ಕ್ರೀಡೆ

ಸೂಪರ್ ಆಟಕ್ಕೆ ಮನಸೋತ ರಾಯಲ್ಸ್

ಸೂಪರ್ ಆಟಕ್ಕೆ ಮನಸೋತ ರಾಯಲ್ಸ್
Published On :

ರಾಂಚಿ: ಸಂಘಟಿತ ಪ್ರದರ್ಶನ ನೀಡುವ ಮೂಲಕ ಎರಡು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ಟಿ-20 ಪಂದ್ಯಾವಳಿಯಲ್ಲಿ ಮತ್ತೊಂದು ಅಧಿಕಾರಯುತ ಗೆಲವು ಸಂಪಾದಿಸಿದೆ.
ಜೆಎಸ್ಸಿಎ ಅಂತಾರಾಷ್ಟ್ರೀಯ ಕ್ರೀಡಾಂಗಣದ ಸಂಕೀರ್ಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 5 ವಿಕೆಟ್ಗಳಿಂದ ರಾಜಸ್ಥಾನ ರಾಯಲ್ಸ್ ಪಡೆಯ ವಿರುದ್ಧ ಜಯಭೇರಿ ಬಾರಿಸಿತು. ಗೆಲ್ಲಲು 149 ರನ್ಗಳ ಗುರಿ ಪಡೆದಿದ್ದ ಚೆನ್ನೈ 19.4 ಓವರುಗಳಲ್ಲಿ 5 ವಿಕೆಟ್ ಕಳೆದುಕೊಂಡು ದಡ ಸೇರುವಲ್ಲಿ ಯಶಸ್ವಿಯಾಯಿತು. ಆರಂಭಿಕ ಡ್ವೈನ್ ಸ್ಮಿತ್ (44ರನ್, 35 ಎಸೆತ, 5 ಬೌಂಡರಿ, 2 ಸಿಕ್ಸರ್), ಮಧ್ಯಮ ಕ್ರಮಾಂಕದಲ್ಲಿ ಫಫ್ ಡು ಪ್ಲೆಸಿಸ್ (38ರನ್, 39 ಎಸೆತ, 2 ಬೌಂಡರಿ) ಮತ್ತು ಕೆಳಕ್ರಮಾಂಕದಲ್ಲಿ ನಾಯಕ ಮಹೇಂದ್ರ ಸಿಂಗ್ ಧೋನಿ (ಅಜೇಯ 26, 16 ಎಸೆತ, 1 ಬೌಂಡರಿ, 1 ಸಿಕ್ಸರ್) ಉಪಯುಕ್ತ ಕಾಣಿಕೆ ನೀಡುವ ಮೂಲಕ ತಮ್ಮ ತಂಡಕ್ಕೆ ನಿರೀಕ್ಷಿತ ಗೆಲವು ತಂದುಕೊಟ್ಟರು.
ರಾಜಸ್ಥಾನ ಗೌರವ ಮೊತ್ತ: ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ರಾಜಸ್ಥಾನ ರಾಯಲ್ಸ್ ತಂಡ 20 ಓವರುಗಳಲ್ಲಿ 8 ವಿಕೆಟ್ ನಷ್ಟಕ್ಕೆ 148 ರನ್ಗಳ ಗೌರವ ಮೊತ್ತ ಕಲೆಹಾಕಿತು.
ಆರಂಭಿಕರಾದ ಶೇನ್ ವ್ಯಾಟ್ಸನ್ (51ರನ್, 36 ಎಸೆತ, 3 ಬೌಂಡರಿ, 4 ಸಿಕ್ಸರ್) ಮತ್ತು ಅಂಕಿತ್ ಶರ್ಮಾ (30ರನ್, 27 ಎಸೆತ, 4 ಬೌಂಡರಿ, 1 ಸಿಕ್ಸರ್) ಮೊದಲ ವಿಕೆಟ್ಗೆ 7.5 ಓವರುಗಳಲ್ಲಿ 60 ರನ್ ಪೇರಿಸಿ ತಂಡಕ್ಕೆ ಉತ್ತಮ ಆರಂಭ ನೀಡಿದರು. ಆದರೆ, ಮಧ್ಯಮ ಕ್ರಮಾಂಕದಲ್ಲಿ ಸ್ಟುವರ್ಟ್ ಬಿನ್ನಿ (22ರನ್, 17 ಬೌಂಡರಿ, 2 ಸಿಕ್ಸರ್) ಬಿಟ್ಟರೆ, ಇತರೆ ಬ್ಯಾಟ್ಸ್ಮನ್ಗಳ ದಯನೀಯ ವೈಫಲ್ಯದಿಂದಾಗಿ ರಾಜಸ್ಥಾನ ತಂಡ ಬೃಹತ್ ಮೊತ್ತ ಪೇರಿಸುವ ಮೂಲಕ ಉತ್ತಮ ಅವಕಾಶವನ್ನು ಕೈಚೆಲ್ಲಿತು.
ಈ ಮಧ್ಯೆ ಬ್ಯಾಟಿಂಗ್ನಲ್ಲಿ ಬಡ್ತಿ ಪಡೆದು ಆರಂಭಿಕ ಆಟಗಾರನಾಗಿ ಕಣಕ್ಕಿಳಿದ ನಾಯಕ ಶೇನ್ ವ್ಯಾಟ್ಸನ್ ನಿರಾಸೆ ಮೂಡಿಸಲಿಲ್ಲ. ಈ ಋುತುವಿನಲ್ಲಿ ವೈಯಕ್ತಿಕ ಉತ್ತಮ ಮೊತ್ತ ಗಳಿಸಿದ ವ್ಯಾಟ್ಸನ್ ಅರ್ಧಶತಕ ಬಾರಿಸಿ ಗಮನ ಸೆಳೆದರು. ಈ ಮುನ್ನ ಅವರು ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಶಾರ್ಜಾದಲ್ಲಿ ನಡೆದ ಪಂದ್ಯದಲ್ಲಿ 50 ರನ್ಗಳಿಸಿದ್ದು ಈ ಋುತುವಿನ ಗರಿಷ್ಠ ಮೊತ್ತವಾಗಿತ್ತು. ಚೆನ್ನೈ ಪರ ಉತ್ತಮ ದಾಳಿ ನಡೆಸಿದ ಮೋಹಿತ್ ಶರ್ಮಾ 3, ರವೀಂದ್ರ ಜಡೇಜಾ 2 ವಿಕೆಟ್ ಪಡೆದರು. ತಮ್ಮ 4 ಓವರುಗಳಲ್ಲಿ ಕೇವಲ 18 ರನ್ ನೀಡಿದ ಜಡೇಜಾ ಪಂದ್ಯಶ್ರೇಷ್ಠ ಗೌರವ ಪಡೆದರು.



