್ನಾಟಕದ ಆಟಗಾರರಾದ ರಾಬಿನ್ಉತ್ತಪ್ಪ ಹಾಗೂ ಮನೀಶ್ ಪಾಂಡೆ ಉತ್ತಮ ರೀತಿಯಲ್ಲಿ ತಮ್ಮ ಜವಾಬ್ದಾರಿ ನಿರ್ವಹಿಸಿದ್ದಾರೆ.
ಇನ್ನು ವಿದೇಶಿ ಆಟಗಾರರ ಪಟ್ಟಿಯಲ್ಲಿ ಆಲ್ರೌಂಡರ್ ಜಾಕ್ ಕಾಲಿಸ್ ಅನುಭವ, ಶಕಿಬ್ ಅಲ್ ಹಸನ್ ಪ್ರದರ್ಶನ ತಂಡಕ್ಕೆ ಬೆನ್ನೆಲುಬಾಗಿದೆ. ಇನ್ನು ಸುನಿಲ್ ನಾರಾಯಣ್ ತಂಡದ ಟ್ರಂಪ್ ಕಾರ್ಡ್ ಬೌಲರ್ ಆಗಿದ್ದಾರೆ.
ಉಳಿದಂತೆ ಬೌಲಿಂಗ್ ವಿಭಾಗದಲ್ಲಿ ಮಾರ್ನ್ ಮಾರ್ಕೆಲ್, ವಿನಯ್ ಕುಮಾರ್, ಉಮೇಶ್ ಯಾದವ್ ವೇಗದ ಅಸ್ತ್ರಗಳಾಗಿದ್ದಾರೆ. ನಾರಾಯಣ್ ಜತೆಗೆ ಪಿಯೂಷ್ ಚಾವ್ಲಾ ಸ್ಪಿನ್ ವಿಭಾಗದಲ್ಲಿ ಜವಾಬ್ದಾರಿ ನಿರ್ವಹಿಸಲಿದ್ದಾರೆ.
ಇನ್ನು ಮುಂಬೈ ತಂಡದಲ್ಲಿ ಸಿಮನ್ಸ್ ಹಾಗೂ ಸಿ.ಎಂ ಗೌತಮ್ ತಂಡಕ್ಕೆ ಉತ್ತಮ ಆರಂಭ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ನಂತರ ಅಂಬಟಿ ರಾಯುಡು, ರೋಹಿತ್ ಶರ್ಮಾ, ಪೊಲಾರ್ಡ್ರಂತಹ ಬ್ಯಾಟ್ಸ್ಮನ್ಗಳನ್ನು ಹೊಂದಿದೆ.
ಬೌಲಿಂಗ್ನಲ್ಲಿ ಲಸಿತ್ ಮಾಲಿಂಗ ಅವರ ಸ್ಪೆಲ್ ಬಳಕೆ ತಂಡಕ್ಕೆ ಮಹತ್ವದ ಪಾತ್ರ ವಹಿಸಲಿದೆ. ಇನ್ನು ಜಸ್ಪ್ರಿತ್ ಬುಮ್ರಾ, ಪ್ರವೀಣ್ ಕುಮಾರ್ ಕಳೆದ ಪಂದ್ಯಗಳಲ್ಲಿ ಉತ್ತಮ ಲಯ ಕಂಡುಕೊಂಡಿದ್ದಾರೆ. ಇನ್ನು ಹರ್ಭಜನ್ ಹಾಗೂ ಪ್ರಗ್ಯಾನ್ ಓಜಾ ಸ್ಪಿನ್ ವಿಭಾಗದ ಅಸ್ತ್ರಗಳಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


