ಕೆಕೆಆರ್ಗೆ 142 ರನ್ ಗುರಿ

ಕಟಕ್: ಕೋಲ್ಕತಾ ನೈಟ್ ರೈಡರ್ಸ್ ಬೌಲರ್ಗಳ ಕರಾರುವಾಕ್ ದಾಳಿ ಎದುರಿಸಲು ಪರದಾಡಿದ ಮುಂಬೈ ಇಂಡಿಯನ್ಸ್ ಆಟಗಾರರು 5 ವಿಕೆಟ್ ನಷ್ಟಕ್ಕೆ 141 ರನ್ಗಳ ಸಾಧಾರಣ ಮೊತ್ತ ಕಲೆಹಾಕಲಷ್ಟೇ ಶಕ್ತರಾಗಿದ್ದಾರೆ.
ಇಲ್ಲಿನ ಬಾರಾಬತಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಮುಂಬೈ ಇಂಡಿಯನ್ಸ್ ನಿರೀಕ್ಷಿತ ಮಟ್ಟದಲ್ಲಿ ಅಬ್ಬರಿಸಲು ವಿಫಲವಾಯಿತು.
ಆದಾಗ್ಯೂ ಕೂಡ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ಗಳಾದ ನಾಯಕ ರೋಹಿತ್ ಶರ್ಮಾ ಅರ್ಧಶತಕ (51ರನ್, 45 ಎಸೆತ, 4 ಬೌಂಡರಿ, 2 ಸಿಕ್ಸರ್) ಮತ್ತು ಅಂಬಟಿ ರಾಯುಡು ಅವರ ಉಪಯುಕ್ತ
33 ರನ್ಗಳ (27 ಎಸೆತ, 3 ಬೌಂಡರಿ, 1 ಸಿಕ್ಸರ್) ನೆರವಿಂದ ಮುಂಬೈ ಪಡೆ ಚೇತರಿಸಿಕೊಂಡಿತು.
ಮುಂಬೈ ಆರಂಭ ಉತ್ತಮವಾಗಿರಲಿಲ್ಲ. ಮೊತ್ತ 35 ರನ್ಗಳಾಗುವಷ್ಟರಲ್ಲಿ ಆರಂಭಿಕ ಆಟಗಾರರಾದ ಲೆಂಡ್ಲ್ ಸಿಮನ್ಸ್ ಮತ್ತು ಸಿ.ಎಂ. ಗೌತಮ್ ವಿಕೆಟ್ ಕಳೆದುಕೊಂಡಿತು. ಇನ್ನು ಕೆಳಕ್ರಮಾಂಕದಲ್ಲಿ ಕೂಡ
ಕೋರೆ ಆ್ಯಂಡರ್ಸನ್ ಮತ್ತು ಕೀರನ್ ಪೊಲಾರ್ಡ್ ನಿರೀಕ್ಷಿತ ಮಟ್ಟದಲ್ಲಿ ಅಬ್ಬರಿಸಲಿಲ್ಲ.
ಕೋಲ್ಕತಾ ಪರ ಉತ್ತಮ ದಾಳಿ ಸಂಘಟಿಸಿದ ಮೊರ್ನ್ ಮಾರ್ಕೆಲ್ 2 ವಿಕೆಟ್ ಉರುಳಿಸಿದರೆ, ಶಕೀಬ್ ಅಲ್ ಹಸನ್, ಸುನೀಲ್ ನಾರಾಯಣ ಮತ್ತು ಪಿಯೂಶ್ ಚಾವ್ಲಾ ತಲಾ 1 ವಿಕೆಟ್ ಕಬಳಿಸಿದರು.
ಸ್ಕೋರ್ ವಿವರ
ಮುಂಬೈ ಇಂಡಿಯನ್ಸ್
20 ಓವರುಗಳಲ್ಲಿ 5 ವಿಕೆಟ್ಗೆ 141
ಸಿಮನ್ಸ್ ಬಿ ಶಕೀಬ್ 12, ಸಿ.ಎಂ. ಗೌತಮ್ ಸಿ ಯಾದವ್ ಬಿ ಮಾರ್ಕೆಲ್ 8, ಅಂಬಟಿ ರಾಯುಡು ಸಿ ಯಾದವ್ ಬಿ ಚಾವ್ಲಾ 33, ರೋಹಿತ್ ಶರ್ಮಾ ಬಿ ನಾರಾಯಣ್ 51, ಕೋರೆ ಆ್ಯಂಡರ್ಸನ್ ಸಿ ಚಾವ್ಲಾ ಬಿ ಮಾರ್ಕೆಲ್ 18, ಕೀರನ್ ಪೊಲಾರ್ಡ್ ಅಜೇಯ 10, ಆದಿತ್ಯ ತಾರೆ ಅಜೇಯ 2. ಇತರೆ: (ಲೆಗ್ಬೈ-1, ವೈ-5, ನೋಬಾಲ್-1) 7.
ವಿಕೆಟ್ ಪತನ: 1-12, 2-35, 3-70, 4-115, 5-138.
ಬೌಲಿಂಗ್ ವಿವರ: ಮಾರ್ಕೆಲ್ 4-0-35-2, ಉಮೇಶ್ 3-0-24-0, ಶಕೀಬ್ 4-0-21-1, ನಾರಾಯಣ್ 4-0-18-1, ಚಾವ್ಲಾ 4-0-32-1, ಯೂಸುಫ್ 1-0-10-0.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