ಸ್ಕೋರ್ ವಿವರ



ರಾಜಸ್ಥಾನ ರಾಯಲ್ಸ್ 20 ಓವರುಗಳಲ್ಲಿ 8 ವಿಕೆಟ್ಗೆ 148
ಅಂಕಿತ್ ಶರ್ಮಾ ಸಿ ಡ್ವೈನ್ ಸ್ಮಿತ್ ಬಿ ಅಶ್ವಿನ್ 30, ಶೇನ್ ವ್ಯಾಟ್ಸನ್ ಬಿ ಶರ್ಮಾ 51, ಅಜಿಂಕ್ಯಾ ರಹಾನೆ ರನೌಟ್ 4, ಕರುಣ್ ನಾಯರ್ ಬಿ ಬದ್ರಿ 8, ಸ್ಟುವರ್ಟ್ ಬಿನ್ನಿ ಸಿ ಪ್ಲೆಸಿಸ್ ಬಿ ಜಡೇಜಾ 22, ಸ್ಟೀವನ್ ಸ್ಮಿತ್ ಬಿ ಶರ್ಮಾ 9, ಜೇಮ್ಸ್ ಫಾಕ್ನರ್ ಬಿ ಜಡೇಜಾ 1, ದಿಶಂತ್ ಯಗ್ನಿಕ್ ಅಜೇಯ 4, ರಜತ್ ಭಾಟಿಯಾ ಸಿ ಡ್ವೈನ್ ಸ್ಮಿತ್ ಬಿ ಶರ್ಮಾ 7, ಕೆವೊನ್ ಕೂಪರ್ ಅಜೇಯ 0. ಇತರೆ: (ಬೈ-1, ಲೆಗ್ಬೈ-3, ವೈ-8) 12.
ವಿಕೆಟ್ ಪತನ: 1-60, 2-86, 3-99, 4-114, 5-133, 6-136, 7-137, 8-147.
ಬೌಲಿಂಗ್ ವಿವರ: ಸ್ಯಾಮುಯೆಲ್ ಬದ್ರಿ 4-0-19-1, ಈಶ್ವರ ಪಾಂಡೆ 3-0-18-0, ಮೋಹಿತ್ ಶರ್ಮಾ 4-0-31-3, ಆರ್. ಅಶ್ವಿನ್ 4-0-39-1, ರವೀಂದ್ರ ಜಡೇಜಾ 4-0-18-2, ವಿಜಯ್ ಶಂಕರ್
1-0-19-0.
ಚೆನ್ನೈ ಸೂಪರ್ ಕಿಂಗ್ಸ್  19.4 ಓವರುಗಳಲ್ಲಿ 5 ವಿಕೆಟ್ಗೆ 149
ಡ್ವೇನ್ ಸ್ಮಿತ್ ಸಿ ಯಗ್ನಿಕ್ ಬಿ ಕೂಪರ್ 44, ಬ್ರೆಂಡನ್ ಮೆಕಲಂ ಸಿ ನಾಯರ್ ಬಿ ಅಂಕಿತ್ 6, ಸುರೇಶ್ ರೈನಾ ಸಿ ಭಾಟಿಯಾ ಬಿ ಅಂಕಿತ್ 2, ಫಫ್ ಡು ಪ್ಲೆಸಿಸ್ ಬಿ ಫಾಕ್ನರ್ 38, ಆರ್. ಅಶ್ವಿನ್ ಬಿ ಭಾಟಿಯಾ 14, ಮಹೇಂದ್ರ ಸಿಂಗ್ ಧೋನಿ ಅಜೇಯ 26, ರವೀಂದ್ರ ಜಡೇಜಾ ಅಜೇಯ 11.
ಇತರೆ: (ಲೆಗ್ಬೈ-3, ವೈ-5) 8.
ವಿಕೆಟ್ ಪತನ: 1-20, 2-41, 3-76, 4-105, 5-121.
ಬೌಲಿಂಗ್ ವಿವರ: ಅಂಕಿತ್ ಶರ್ಮಾ 4-0-20-2, ಜೇಮ್ಸ್ ಫಾಕ್ನರ್ 3.4-0-37-1, ಪ್ರವೀಣ್ ತಾಂಬೆ 4-0-34-0, ಕೆವೊನ್ ಕೂಪರ್ 4-0-25-1, ರಜತ್ ಭಾಟಿಯಾ 4-0-30-1.


ಪಂದ್ಯಶ್ರೇಷ್ಠ: ರವೀಂದ್ರ ಜಡೇಜಾ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.